ಸಮ ಸಮಾಜ ಕಟ್ಟಿದ ಮಹಾತ್ಮ ಬಸವಣ್ಣ

ಸಮ ಸಮಾಜ ಕಟ್ಟಿದ ಮಹಾತ್ಮ ಬಸವಣ್ಣ

ಸಮ ಸಮಾಜ ಕಟ್ಟಿದ ಮಹಾತ್ಮ ಬಸವಣ್ಣ 

ಸೇಡಂ, ಏಪ್ರಿಲ್ ೨೯:ತಾಲೂಕಾ ಆಡಳಿತದ ವತಿಯಿಂದ ನಗರದಲ್ಲಿ ಭವ್ಯವಾಗಿ ಆಯೋಜಿಸಲಾದ ಮಹಾತ್ಮ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ "ವರ್ಗ, ವರ್ಣ, ಲಿಂಗ ಎಲ್ಲವನ್ನೂ ಮೀರಿ ಸಮಾನತೆ ಮತ್ತು ಪ್ರಜಾಪ್ರಭುತ್ವದ ಸಂಕಲ್ಪದ ಅನುಭವ ಮಂಟಪವನ್ನು ಜಗತ್ತಿನಲ್ಲಿ ಮೊದಲು ಸ್ಥಾಪಿಸಿದ ಮಹಾನ್ ತಾತ್ವಿಕರು ಬಸವಣ್ಣ" ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪಂಡಿತ ಬಿ.ಕೆ ಹೇಳಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ, "ಬಸವಣ್ಣನವರು ಶ್ರೇಷ್ಠ ವಚನಕಾರರು. ಅವರ ಕಾಯಕ ನಿಷ್ಠೆ, ದಾಸೋಹ ತತ್ವಗಳು ಇಂದಿನ ಜೀವನಕ್ಕೆ ಮಾರ್ಗದರ್ಶಿಯಾಗಬೇಕು" ಎಂದು ಹೇಳಿದರು. 

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಆನಂದ ಟೈಗರ್, ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಪ್ರಮುಖ ಭಾಷಣ ನೀಡಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿಶ್ವನಾಥ ಪಾಟೀಲ ಪೋಲಕಪಳ್ಳಿ, ಬಸವಣಪ್ಪ ಕುಡಳ್ಳಿ, ವೀರಶೆಟ್ಟಿ ಇಮುಡಾಪೂರ, ಸಂಗಪ್ಪ ಮಾಸ್ತರ ಪಾಲಾಮೂರ್, ಬಸವರಾಜ ಬೆಳಕೇರಿ, ಚಿತ್ರಶೇಖರ ಪಾಟೀಲ, ಮುರುಗೆಪ್ಪ ಕುಕಡಿ, ಮಲ್ಲಿಕಾರ್ಜುನ ದಳಪತಿ, ಸುಮಂಗಲಾ ಹುಣಜೆ, ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್ ರವರನ್ನು ಸನ್ಮಾನಿಸಲಾಯಿತು. 

ಅದರ ಜೊತೆಗೆ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೂ ಸನ್ಮಾನ ನೀಡಿ ಹುರಿದುಂಬಿಸಲಾಯಿತು.

ಕಾರ್ಯಕ್ರಮದಲ್ಲಿ ಇಓ ಶಂಕರ ರಾಠೋಡ, ಗ್ರೇಡ್-2 ತಹಸೀಲ್ದಾರ ವೆಂಕಟೇಶ ದುಗ್ಗನ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಯಪ್ಪ ಚಾಪಲ್ ಸ್ವಾಗತಿಸಿದರು, ನಾಗೇಶ ಭದ್ರಶೆಟ್ಟಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಚಿಂಚೋಳಿಯ ಮಲ್ಲಿಕಾರ್ಜುನ ಮಂದಿರದಿಂದ ಬಸವೇಶ್ವರ ವೃತದವರೆಗೆ ಮಹಾತ್ಮಾ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.