ಮಹಿಳೆಯರಿಗೆ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಸಬಲೀಕರಣದ ಅಗತ್ಯ : ಪ್ರೊ ಯಶವಂತರಾಯ ಅಷ್ಠಗಿ

ಮಹಿಳೆಯರಿಗೆ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ಸಬಲೀಕರಣದ ಅಗತ್ಯ : ಪ್ರೊ ಯಶವಂತರಾಯ ಅಷ್ಠಗಿ
ನಗರದ ಮಹಾದೇವಿ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಹಾಗೂ ಕು ಅಕ್ಷತಾ ಈ ಜಾನೆ ಗ್ರೂಪ್ ವತಿಯಿಂದ ಕಾರ್ಯಕ್ರಮ ಆಯೋಜನೆ
ಕಲಬುರಗಿ : ದಿನವಿಡಿ ವಿಶ್ರಾಂತಿ ಇಲ್ಲದೇ ದುಡಿದರೂ ಮಹಿಳೆ ಯಾವತ್ತೂ ಸಹನೆ ಕಳೆದುಕೊಳ್ಳದೆ ಸಂಸಾರದ ಭಾರವನ್ನು ಸರಿದೂಗಿಸುತ್ತಾಳೆ ಆದ್ದರಿಂದ ಮಹಿಳೆಯರಿಗೆ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸಬಲೀಕರಣದ ಅಗತ್ಯವಿದೆ ಎಂದು ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರೊ ಯಶವಂತರಾಯ ಅಷ್ಠಗಿ ಅಭಿಪ್ರಾಯಪಟ್ಟರು.
ನಗರದ ಅಕ್ಕಮಹಾದೇವಿ ವಿದ್ಯಾವರ್ಧಕ ಸಂಘದ ವೃದ್ಧಾಶ್ರಮದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಘಟಕ, ಸಮತಾ ಸೈನಿಕ ದಳದ ಮಹಿಳಾ ಘಟಕ ಹಾಗೂ ಹಾಗೂ ಕು. ಅಕ್ಷತಾ ಈರಣ್ಣ ಜಾನೆ ಗ್ರೂಪ್ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಮಾತೆ ರಮಾಬಾಯಿ ಅಂಬೇಡ್ಕರ್ ಹಾಗೂ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ವೀರ ಮಹಿಳೆಯರು ದೇಶಕ್ಕೆ ನೀಡಿದ ಅಪಾರ ಕೊಡುಗೆ ಮತ್ತು ಉದಾತ್ತ ಮೌಲ್ಯಗಳ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
ಎಚ್ ಕೆ ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ ಶರಣಪ್ಪ ಗಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ, ಸಂಜೀವ ಟಿ ಮಾಲೆ ಹಾಗೂ ಜಿಲ್ಲಾಧ್ಯಕ್ಷ ಈರಣ್ಣ ಜಾನೆ ಮಾತನಾಡಿ,ಆಧುನಿಕ ಸಮಾಜದಲ್ಲಿ ಮಹಿಳೆ ಪುರುಷನಷ್ಟೇ ಪ್ರಬುದ್ಧಳಾದರೂ ಸಹ ಹಲವಾರು ಕ್ಷೇತ್ರಗಳಲ್ಲಿ ಪುರುಷನಷ್ಟೇ ಸಮಾನವಾದ ಅವಕಾಶ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜ ಸೇವಕಿ ಹಾಗೂ ನಾಲ್ಕು ಚಕ್ರ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಮಕ್ಕಳ ಮಾರಾಟ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಪ್ರತಿ ಹೆಣ್ಣುಮಕ್ಕಳ ಪೋಷಕರು ಜಾಗೃತರಾಗಬೇಕು ಕಿವಿಮಾತು ಎಂದರು.
ನಿವೃತ ಸರಕಾರಿ ಅಭಿಯೋಜಕ ಹುಲೇಪ್ಪ ಹೇರೂರ, ಮತ್ತು ಗೀತಾ ಭರಣಿ ಮಾತನಾಡಿ, ಎಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿದೆ. ಪವಿತ್ರ ಮಾತೆಯರ ನೆನಪಿನ ಈ ದಿನ ಕೇವಲ ಮಾರ್ಚ್ 8ಕ್ಕೆ ಸೀಮಿತವಾಗದೆ ವರ್ಷದ 365 ದಿನಗಳು ಮಹಿಳೆಯರ ಸಂತೋಷದ ದಿನಗಳಾದಾಗ ಮಾತ್ರ ಮಹಿಳಾ ದಿನಾಚರಣೆ ಅರ್ಥಪೂರ್ಣವಾದೀತು ಎಂದು ಹೇಳಿದರು.
ಜಾನಪದ ಕಲಾವಿದ ಎಂ ಎನ್ ಸುಗಂಧಿ , ವೀರಣ್ಣ ಪಾಟೀಲ್ ಜಗತಿ, ಮಹಾದೇವ ನಾಟೀಕರ್,ಖತಲಪ್ಪ ಕಟ್ಟಿಮನಿ , ಸೋಮಶೇಖರ್ ಸಾಹುಕಾರ, ಗುಂಡಪ್ಪ ಮಾಳಗೆ, ಮಿಲಿಂದ್ ಕಣಮಸ, ಮಲ್ಲಿಕಾರ್ಜುನ ಇಟೀಕರ್, ಸಿದ್ಧಾರ್ಥ ಕಣಮಸ್, ಶಿವರಾಯ ಖಣಗೆ, ಮಣಮಂತ ಜಾನೆ , ರಬೀಯಾ ಬೇಗಂ, ವಿಜಯಲಕ್ಷ್ಮಿ ಹೀರೆಮಠ್, ಸ್ವಾತಿ ಮಹಾಗಾಂವ ಮಹಾದೇವಿ ಬಾಪುನಗರ, ಸಂಗೀತಾ ಅಂಬಲಗಿ, ದತ್ತಪ್ಪ ಸುಣ್ಣೂರ, ಸೋಮಣ್ಣ ಹೀರಾಣಿ, ಹಣಮಂತ ಜೀಡಗಿ, ಭಾಗೀರಥಿ,ಭೂಮೀಕಾ ಚವ್ಹಾಣ, ಮಲ್ಲಮ್ಮ ಜಗತಿ, ಕಮಲಮ್ಮ ಆಶ್ರಯ ಕಾಲನಿ, ವಿಜಯಕುಮಾರ್ ಸಾವಳಗಿ, ಮಲ್ಲಿಕಾರ್ಜುನ ನಂದೂರ,ಮಾರುತಿ ಲೇಂಗಟಿ, ಸೂರ್ಯಕಾಂತ ಅಂಬಲಗಿ, ಸಾಯಬಣ್ಣ ಬೆಳಮಗಿ ಸೇರಿದಂತೆ ವೃದ್ಧಾಶ್ರಮದ ಸಿಬ್ಬಂದಿ ವರ್ಗ ಹಾಗೂ ಕರ್ನಾಟಕ ಸಮತಾ ಸೈನಿಕ ದಳದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಿಳಾಪರವಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದಿ. ಕು.ಅಕ್ಷತಾ ಈರಣ್ಣ ಜಾನೆ ಅವರ ಜನ್ಮದಿನ ಆಚರಿಸಿ ಅನ್ನದಾಸೋಹ ಮಾಡಲಾಯಿತು.
ಇದೇ ವೇಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ,ಪದ್ಮಾವತಿ ಅಟ್ಟೂರಕರ್, ಶರಣಮ್ಮ ರೋಜಾ, ಸೀಮಾ ಮೂಲಭಾರತಿ, ಭಾಗ್ಯಶ್ರೀ ಹಡಪದ್ , ಅನಸೂಯಾ ಹಲಚೇರಾ, ಸವೀತಾ ಅಣಕಲ್ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.
ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಈರಣ್ಣ ಜಾನೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಿಲೀಂದ್ ಕಣಮಸ್ ನೀರುಪಿಸಿದರು, ಮಹಾದೇವ ನಾಟೀಕರ್ ಸ್ವಾಗತಿಸಿದರು, ವಿಜಯಕುಮಾರ್ ವಂದಿಸಿದರು.
*[ಅಂತಾರಾಷ್ಟ್ರೀಯ ಮಹಿಳಾ ದಿನವು, ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳು, ಹೋರಾಟಗಳು ಮತ್ತು ಸ್ಥಿತಿಸ್ಥಾಪಕತ್ವವನ್ನು ಗುರುತಿಸುವ ಜಾಗತಿಕ ಚಳುವಳಿಯಾಗಿದೆ].*
-ಪ್ರೊ ಯಶವಂತರಾಯ ಅಷ್ಠಗಿ
ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ, ಕಲಬುರಗಿ