ಸಹಕಾರ ಚಳುವಳಿಯಲ್ಲಿ ಯುವಕರ ಪಾತ್ರ ಮಹತ್ವದ್ದು ಶಾಸಕ ಶರಣು ಸಲಗಾರ

ಸಹಕಾರ ಚಳುವಳಿಯಲ್ಲಿ ಯುವಕರ ಪಾತ್ರ ಮಹತ್ವದ್ದು ಶಾಸಕ ಶರಣು ಸಲಗಾರ

ಸಹಕಾರ ಚಳುವಳಿಯಲ್ಲಿ ಯುವಕರ ಪಾತ್ರ ಮಹತ್ವದ್ದು; ಶಾಸಕ ಶರಣು ಸಲಗರ 

ಬಸವಕಲ್ಯಾಣ : ಸಹಕಾರ ಬೆಳವಣಿಗೆಯಲ್ಲಿ ಇಂದು ಯುವಕರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಶಾಸಕರಾದ ಶರಣು ಸಲಗರ ಅಭಿಪ್ರಾಯ ವ್ಯಕ್ತಪಡಿಸಿದರು 

 ಇಂದು ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಹಾಗೂ ಬೀದರ್ ಜಿಲ್ಲಾ ಸೌಹಾರ್ದ ಒಕ್ಕೂಟ ನಿಯಮಿತಿ ಬೀದರ್ ಹಾಗೂ ಬಸವಕಲ್ಯಾಣ ತಾಲೂಕಿನ ಸೌಹಾರ್ದ ಸಹಕಾರಿಗಳ ಆಶ್ರಯದಲ್ಲಿ ಜರುಗಿದ ಸೌಹಾರ್ದ ಕಾಯ್ದೆ ರಜಿತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಯುವಕರು ಮತ್ತು ಸಹಕಾರ ಕುರಿತದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ದೇಶದ ಬಹುದೊಡ್ಡ ಕ್ಷೇತ್ರವಾಗಿದ್ದ ಸಹಕಾರ ಕ್ಷೇತ್ರದಲ್ಲಿ ಇಂದು ಯುವ ಸಮುದಾಯ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಗುರುನಾಥ್ ಜಾಂತಿಕರ್ ಮಾತನಾಡುತ್ತ ದೇಶದ 120 ವರ್ಷದ ಇತಿಹಾಸ ಹೊಂದಿರುವ ಸಹಕಾರ ಚಳುವಳಿಯಲ್ಲಿ ಹಲವು ಏರಿಳಿತವನ್ನು ಕಂಡರೂ ಸಹ ಜನಸಾಮಾನ್ಯರ ನಿರೀಕ್ಷೆಯಂತೆ ಸಹಕಾರ ಕ್ಷೇತ್ರ ಬಲವರ್ಧನೆ ಹೊಂದಿರುವುದಿಲ್ಲ ಆದರೆ ಈ ಸಹಕಾರ ಕ್ಷೇತ್ರದ ಕೆಲ ನ್ಯೂನತೆಗಳನ್ನು ಅಂಶಗಳನ್ನು ಸರಿಪಡಿಸಿಕೊಂಡು ಕಳೆದ 25 ವರ್ಷದ ಹಿಂದೆ ಜಾರಿಗೆ ಬಂದ ಸೌಹಾರ್ದ ಸಹಕಾರಿ ಕಾಯ್ದೆ ಇಂದಿಗೆ ರಜತ ಮಹೋತ್ಸವ ಆಚರಿಸುತ್ತಿದೆ.ಈ ಕಾಯ್ದೆಯಿಂದ ಜನಸಾಮಾನ್ಯರಿಗೆ ವಿಶೇಷವಾಗಿ ಯುವ ಸಮುದಾಯ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲಕರವಾಗಿದೆ ಆದರೆ ಈ ಬೃಹತ್ ಆದಂತ ಸಹಕಾರ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯ ಪಾಲ್ಗೋಳ್ಳುವಿಕೆ ಅವಶ್ಯಕತೆ ಇದೆ ಯುವ ಸಮುದಾಯ ಆಗಮನದಿಂದಾಗಿ ಹೊಸ ಹೊಸ ಆಲೋಚನೆಗಳು ಹೊಸ ಹೊಸ ಸಹಕಾರಿ ಸಂಸ್ಥೆಗಳು ಪ್ರಾರಂಭಿಸಲು ಅನುಕೂಲಕರವಾಗುತ್ತದೆ ಆ ನಿಟ್ಟಿನಲ್ಲಿ ಸಂಯುಕ್ತ ಸಹಕಾರಿಯು ಈ ವರ್ಷ ರಾಜ್ಯದಂತ ಯುವ ಸಮುದಾಯಗಳಲ್ಲಿ ಸಹಕಾರ ಚಳುವಳಿ ಕುರಿತು ಜಾಗೃತಿ ಮಾಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಅದೇ ರೀತಿಯಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಬೆಳವಣಿಗೆಗೆ ಪ್ರೋತ್ಸಾಹ ನೀಡಿ ಹಲವು ಯೋಜನೆಗಳನ್ನು ಹಾಗೂ ಕ್ರಮಗಳನ್ನು ಅನುಸರಿಸುತ್ತಿದೆ ಆದ್ದರಿಂದ ಭಾರತದ ಭವಿಷ್ಯ ಸಹಕಾರ ಕ್ಷೇತ್ರದ ಮೇಲೆ ಹೊಂದಿದೆ ಆ ಹಿನ್ನೆಲೆಯಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಮುಖಾಂತರ ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು 

 ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ್ ಕೋರ್ಕೆ , ಕೋಶದ ಅಧ್ಯಕ್ಷರಾದ ರಾಜಕುಮಾರ್ ಹೊಳಕುಂದಿ ಕಾರ್ಯದರ್ಶಿ ವಿವೇಕಾನಂದ ಹಾದಲೂರೆ ಒಕ್ಕೂಟದ ನಿರ್ದೇಶಕರಾದ ಶಿವಬಸಪ್ಪ ಚನ್ನಮಲ್ಲೆ, ಸಂಜಿ ಕುಮಾರ್ ಸಜ್ಜನ್,ಪ್ರಾಂತೀಯ ಅಧಿಕಾರಿ ಸೂರ್ಯಕಾಂತ್ ರಾಕಲೆ ಉಪಸ್ಥಿತರಿದ್ದರು, ಮೊದಲಿಗೆ ಪ್ರಾರ್ಥನೆಯನ್ನು ಗಂಗಾಧರ ಸಾಲಿಮಠ ನೆರವೇರಿಸಿದರೆ ಸ್ವಾಗತವನ್ನು ಕಾಲೇಜಿನ ಪ್ರಾಚಾರ್ಯರರಾದ ಶಿವಕುಮಾರ್ ಬಿರಾದರ್ ಪ್ರಾಸ್ತಾವಿಕ ನುಡಿ ಸೂರ್ಯಕಾಂತ್ ರಾಖಲೆ ನೆರವೇರಿಸಿದರೆ ನಿರೂಪಣೆಯನ್ನು ಅಚ್ಚುಕಟ್ಟಾಗಿ ಬಸವರಾಜ್ ಖಂಡಳೆ ನೆರವೇರಿಸಿದರು ಉದ್ಘಾಟನೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳೊಂದಿಗೆ ಯುವಕರು ಮತ್ತು ಸಹಕಾರ ಎನ್ನುವ ಕುರಿತು ಸಂವಾದ ಕಾರ್ಯಕ್ರಮ ಜರಗಿತು . ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡರು.