ರೈತರ ವಿವಿಧ ಬೇಡಿಕೆಗಳು ಈಡೇರಿಸಬೇಕೆಂದು ಸಿಎಂ ಅವರಿಗೆ ಮನವಿ

ರೈತರ ವಿವಿಧ ಬೇಡಿಕೆಗಳು ಈಡೇರಿಸಬೇಕೆಂದು ಸಿಎಂ ಅವರಿಗೆ ಮನವಿ

ರೈತರ ವಿವಿಧ ಬೇಡಿಕೆಗಳು ಈಡೇರಿಸಬೇಕೆಂದು ಸಿಎಂ ಅವರಿಗೆ ಮನವಿ

ಕಲಬುರಗಿ: ಕೇಂದ್ರ ಸರ್ಕಾರ ಕಬ್ಬಿನ ಎಫ್ ಆರ್ ಸಿ ಬೆಲೆ ನೈಜ್ಞಾನಿಕನಾಗಿದ್ದು ರಾಜ್ಯ ಸರ್ಕಾರದಿಂದ ಪ್ರತಿ ಟನ್ ಕಬ್ಬಿಗೆ ಕನಿಷ್ಠ 5000 ಬೆಲೆ ನಿಗದಿಪಡಿಸಬೇಕು ಮತ್ತು ರೈತರ ವಿವಿಧ ಬೇಡಿಕೆಗಳು ಈಡೇರಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹೂಗಾರ ನೇತೃತ್ವದಲ್ಲಿ ಸಿಎಂ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಕಬ್ಬಿಗೆ ಅವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಿದೆ ಆದಕಾರಣ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಕೂಡಲೇ ರಾಜ್ಯ ಸರ್ಕಾರ ಕಬ್ಬಿಗೆ ಕನಿಷ್ಠ 5000 ಬೆಲೆ ನಿಗದಿಪಡಿಸಬೇಕು.

ಚಿಂಚೋಳಿ ತಾಲೂಕಿನಲ್ಲಿ ಪ್ರಾರಂಭವಾಗಿದ್ದ ಸಿದ್ಧ ಶ್ರೀ ಸಕ್ಕರೆ ಕಾರ್ಖಾನೆ ಮಾಲಿನ್ಯ ನಿಯಂತ್ರಣ ಕಾನೂನು ಉಲ್ಲಂಘನೆ ಮಾಡಿರುವುದರಿಂದ. ಸಕ್ಕರೆ ಕಾರ್ಖಾನೆ ಬಂದು ಮಾಡಿರುವುದು ರೈತರಿಗೆ ತುಂಬಾ ನಷ್ಟವಾಗುತ್ತಿದೆ ಕಾರ್ಖಾನೆಗೆ ನಂಬಿ ರೈತರು ಕಬ್ಬು ಹಚ್ಚಿದ್ದಾರೆ ಕೂಡಲೆ ಕಾರ್ಖಾನೆ ಪ್ರಾರಂಭಿಸಲು ಅನುಮತಿ ನೀಡಬೇಕು.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಕೊಡಬೇಕು ಕೂಡಲೇ ಬಾಕಿ ಹಣ ಸಂದಾಯ ಮಾಡಲು ಕ್ರಮ ಕೈಗೊಳ್ಳಬೇಕು. ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬರಬೇಕಾದ 15 ಟಿಎಂಸಿ ನೀರನ್ನು ಬೇಸಿಗೆ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತನಿಗೆ ನೀರುಹರಿಸಲು ರಾಜ್ಯ ಸರ್ಕಾರದಿಂದ ಭೀಮ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕು ನಮಗೆ ಬರಬೇಕಾದ ನೀರಿನ ಪಾಲು ಕೇಳಲು ಸರ್ಕಾರ ಮುಂದಾಗಬೇಕು.

ಜಿಲ್ಲೆಯಲ್ಲಿ ಬರಗಾಲದ ಪರಿಹಾರ ಹಣ ಇನ್ನೂ 40% ರೈತರಿಗೆ ಬಂದು ಮುಟ್ಟಿಲ್ಲ ಜಿಲ್ಲಾಧಿಕಾರಿಗಳು ಹಣದ ಕೊರತೆ ಇಲ್ಲವೆಂದು ಹೇಳುತ್ತಿದ್ದು ಆದರೆ ರೈತರ ಅಕೌಂಟಿಗೆ ಮಾತ್ರ ಹಣ ಬರ್ತಾ ಇಲ್ಲ ಕೂಡಲೇ ರೈತರ ಖಾತೆಗೆ ಬರಗಾಲದ ಪರಿಹಾರ ಹಣ ಜಮಾ ಮಾಡಬೇಕು.

ಅಫಜಲಪುರ ತಾಲ್ಲೂಕಿನ ಗೂಳೂನೂರು ಮೋನಟಗ ಮಧ್ಯ ಭೀಮ ನದಿಗೆ ಕಟ್ಟಲಾದ ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿ 90% ಮುಗಿದಿದ್ದು ಕೇವಲ 10% ಕಾಮಗಾರಿ ಉಳಿದಿದೆ ಕಾರಣ ಬ್ರಿಜ್ ಅಕ್ಕ ಪಕ್ಕದಲ್ಲಿ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಕೂಡಲೆ ಆ ರೈತರಿಗೆ ಪರಿಹಾರ ನೀಡಿ ಕಾಮಗಾರಿ ಮುಗಿಸಿ ರೈತರಿಗೆ ನೀರು ನಿಲ್ಲಲು ಅವಕಾಶಮಾಡಿಕೊಡಬೇಕು.

ಜಿಲ್ಲೆಯಲ್ಲಿ ವಿದ್ಯುತ್ ಇಲಾಖೆ ಎಂಟು ವರ್ಷಗಳ ಹಿಂದೆ ಅಕ್ರಮ ಸಕ್ರಮ ಅಡಿಯಲ್ಲಿ ಗುತ್ತಿಗೆದಾರರ ಮುಖಾಂತರ ರೈತರಿಂದ 50 ರೂಪಾಯಿ ಕಟ್ಟಿಕೊಂಡು ಪಂಪ್ಲೆಟ್ಟುಗಳಿಗೆ ಆರ್ ಆರ್ ನಂಬರ್ ಕೊಡುವುದಾಗಿ ಹೇಳಿದ್ದು ಆದರೂ ಇಲ್ಲಿವರೆಗೆ ಯಾವುದೇ ಆರ್ ಆರ್ ನಂಬರ್ ನೀಡಿಲ್ಲ ಕೂಡಲೇ ಆರ್ ಆರ್ ನಂಬರ್ ನೀಡಲು ಆದೇಶ ಮಾಡಬೇಕು.

ಭೀಮ ನದಿಗೆ ದಡದಲ್ಲಿ ಮುಳುಗಡೆಯಾದ ಬೆಳೆ ಪರಿಹಾರ ಇನ್ನು ಕೊಟ್ಟಿಲ್ಲ ಕೂಡಲೇ ಸರ್ವೆ ಕಾರ್ಯ ಮಾಡಿ ಮುಳುಗಡೆಯಾದ ರೈತರ ಬೆಳೆ ಪರಿಹಾರ ನೀಡಬೇಕು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುತ್ತದೆ ಬೆಳೆ ಹಾನಿಯಾದ ಪ್ರದೇಶಗಳನ್ನು ಗುರುತಿಸಿ ರೈತರಿಗೆ ಪರಿಹಾರ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ ಅಂಕಲಗಿ, ಧರ್ಮರಾಜ ಸಾಹು, ಭಾಗಣ್ಣ ಕುಂಬಾರ, ರೇವಣಸಿದ್ದಯ್ಯ ಮಠ, ಶರಣು ಬಿಲ್ಲಾಡ ಸೇರಿದಂತೆ ಇತರರು ಇದ್ದರು.