ಶೈಕ್ಷಣಿಕ ಜಮೀನು ಕಾಪಾಡಲು ತುರ್ತು ಕ್ರಮ ಕೈಗೊಳ್ಳಿ – ಮನವಿ ಪತ್ರ ಸಲ್ಲಿಕೆ

ಶೈಕ್ಷಣಿಕ ಜಮೀನು ಕಾಪಾಡಲು ತುರ್ತು ಕ್ರಮ ಕೈಗೊಳ್ಳಿ – ಮನವಿ ಪತ್ರ ಸಲ್ಲಿಕೆ

ಶೈಕ್ಷಣಿಕ ಜಮೀನು ಕಾಪಾಡಲು ತುರ್ತು ಕ್ರಮ ಕೈಗೊಳ್ಳಿ – ಮನವಿ ಪತ್ರ ಸಲ್ಲಿಕೆ

ಅಳಂದ ಸರ್ಕಾರಿ ಕಾಲೇಜು ಜಮೀನು ಹಗರಣ – ಜಿಲ್ಲಾಧಿಕಾರಿಗೆ ಮನವಿ

ಅಳಂದ: ಅಳಂದ ನಗರದಲ್ಲಿರುವ ಸರ್ಕಾರಿ ಕಾಲೇಜಿನ ಸರ್ವೆ ನಂಬರ್ 406/1, ಒಟ್ಟು ವಿಸ್ತೀರ್ಣ 6 ಎಕರೆ 25 ಗುಂಟೆ ಜಮೀನಿನಲ್ಲಿ ಸುಮಾರು 3 ಎಕರೆ ಜಮೀನು ಪ್ರಭಾವಿ ವ್ಯಕ್ತಿಗಳಿಂದ ಅಕ್ರಮವಾಗಿ ಖರೀದಿ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

1937ರಲ್ಲಿ ಆಗಿನ ನಿಜಾಂ ಸರ್ಕಾರದ ಜಮೀನ್ದಾರರಾದ ವೀರ ಅಹಮದ್ ಫತೆ ಸುಲ್ತಾನ್ ಅವರು ಈ ಜಮೀನನ್ನು ಸಾರ್ವಜನಿಕರ ಶಿಕ್ಷಣಕ್ಕಾಗಿ ಬಿಡುವಳಿ ಮಾಡಿದ್ದು, 1961ರಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ಕಟ್ಟಿಸಲು 2 ಎಕರೆ ಜಮೀನು ಕಾದಿರಿಸಲಾಯಿತು. ನಂತರ 1972ರಲ್ಲಿ ಮೈಸೂರು ಸರ್ಕಾರ ನೀಡಿದ ದಾಖಲೆಗಳಲ್ಲೂ ಈ ಜಮೀನು ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಆದರೆ, 2025ರ ಜೂನ್ 15ರಂದು ಕೆಲ ಪ್ರಭಾವಿ ವ್ಯಕ್ತಿಗಳು ಖರೀದಿ ಪತ್ರದ ಮೂಲಕ ಜಮೀನು ತಮ್ಮದಾಗಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಿಗೆ ವಿಷಯವನ್ನು ಮನಗಾಣಿಸಲು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ನ್ಯಾಯವಾದಿ ಜೆ ವಿನೊದಕುಮಾರ  

ಮನವಿ ಪತ್ರ ಸಲ್ಲಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಹಾಗೂ ಸಾಮಾಜಿಕ ನ್ಯಾಯ ಕಾಪಾಡುವಂತೆ ಆಗ್ರಹಿಸಲಾಯಿತು.