ಸಚಿವ ಪ್ರೀಯಾಂಕಾ ಖರ್ಗೆ ಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಸಚಿವ ಪ್ರೀಯಾಂಕಾ ಖರ್ಗೆ ಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ 46ನೇ ಜನ್ಮದಿನದ ಪ್ರಯುಕ್ತ ಜೇವರ್ಗಿ ಕಾಲೊನಿ ಗೆಳೆಯರ ಬಳಗದ ಮುಖಂಡರಾದ ಮಹೇಂದ್ರ ನಾಯ್ದು, ಸಂತೋಷ ಯಾಧವ ಹಾಗೂ ರಾಜು ಮಾಳಗೆ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಅಭಿಷೇಕ ಪಾಟೀಲ, ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಶಿವಾನಂದ ಹೋನಗುಂಟಿ, ರಾಜಿವ ಜಾನೆ, ವೆಂಕಟರೆಡ್ಡಿ, ಸುರೇಶ ಕುಲಕರ್ಣಿ, ಧರ್ಮರಾಜ ಹೆರೂರ, ಶಿವಶರಣಪ್ಪ ನೆಲೋಗಿ, ಉದಯ ಸಲಗರ್, ಸಿದ್ದು, ರಾಕೇಶ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಇದ್ದರು.