ಕೃಷಿ ಭೂಮಿಯಲ್ಲಿ ಹೆಚ್ಚಿನ ಮಳೆ ನೀರು ಸಲಹೆ

ಕೃಷಿ ಭೂಮಿಯಲ್ಲಿ ಹೆಚ್ಚಿನ ಮಳೆ ನೀರು ಸಲಹೆ
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬಾಲ್, ಆಲೂರು, ಭಾಗದಲ್ಲಿ ಕೆಲ ಉದ್ದು, ಹೆಸರು, ಸೋಯಾ, ತೊಗರಿ ಕೃಷಿ ಹೊಲದಲ್ಲಿ ಒಮ್ಮೆಲೇ ಸುರಿದ ಮಳೆ ಇಂದ ಭೂಮಿ ಮೆಲ್ಬಾಗ ಪೋಷಕoಷ ಸವೆತ, ಬೇರು ಭಾಗ ಹೆಚ್ಚು ತೇವ ದಿಂದ ಎಲೆ ತಿಳಿ ಹಳದಿ ಬಣ್ಣ ಒಂದು ವಾರದೊಳಗೆ ಕಂಡು ಬಂದಲ್ಲಿ ಸೂಕ್ತ ಬಸಿ ಕಾಲುವೆ ಹೊಲಗಳಿಗೆ ಕಲ್ಪಿಸಿ, ನೀರಿನಲ್ಲಿ ಕರಗುವ ಏನ್ ಪಿ ಕೆ ಗೊಬ್ಬರ 5 ಗ್ರಾಂ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ ಎಂದು ಕೆ ವಿ ಕೆ ಮಣ್ಣು ವಿಜ್ಜಾನಿ ಡಾ. ಶ್ರೀನಿವಾಸ ಬಿ ವಿ ತಿಳಿಸಿದರು. ಹವಾಮಾನಕ್ಕೆ ತಕ್ಕಂತೆ ಸಸ್ಯಗಳಿಗೆ ಕಾಡುವ ಕೀಟ, ರೋಗ ಹತೋಟಿ ಕ್ರಮ ರೈತರಿಗೆ ವಾಟ್ಸಪ್ಪ್ ಮೂಲಕ ಕೃಷಿ ವಿಜ್ಜಾನಿ ವರ್ಗ ಸಲಹೆ ಕಳುಹಿಸಲಾಗುತ್ತಿದೆ. ಹಳದಿ ವೈರಸ್ ನಂಜಣು ರೋಗ ಹಾಗೂ ಬೇರು ಕೊಳೆ ರೋಗ ಹತೋಟಿ ಕ್ರಮದ ಕುರಿತು ಸಸ್ಯ ರೋಗ ತಜ್ಜರಾದ ಡಾ. ಜಹೀರ್ ಅಹಮದ್ ಕ್ಷೇತ್ರ ಭೇಟಿ ವೇಳೆ ರೈತರಿಗೆ ವಿವರಿಸಿದರು. ಪ್ರಗತಿಪರ ರೈತರಾದ ಶ್ರೀ ಬಾಬು ರಾವ್ ಪಟ್ಟಣ, ಯುವ ರೈತರಾದ ಶ್ರೀ ವಿನೋದ್ , ಶ್ರೀ ಮಹೇಶ್ ಎಚ್ ವೀರೇಶ್ ಉಪಸ್ಥಿತರಿದ್ದರು