ವಾಡಿ ಬಿಜೆಪಿ ಕಛೇರಿಯಲ್ಲಿ ಗಾಂಧಿ ಜಿ 155ನೇ ಹಾಗೂ ಶಾಸ್ತ್ರಿ ಜಿ 120ನೆ ಜಯಂತಿ ಆಚರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಗಾಂಧಿ ಜಿ 155ನೇ ಹಾಗೂ ಶಾಸ್ತ್ರಿ ಜಿ 120ನೆ ಜಯಂತಿ ಆಚರಣೆ

ವಾಡಿ ಬಿಜೆಪಿ ಕಛೇರಿಯಲ್ಲಿ ಗಾಂಧಿ ಜಿ 155ನೇ ಹಾಗೂ ಶಾಸ್ತ್ರಿ ಜಿ 120ನೆ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ದೇಶದ ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ ಜಿ ಲಾಲ ಬಹಾದ್ದೂರ ಶಾಸ್ತ್ರಿ ಜಿ ಅವರ ಜಯಂತಿ ಆಚರಿಸಲಾಯಿತು.

ಈ ವೇಳೆ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ರಾಷ್ಟ್ರದ ನಾಯಕರು ಗಳ ಜಯಂತಿಯ ಪವಿತ್ರ ದಿನವಾದ ಇಂದು ದೇಶಾದ್ಯಂತ ಸ್ವಚ್ಛತಾ ಕಾರ್ಯದೊಂದಿ ಹಮ್ಮಿಕೊಳ್ಳಲಾಗಿದೆ.

ಮಹಾತ್ಮಾ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ವಿನಮ್ರ ನಮನಗಳು ಅರ್ಪಿಸುತ್ತೇವೆ. ಬಾಪೂ ಅವರ ಜೀವನ ಮತ್ತು ಆದರ್ಶ ದೇಶದ ಪ್ರತಿಯೊಬ್ಬರೂ ಕರ್ತವ್ಯ ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡುತ್ತದೆ. ಗಾಂಧಿಯವರ ಆದರ್ಶ ತತ್ವಗಳು ಇಡೀ ಜಗತ್ತೆ ಕೊಂಡಾಡುತ್ತಿದೆ ಹಾಗೂ ಕೋಟ್ಯಂತರ ಜನಕ್ಕೆ ಪ್ರೇರಣೆಯಾಗಿದೆ.ಇನ್ನು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಮೌಲ್ಯಗಳು ಮತ್ತು ತತ್ವಗಳನ್ನಾದರಿಸಿದ ಜೀವನವು ದೇಶವಾಸಿಗಳಲ್ಲಿ ಸ್ಪೂರ್ತಿಯ ಸೆಲೆಯಾಗಿದೆ.

ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾಧ ಭಾರತದ ಏಕೈಕ ಪ್ರಧಾನಿ.ತಮ್ಮ ಸರಳ ರಾಜಕೀಯ ಜೀವನದಿಂದ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಮುಖಂಡರಾದ ವಿಠಲ ವಾಲ್ಮೀಕ ನಾಯಕ,ಸಿದ್ದಣ್ಣ ಕಲ್ಲಶೆಟ್ಟಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಯಂಕಮ್ಮ ಗೌಡಗಾಂವ,ನಿರ್ಮಲ ಇಂಡಿ,ಶಿವಶಂಕರ ಕಾಶೆಟ್ಟಿ, ಅಶೋಕ ಪವಾರ,ರಿಚರ್ಡ್ ಮಾರೆಡ್ಡಿ,ಆನಂದ ಇಂಗಳಗಿ, ಹೀರಾ ನಾಯಕ, ಮಲ್ಲಿಕಾರ್ಜುನ ಸಾತಖೇಡ, ಭೀಮಾಶಂಕರ ಶಿರವಾಳ ಸೇರಿದಂತೆ ಇತರರು ಇದ್ದರು.