ಲಂಡನ್ ಬ್ರುನೆಲ್ ವಿವಿಗೆ ಮೋದಿ ಆಯ್ಕೆ: ಹರ್ಷ
ಲಂಡನ್ ಬ್ರುನೆಲ್ ವಿವಿಗೆ ಮೋದಿ ಆಯ್ಕೆ: ಹರ್ಷ
ಕಲಬುರಗಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ ಅವರ ಪುತ್ರ ಮಲ್ಲಿಕಾರ್ಜುನ ಮೋದಿ ಅವರು ಲಂಡನ್ ಬ್ರುನೆಲ್ ವಿಶ್ವವಿದ್ಯಾಲಯದ ಎನ್ವಿರಾನ್ ಮೆಂಟಲ್ ಆ್ಯಂಡ ಎತಿಕ್ಸ ಆಫೀಸರ್ ಆಗಿ ನೇಮಕ ಆಗಿರುವುದಕ್ಕೆ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ವಿಶ್ವವಿದ್ಯಾಲಯದ ಎನ್ವಿರಾನ್ ಮೆಂಟಲ್ ಆ್ಯಂಡ್ ಎತಿಕ್ಸ ಆಫೀಸರ್ ಚುನಾವಣೆಗೆ ಸ್ಪರ್ದಿಸಿ ಭಾರೀ ಬಹುಮತದೊಂದಿಗೆ ಆಯ್ಕೆಗೊಂಡು, ಕಲಬುರಗಿ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದಾರೆ.2021 ರಲ್ಲಿ ಬ್ರುನೆಲ್ ವಿವಿಗೆ ಪ್ರವೇಶ ಪಡೆದ ಮಲ್ಲಿಕಾರ್ಜುನ ಮೋದಿ ಅವರು ಬ್ರುನೆಲ್ ನಲ್ಲಿರುವ ಕನ್ನಡಿಗರಿಗಾಗಿ ಕರ್ನಾಟಕ ಸೂಸೈಟಿ ಆರಂಭಿಸಿದ ಅವರು,ಇವರ ಕಾರ್ಯಕ್ಕೆ ಸಹಪಾಠಿಗಳು ಹಾಗೂ ಅವರ ತಂದೆಯವರಾದ ಮಾಜಿ ಮೇಯರ ಶರಣಕುಮಾರ ಮೋದಿ ಅವರು ಮಗನ ಸಾಧನಗೆ ಸಾಥ ನೀಡಿದ್ದಾರೆ.
ನಮ್ಮ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಿಂದ ಲಂಡನ್ ಗೆ ತೆರಳಿ ವಿದ್ಯಾಬ್ತಾಸ ಜೊತೆಗೆ ಬ್ರುನೆಲ್ ವಿಶ್ವವಿದ್ಯಾಲಕ್ಕೆ ಆಯ್ಕೆಯಾಗಿದ್ದಾರೆ.ಇದರ ಜೊತೆ ಶರಣರ ನಾಡಿನ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ ಮಲ್ಲಿಕರ್ಜುನ ಮೋದಿ ಅವರು ಲಂಡನ್ ಬ್ರುನೆಲ್ ವಿವಿಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಯಗಳಿಸಿದ್ದು,ಜೊತೆ ಖುಷಿಪಡುವ ಹೆಮ್ಮೆಯ ವಿಷಯವಾಗಿದೆ.ಈ ಮೂಲಕ ನಮ್ಮ ನೆಲದ ಶಕ್ತಿ ಎಲ್ಲಾ ಕಡೆ ಹರಡಲಿ ಎಂಬುವುದು ಎಲ್ಲರ ಆಶಯ.ಅಧ್ಯಯನ ಮಾಡುವ ಸ್ಥಳದಲ್ಲಿ ಸೇವೆ ಸಲ್ಲಿಸುವ ಉತ್ತಮ ಅವಕಾಶ ಸಿಕ್ಕಿದ್ದು ನಮ್ಮ ಶರಣರ ನಾಡು ಕಲಬುರಗಿ ಜಿಲ್ಲೆಗೆ ಸಲ್ಲುತ್ತದೆ ಎಂದರು.
ಇಡೀ ದೇಶವನ್ನೇ ಕಲಬುರಗಿ ಜಿಲ್ಲೆ ಕಡೆಗೆ ತಿರುಗಿ ನೋಡುವಂತೆ ಮಾಡಿದ ನಮ್ಮ ಜಿಲ್ಲೆಯ ಯುವ ನಾಯಕ ಮಲ್ಲಿಕಾರ್ಜುನ ಮೋದಿ ಅವರಿಗೆ ಈ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.