ಜಾಗತಿಕ ಮಟ್ಟದ ಜ್ಞಾನಕ್ಕೆ ಕಂಪ್ಯೂಟರ್ ಜೀವಾಳ – ಮಾಲಾ ಕಣ್ಣಿ

ಜಾಗತಿಕ ಮಟ್ಟದ ಜ್ಞಾನಕ್ಕೆ ಕಂಪ್ಯೂಟರ್ ಜೀವಾಳ – ಮಾಲಾ ಕಣ್ಣಿ

ಜಾಗತಿಕ ಮಟ್ಟದ ಜ್ಞಾನಕ್ಕೆ ಕಂಪ್ಯೂಟರ್ ಜೀವಾಳ – ಮಾಲಾ ಕಣ್ಣಿ

ಕಲಬುರಗಿ: “ಸರಕಾರಿ ಶಾಲೆಯ ಮಕ್ಕಳು ಜಾಗತಿಕ ಮಟ್ಟದ ಜ್ಞಾನವನ್ನು ಪಡೆದುಕೊಳ್ಳಬೇಕಾದರೆ ಇಂದಿನ ಯುಗದಲ್ಲಿ ಕಂಪ್ಯೂಟರ್ ಮಹತ್ತರ ಪಾತ್ರ ವಹಿಸುತ್ತದೆ,” ಎಂದು ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥೆ ಮಾಲಾ ಕಣ್ಣಿ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಟ್ರಸ್ಟ್ ವತಿಯಿಂದ ಒಂದು ಕಂಪ್ಯೂಟರ್‌ನ್ನು ದೇಣಿಗೆಯಾಗಿ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು, “ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಬಾರದು,” ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಶಾಲೆಯ ಮುಖ್ಯಗುರು ಗೀತಾ ಕುಲಕರ್ಣಿ ಮಾತನಾಡಿ, “ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ನೀಡುವುದು ಶೈಕ್ಷಣಿಕ ಅಭಿವೃದ್ಧಿಗೆ ಅತ್ಯಂತ ಅಗತ್ಯ,” ಎಂದು ಹೇಳಿದರು.

ಕಂಪ್ಯೂಟರ್ ವಿತರಣಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಈಶ್ವರಮ್ಮ, ಮಹಾದೇವಿ, ಲಕ್ಷ್ಮೀಬಾಯಿ ಕಸ್ತೂರಿ, ಸುಜಾತಾ ಅವರು ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಮುಖಂಡರಾದ ಅಂಬುಜಾ ಎಂ.ಡಿ., ಶೀಲಾ ಕಲಬುರಗಿ, ವೈಶಾಲಿ ನಾಟಿಕರ್, ಸ್ವಾತಿ ಮಹಾಗವ್ಕರ್, ಲಿಂಗರಾಜ ಡಾಂಗೆ, ಆನಂದತೀರ್ಥ ಜೋಶಿ, ಸುಭಾಷ್ ಮೇತ್ರೆ, ಶಶಿಕುಮಾರ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರಾದ ಸಿದ್ದರಾಮ ಬೇತಾಳೆ ನಿರೂಪಿಸಿ ವಂದಿಸಿದರು.

ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ ಅವರಿಂದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ನೀಡಲಾಗಿದೆ.ಈ ಸೇವಾಭಾವನೆ ಶ್ಲಾಘನೀಯ.ಸಮುದಾಯದ ಮುಖಂಡರು ಟ್ರಸ್ಟ್‌ಗೆ ಧನಸಹಾಯ ಮಾಡಿ ಇನ್ನೂ ಅನೇಕ ಶಾಲೆಗಳಿಗೆ ಸಹಾಯ ಮಾಡಲಿ.

ಸುರೇಶ ಬಡಿಗೇರ, ಕಲಬುರ್ಗಿ

ಮಾಜಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು