ಶಹಾಬಾದ : 24 ರಂದು ಬೃಹತ ಹಿಂದೂ ಸಮ್ಮೇಳನ ಹಾಗೂ ಶೋಭಾಯಾತ್ರೆ :..

ಶಹಾಬಾದ : 24 ರಂದು ಬೃಹತ ಹಿಂದೂ ಸಮ್ಮೇಳನ ಹಾಗೂ ಶೋಭಾಯಾತ್ರೆ :..

ಶಹಾಬಾದ : 24 ರಂದು ಬೃಹತ ಹಿಂದೂ ಸಮ್ಮೇಳನ ಹಾಗೂ ಶೋಭಾಯಾತ್ರೆ :..

ನಾಗರಾಜ್ ದಂಡಾವತಿ ವರದಿ ಶಹಾಬಾದ :.. ಶಹಾಬಾದ ತಾಲೂಕಿನಲ್ಲಿ ಹಿಂದೂ ಸಮ್ಮೇಳನ ಆಯೋಜನ ಸಮಿತಿ ವತಿಯಿಂದ ಶನಿವಾರ ಜ. 24 ರಂದು ಬೃಹತ್ ಹಿಂದೂ ಸಮ್ಮೇಳನ ಹಾಗೂ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಶಿವಕುಮಾರ್ ಇಂಗಿನಶೆಟ್ಟಿ ಅವರು ಹೇಳಿದರು. 

ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಅಂದು ಸಾಯಂಕಾಲ 5:00 ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರಾವುರಿನ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ, ಈ ಬೃಹತ್ ಸಮ್ಮೇಳನವನ್ನು ಉದ್ದೇಶಿಸಿ ಬೌದ್ಧಿಕರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭವ್ಯವಾದ ಶೋಭಾಯಾತ್ರೆ ಮಧ್ಯಾಹ್ನ 2:30 ಗಂಟೆಗೆ ಶ್ರೀ ಜಗದಂಬ ಮಂದಿರ ದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣಕ್ಕೆ ತಲುಪಿ ಸಮಾವೇಶಗೊಂಡ ನಂತರ ಬೃಹತ್ ಹಿಂದೂ ಸಮ್ಮೇಳನ ಜರುಗಲಿದೆ ಎಂದು ಹೇಳಿದರು. 

ಕಾರಣ ಶಹಾಬಾದ ತಾಲೂಕಿನ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಸಮ್ಮೇಳನ ಮತ್ತು ಶೋಭಾಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಅರುಣಕುಮಾರ ಪಟ್ಟಣಕರ, ಉಪಾಧ್ಯಕ್ಷ ಬಸವರಾಜ ಬಿರಾದಾರ, ದೇವದಾಸ ಜಾಧವ, ಸಿದ್ದರಾಮ ಕುಶಾಳೆ, ಅವಿನಾಶ್ ಸಾಳುಂಕೆ ಇದ್ದರು.