ಸರ್ಕಾರಿ ಶಾಲೆ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಉಪ ವಿಜೇತರಾಗಿ ಆಯ್ಕೆ :
ಸರ್ಕಾರಿ ಶಾಲೆ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಉಪ ವಿಜೇತರಾಗಿ ಆಯ್ಕೆ :
ಕಮಲನಗರ: ತಾಲೂಕಿನ ಮಹಾತ್ಮಾ ಗಾಂಧಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ ಆಯ್ಕೆಯಾಗಿ 2024 -25 ನೇ ಸಾಲಿನ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಹೊಳೆಸಮುದ್ರ ಮಕ್ಕಳು ಸೆಮಿ ಫೈನಲ್ ನಲ್ಲಿ ಉಪ ವಿಜೇತರಾಗಿ ಆಯ್ಕೆ ಪಡೆದಿರುತ್ತಾರೆ.
ಗೆಲುವು ಸಾಧಿಸಿದ್ದ ಮಕ್ಕಳಿಗೆ ಹರ್ಷದಿಂದ ಶಾಲಾ ಮುಖ್ಯ ಗುರುಗಳಾದ ಸಂಜುಕೂಮಾರ ಡೋಂಗರೆ ದೈಹಿಕ ಶಿಕ್ಷಕರಾದ ರವಿ ಸಂಗಣ್ಣ ಶಾಲೆಯ ವ್ಯವಸ್ಥಾಪಕರಾದ ಅಜಯ್ ಪಾಂಚಳ್ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಮ್ ಕದಂ ಶಾಲಾ ಸಿಬ್ಬಂದಿ ವರ್ಗದವರಾದ ರವಿಕುಮಾರ್ ಸರ್, ರಾಜಕುಮಾರ್ ಕೊಡ್ಲೆ ರಡ್ಡಿ ಸರ್ ಶಕೀಲ್ ಸರ್ ಹಾಗೂ ಗ್ರಾಮದ ಯುವ ಮುಖಂಡರಾದ ರಾಹುಲ್ ಪಾಟೀಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾರುತಿ ಅಳಂದೆ ಸಂತೋಷ್ ಅಳಂದೆ ಈ ವಿದ್ಯಾರ್ಥಿಗಳ ಸಾಧನೆಗೆ ಪಾಲಕರು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಕ್ರೀಡಾಕೂಟದಲ್ಲಿ ಹೋಬಳಿ ಮಟ್ಟದಿಂದ ತಾಲೂಕ ಮಟ್ಟದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.