ಕೆಜಿಎಸ್ ಶಾಲೆಯಲ್ಲಿ ಗಣಿತ ದಿನಾಚರಣೆ ಆಚರಣೆ
ಕೆಜಿಎಸ್ ಶಾಲೆಯಲ್ಲಿ ಗಣಿತ ದಿನಾಚರಣೆ ಆಚರಣೆ
ನರೇಗಲ್: ದಿನಾಂಕ 23-12-2018 ರಂದು ನರೇಗಲ್ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಗಣಿತ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿನಿಯರಿಗೆ ಗಣಿತ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮಕ್ಕಳನ್ನು ಎಂಟು ಗುಂಪುಗಳಾಗಿ ವಿಭಜಿಸಿ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು.
ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಉತ್ತಮ ಉತ್ತರಗಳನ್ನು ನೀಡಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದುಕೊಂಡರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗಣಿತದ ಆಕಾರಗಳು ಹಾಗೂ ಸೂತ್ರಗಳನ್ನು ಒಳಗೊಂಡ ರಂಗೋಲಿ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದ್ದು, ವಿದ್ಯಾರ್ಥಿನಿಯರು ಸೃಜನಶೀಲವಾಗಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿಗಳಾದ ಶ್ರೀ ಎಂ.ಪಿ. ಅನಗೌಡರ, ಶ್ರೀ ವಿ.ಎಸ್. ದಿಂಡೂರು, ಶ್ರೀಮತಿ ರಾಜೇಶ್ವರಿ ದೊಡ್ಡಿಹಾಳ ಹಾಗೂ ಶ್ರೀ ಜೆ. ಜನಪದ ಉಪಸ್ಥಿತರಿದ್ದರು.
ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ
