ಅಕ್ಷರ ಮಾತಾ ಪುಲೆ ಕಾರ್ಯ ಅನನ್ಯ : ಗಂಜಗಿರಿ
ಅಕ್ಷರ ಮಾತಾ ಪುಲೆ ಕಾರ್ಯ ಅನನ್ಯ : ಗಂಜಗಿರಿ
ಕಲಬುರಗಿ: ಭಾರತ ದೇಶದ ಮೊದಲ ಮಹಿಳಾ ಶಿಕ್ಷಕಿ ಮಾತಾ ಸಾವಿತ್ರಿಬಾಯಿ ಫುಲೆರವರ ಅಕ್ಷರ ಕ್ರಾಂತಿಯ ಫಲವಾಗಿ ಇಂದು ಭಾರತ ದೇಶದ ಸರ್ವ ಸಮುದಾಯಗಳ ಮಹಿಳೆಯರಿಗೆ ಅಕ್ಷರ ಕಲಿತು ಉನ್ನತ ಮಟ್ಟದ ಅಧಿಕಾರಿಗಳಾಗಿ ಜನಪ್ರತಿನಿಧಿಗಳಾಗಿ ಉದ್ಯಮಿಗಳಾಗಿ ಸ್ವತಂತ್ರವಾಗಿ ಬಾಳುವಂತ ಹಕ್ಕು ದೊರೆತಿದೆ ಎಂದು ಹೋರಾಟಗಾರ ಮಾರುತಿ ಗಂಜಗಿರಿ ರವರು ಕಾಳಗಿ ತಾಲೂಕಿನ ಕೊರವಿ ದೊಡ್ಡ ತಾಂಡದ ಕಾಳಿಕಮಾತಾ ಮಂದಿರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಮತ್ತು ವಿಠಲ ಮಾಹರಾಜರ ಭಾವಚಿತ್ರವುಳ್ಳ ಪ್ರಸಕ್ತ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮುಂದುವರೆದು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಬಂಧಿಯಾಗಿದ್ದ ಅಕ್ಷರಗಳನ್ನು ಬಿಡುಗಡೆಗೊಳಿಸಿ ಅಂದಕಾರ ಮೌಡ್ಯತೆಯಲ್ಲಿದ್ದ ಸಾಮಾಜಿಕ ಸಮಾನತೆ ವ್ಯವಸ್ಥೆಯನ್ನು ಶಿಕ್ಷಣ ಜಾಗೃತಿ ಮೂಲಕ ಕಿತ್ತೊಸೆಯಲು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ವಿಧವೆಯರಿಗೆ ಸಾಂತ್ವನ ಕೇಂದ್ರಗಳನ್ನು ತೆರೆಯುವುದಲ್ಲದೆ ಹಗಲೆಲ್ಲಾ ಕೆಲಸ ಮಾಡಿ ಬಂದ ಮಹಿಳೆಯರಿಗೆ ರಾತ್ರಿ ಶಾಲೆಗಳನ್ನು ತೆರೆದು ಮಹಿಳೆಯರಿಗೆ ಅಕ್ಷರ ಕಲಿಸಿದ ಸಾವಿತ್ರಿಬಾಯಿ ಫುಲೆ ಕಾರ್ಯ ಅನನ್ಯವಾಗಿದೆ ಪ್ರಸ್ತುತ ಸಮಾಜಕ್ಕೆ ವಿಶೇಷವಾಗಿ ಮಹಿಳೆಯರು ಮನೆ ಮನಸ್ಸು ಕೆಡಿಸುವ ದಾರವಾಹಿಗಳನ್ನು ಬಿಟ್ಟು ಸಾವಿತ್ರಿಬಾಯಿ ಫುಲೆ ಇತಿಹಾಸ ಅರಿಯುವುದು ಅನಿವರ್ಯವಾಗಿದೆ ಎಂದು ಸುದಿರ್ಘವಾಗಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ.ಚಂದ್ರಕಲಾ, ನೀಲಕಂಠ ಗುತ್ತೆದಾರ, ಸಂತೋಷ ಪತಂಗೆ, ಶಿವರಾಂ ರಾಠೋಡ, ಪಿಎಸ್‌ಐ ರಮೇಶ ಕುಲ್ಕಣಿ, ರವಿರಾಜ್ ರಾಠೋಡ್, ಮಹೇಶ ಗುತ್ತೇದಾರ್, ಕ್ರೈಂ ಸಬ್ ಇನ್ಸ್ಪೆಕ್ಟರ್ ಶಿವಶಂಕರ, ಚಂದ್ರಕಾAತ ಜಾದವ, ಸಂತೋಷ ಕಡಬೂರ, ಮೋಹನ ಐನಾಪೂರ, ಹರೀಶ್ ದೇಗಲ್ಮಡಿ, ಪ್ರವೀಣ್ ಕನಕಪೂರ ಮಾತನಾಡಿದರು. ಸಚೀನ ಚವ್ಹಾಣ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು
.
