ಕನ್ನಡ ನಾಮಫಲಕಗಳನ್ನು ತೆರವುಗೊಳಿಸಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ

ಕನ್ನಡ ನಾಮಫಲಕಗಳನ್ನು ತೆರವುಗೊಳಿಸಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ
ಕಲಬುರಗಿ ನಗರದಲ್ಲಿ ಕಣ್ಣಿ ಮಾರುಕಟ್ಟೆ ಎಂ.ಎಸ್.ಕೆ. ಮಿಲ್ ಪ್ರದೇಶದಲ್ಲಿ ಕಟ್ಟಡಗಳ ಮೇಲಿದ್ದ ಕನ್ನಡ ನಾಮಫಲಕಗಳನ್ನು ತೆರವುಗೊಳಿಸಿದ್ದ ಸಂಬAಧಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಕೂಡಲೇ ಮೊದಲು ಕನ್ನಡಕ್ಕೆ ಆದ್ಯತೆ ಕೊಟ್ಟು ಕರ್ನಾಟಕ ಸರ್ಕಾರದ ಆದೇಶದ ವರದಿಯಂತೆ ಶೇ: 60% ರಷ್ಟು ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಕ್ಕೆ ಅವಮಾನ ಮಾಡಿದರೇ ಕನ್ನಡಿಗರಿಗೆ ಅವಮಾನ ಮಾಡಿದಂತೆ ಇಲ್ಲಿಯ ಗಾಳಿ ನೀರು ಅನ್ನ ತಿಂದು ಕನ್ನಡಕ್ಕೆ ಅವಮಾನ ಮಾಡಿದಂಥ ಅಧಿಕಾರಿ ಕನ್ನಡಿಗರ ಭಾವಣೆಗಳಿಗೆ ಧಕ್ಕೆ ತಂದAತಾಗಿದೆ. ಮೊದಲು ಕನ್ನಡಕ್ಕೆ ಆದ್ಯತೆ ಕೊಡದಂತಹ, ಕನ್ನಡದ ವಿಚಾರವಾಗಿ ಉಡಾಫೆ ಮಾತನ್ನು ಆಡಿದಂತಹ ಅಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು ಮತ್ತು ಕೂಡಲೇ ಕನ್ನಡದ ನಾಮಫಲಕ ಕಣ್ಣಿ ಮಾರುಕಟ್ಟೆ ಪ್ರದೇಶದಲ್ಲಿ ಕಟ್ಟಡಗಳ ಮೇಲಿದ್ದ ಕನ್ನಡ ನಾಮಫಲಕವನ್ನು ಶೇ: 60% ನಾಮಫಲಕ ಅಳವಡಿಸಬೇಕು. ಇಲ್ಲವಾದರೆ ತಮ್ಮ ಕಚೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ ಮುಂದಿನ ಆಗುಹೋಗುಗಳಿಗೆ ತಾವುಗಳು ನೇರ ಹಾಗೂ ಸಂಪೂರ್ಣ ಜವಾಬ್ದಾರರಾಗುತ್ತಿರಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆಯ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ ಎಸ್ ರಾಂಪುರ, ಜಿಲ್ಲಾ ಹಿರಿಯ ಸಲಹೆಗಾರ ಗಣಪತಿ ಪುಲಾರಿ, ಯುವ ಘಟಕದ ಅಧ್ಯಕ್ಷ ನಾಗರಾಜ ಮ್ಯಾತ್ರಿ, ಉಪಾಧ್ಯಕ್ಷ ಬಸವರಾಜ್ ಜಿ, ಕಲಬುರಗಿ ತಾಲೂಕ ಅಧ್ಯಕ್ಷ ಕಲ್ಯಾಣ ತಳವಾರ್, ತಾಲೂಕು ಗೌರವಾಧ್ಯಕ್ಷ ಅಲ್ಲಿಸ್ ಅಗಸಿಮನಿ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಟೈಗರ್, ವಿಶ್ವನಾಥ ಆರ್ ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ದೊಡ್ಡಮನಿ, ಕಾರ್ಯದರ್ಶಿ ಸತೀಶ್ ಪುಲೆ, ಚಿಂಚೋಳಿ ತಾಲೂಕು ಘಟಕ ಅಧ್ಯಕ್ಷ ಪಾವನ ದೊಡ್ಡಮನಿ, ನಗರ ರೈತ ಘಟಕ ಅಧ್ಯಕ್ಷ ಶಿವಪ್ಪ ಹುಡುಗಿ, .ವಾರ್ಡ್ 54ರ ಅಧ್ಯಕ್ಷ ಸಚಿನ ತಳವಾರ್ ಇದ್ದರು.