ತುಂತುರು ಗೆಳತಿ "

" ತುಂತುರು ಗೆಳತಿ "
ಬಿಳಿಯ ಹಾಳೆಯ ಅಳತೆ ಇಟ್ಟು
ಅದಕ್ಕೆ ಕೊಂಚ ಶಾಹಿ ಇಟ್ಟು
ಬರೆದಾಗ ನೆನಪಾಗಿದ್ದು ತುಂತುರು
ಚೆಲುವೆಯ ಗಾನ ಮಾಧುರ್ಯ
ಅವಳ ಮುಡಿಗು ಕಣ್ಣಿಗೂ
ಆನಂದದ ಬಣ್ಣ
ಕೂರ್ಮೆ ಇಂದ ಕಲಿತು
ಹಾಡಿದಳು ಏನಂತ ಹೇಳಲಣ್ಣ...
ತುಂತುರು ಗೆಳತಿ......
ಇಂಪಾದ ಧ್ವನಿಗೊಂದು
ನನ್ನಿಯ ಎರಡು ಸಾಲು
ನೋಟದಲ್ಲಿ ಬೀಗಿ ಮನದಲ್ಲಿ
ಮನಸೊರೆ ಗೊಂಡವಳು
ತುಂತುರು ಗೆಳತಿ
ಪ್ರತಿಭೆಯ ಪ್ರಬೆಯಾಗಿ
ಮಾರ್ದನಿಸದ ಆಕೆ
ಪ್ರತ್ಯುತ್ತರ ನೀಡದೆ
ಹೋಗಿ ಬಿಟ್ಟಳು
ಸಂಗೀತದ ಛಾಯೆ ಬಿಟ್ಟು...
ತುಂತುರು ಗೆಳತಿ
- ಭೀಮಪ್ಪ ದೊಡ್ಮನಿ ಕೊಂಗಂಡಿ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ -ಮಳನಿ ಕಲಬುರಗಿ (ದ.ವ)