ಆದಿಚುಂಚನಗಿರಿಯ ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿ, ರಮೇಶ ಸಂಗಾಅವರಿಂದ ಲಂಡನ್‌ನ ಬಸವೇಶ್ವರ ಪ್ರತಿಮೆಗೆ ನಮನ.
ಆದಿಚುಂಚನಗಿರಿಯ ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿ, ರಮೇಶ ಸಂಗಾಅವರಿಂದ ಲಂಡನ್‌ನ ಬಸವೇಶ್ವರ ಪ್ರತಿಮೆಗೆ ನಮನ.
ಲಂಡನ್ : 29 ಸೆಪ್ಟೆಂಬರ್. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಮಠಾಧೀಶರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಲಂಡನ್‌ನಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದರು.
ಅವರೊಟ್ಟಿಗೆ ಬ್ರಿಟನ್‌ನ ಹಿಂದೂ ವೇದಿಕೆಯ ಮುಖ್ಯಸ್ಥೆ ತೃಪ್ತಿ ಪಟೇಲ್ ಹಾಗೂ ಮಾಜಿ ಮುಖ್ಯ ಸಚೇತಕ ಮತ್ತು ಶಾಸಕ ಸತೀಶ್ ರೆಡ್ಡಿ, ಕರ್ನಾಟಕ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಜಿಲ್ಲಾಧಿಕಾರಿ ಜಿಎಸ್‌ಟಿ ಮಹಮ್ಮದ್ ಪಾಷಾ, ದಿವ್ಯಾ ರಂಗೇನಹಳ್ಳಿ ಮತ್ತು ಹರೀಶ್ ರಾಮಯ್ಯ ಇದ್ದರು.
ಆದಿಚುಂಚನಗಿರಿಯ ಪೂಜ್ಯರನ್ನು ಕಲಬುರಗಿಯ ಡಾ.ಜಗದೀಶ್ ಸರ್ವಾರ್ ಸನ್ಮಾನಿಸಿ ಗೌರವಿಸಿದರು.
ಯುನೈಟೆಡ್ ಕಿಂಗ್‌ಡಂನ ಬಸವ ಸಮಿತಿಯ ಸಹಯೋಗದಲ್ಲಿ ಲ್ಯಾಂಬೆತ್ ನಗರದ ಜಗಜ್ಯೋತಿ ಬಸವೇಶ್ವರ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಗ್ರೇಟ್ ಬ್ರಿಟನ್‌ನ ಮೂವರು ಕನ್ನಡ ಕೌನ್ಸಿಲರ್‌ಗಳಾದ ರವಿ ವೆಂಕಟೇಶ್, ಸುರೇಶ್ ಗಟ್ಟಾಪುರ ಮತ್ತು ರಾಜೀವ್ ಮೆಟ್ರಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಕಮಲಾಪುರ, ಬಸವ ಸಮಿತಿಯ ಪದಾಧಿಕಾರಿಗಳಾದ ಅಭಿಜೀತ್ ಸಾಲಿಯಂತ್, ಅಜಿತ್ ಮೆನನ್ ದಾಸ್ ಮತ್ತು ರಂಗನಾಥ್ ಮಿರ್ಜಿ ಅವರು ಬ್ರಿಟೀಷ್ ಭಾರತೀಯ ಮತ್ತು ಕನ್ನಡ ಸಮುದಾಯಗಳನ್ನು ಪ್ರತಿನಿಧಿಸಿ ಆಗಮಿಸಿದವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ನವೆಂಬರ್ 14, 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಜಗಜ್ಯೋತಿ ಬಸವೇಶ್ವರರ ಐತಿಹಾಸಿಕ ಪ್ರತಿಮೆಯು ಯುಕೆಯಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1854 ರ UK ಶಾಸನಗಳ ಕಾಯಿದೆಯ ಅಡಿಯಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಕೆಲವು ಪರಿಕಲ್ಪನಾ ಪ್ರತಿಮೆಗಳಲ್ಲಿ ಈ ಮೂರ್ತಿಯು ಸಹ ಒಂದಾಗಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಹಿಂದೆ 2023 ರ ಮಾರ್ಚ್ 5 ರಂದು ಮಹಾತ್ಮ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ.
ಈ ಸಂದರ್ಭದಲ್ಲಿ ರಮೇಶ್ ಸಂಗಾ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
.