ಭೀಮಣ್ಣ ಬೋನಾಳ ಅವರಿಗೆ ಗೌರವ ಸನ್ಮಾನ
ಭೀಮಣ್ಣ ಬೋನಾಳ ಅವರಿಗೆ ಗೌರವ ಸನ್ಮಾನ
ಕಲಬುರಗಿ: ಕಾಯಕ ಶರಣರ ಸಮಾಜಗಳ ಒಕ್ಕೂಟ ರಿಜಿಸ್ಟರ್ಡ್ ಕಲಬುರಗಿ ಮತ್ತು ಹೈದರಾಬಾದ್ ಕರ್ನಾಟಕ ಶರಣ ಡೋರ ಕಕ್ಕಯ್ಯ ಉಭಯ ಸಂಘದಿಂದ ಕಲಬುರಗಿ ಜಿಲ್ಲಾ ಆಡಳಿತದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಹಿರಿಯ ಸಾಹಿತಿಗಳಾದ ಮತ್ತು ಕಾಯಕ ಶರಣರ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಭೀಮಣ್ಣ ಬೋನಾಳ ಅವರನ್ನು ಇಲ್ಲಿಯ ಡೋಹರಗಲ್ಲಿಯ ಶರಣ ಡೋರ್ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ಕಮಿಟಿಯಲ್ಲಿ ಗೌರವದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಭಯ ಸಂಘದ ಪದಾಧಿಕಾರಿಗಳಾದ ಸಾಯಬಣ್ಣ ಹೋಳ್ಕರ್, ಮಲ್ಲಿಕಾರ್ಜುನ ಬಿ ಹೇಳವರ್, ಶಿವಲಿಂಗಪ್ಪ ಗೌಳಿ, ಬಾಬುರಾವ್ ಕಟ್ಟಿಗೆ, ಹಿರಗಪ್ಪ ಪೂಜಾರಿ ಉಪಸ್ಥಿತರಿದ್ದರು.