ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ

ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ

ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ

 ಕಲಬುರಗಿ: ಮುಸ್ಲಿಮ್ ಸಮುದಾಯವು ಶಿಕ್ಷಣ,ಉದ್ಯೋಗ, ಆರ್ಥಿಕತೆ ಹೀಗೆ ಎಲ್ಲಾ ರಂಗಗಳಲ್ಲಿ ತೀರಾ ಹಿಂದುಳಿದಿದೆ. ಸಾಚಾರ್ ಸಮಿತಿಯ ವರದಿಯು ಇದನ್ನು ಬಹಿರಂಗ ಪಡಿಸಿದೆ.ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಅಲ್ಪಸಂಖ್ಯಾತರು ಈ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿದ್ದಾರೆ. ಬಡವರ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹಲವು ಯೋಜನೆಗಳು ಹಮ್ಮಿ ಕೊಂಡಿರುವ ತಾವು, ಚುನಾವಣೆ ಸಂಧರ್ಭದಲ್ಲಿ ಭರವಸೆ ನೀಡಿದಂತೆ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿ ನೀಡುವ ಬಗ್ಗೆ ಕೂಡಲೇ ಕ್ರಮ ವಹಿಸಬೇಕೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.  

 ಹಾಗೆಯೇ ಕಲ್ಯಾಣ ಕರ್ನಾಟಕ ಭಾಗದ ಜನಸಂಖ್ಯೆ ಗೆ ಅನುಗುಣವಾಗಿ ಬಜೆಟ್ ನೀಡಿ ಈ ಭಾಗದ ಅಭಿರುದ್ಧಿಗೆ ವಿಶೇಷ ಕಾಳಜಿ ವಹಿಸಬೇಕೆಂದು ಮನವಿಯಲ್ಲಿ ತಿಲಿಸಿದ್ದಾರೆ. ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಅಬ್ದುಲ್ ಖಾದಿರ್, ರಾಜ್ಯ ಕಾರ್ಯದರ್ಶಿ ಮುಬಿನ್ ಅಹ್ಮದ್, ಜಿಲ್ಲಾ ವರ್ಕ್ಕಿಂಗ್ ಪ್ರೆಸಿಡೆಂಟ್ ಸಲೀಮ್ ಅಹ್ಮದ್ ಚಿತಪುರಿ, ಯುವ ಕರ್ನಾಟಕ ಕರ್ಯದರ್ಶಿ ಫಹಾದ್ ಮೊಹಸಿನ್ ಇದ್ದರು.