ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ಮನವಿ
ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ಮನವಿ
ಕಮಲಪೂರ: ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮತ್ತು ನಗರದ ವಾರ್ಡ್ ಗಳಲ್ಲಿ ಪೈನ್ ಶಾಪ್ ಮತ್ತು ಬಾರ್ ಗಳಿಂದ ಮದ್ಯ ಖರೀದಿಸಿ ಹಳ್ಳಿ ಮತ್ತು ವಾರ್ಡ್ ಗಳ ಕಿರಾಣಿ ಅಂಗಡಿ, ಪಾನ್ ಶಾಪ್ ಗಳಲ್ಲಿ ಮತ್ತು ಚಹಾ ಹೋಟೆಲ್ ಗಳಲ್ಲಿ ಇನ್ನು ಕೆಲವರು ಮನೆಯಲ್ಲಿಯೇ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಇದರಿಂದ ಹಳ್ಳಿಗಳಲ್ಲಿ ದಿನದ 24 ಗಂಟೆಗಳ ಕಾಲ ಮದ್ಯ ದೊರಕುತ್ತಿದೆ. ಹಾಗಾಗಿ ಅಲ್ಲಿನ ಕೆಲ ಜನರು, ಕಾರ್ಮಿಕರು ಬೆಳಿಗ್ಗೆ 6 ಗಂಟೆಯಿಂದ ರಾತ್ರಿಯವರೆಗೂ ಕುಡಿದುಕೊಂಡು ಕೆಲಸಕ್ಕೂ ಹೋಗದೆ ನಡೆಯಲ್ಲಿ ತೇಲಾಡುತ್ತಾ, ಕುಡಿಯಲು ಸಾಲ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸುಮಾರು ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷವು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಕೌಟುಂಬಿಕ ಹಾಗೂ ಸಾಮಾಜಿಕ ಕಲಹಗಳು ಹೆಚ್ಚಾಗಿ ಅಶಾಂತಿ ಮೂಡುತ್ತಿದೆ. ಮತ್ತು ಸಣ್ಣ ಪುಟ್ಟ ಮಕ್ಕಳು ಹಾಗೂ ವಿದ್ಯಾರ್ಥಿಗಳ ಮೇಲೆ ಇದು ಪ್ರಭಾವ ಬೀರಿ ದಾರಿ ತಪ್ಪುವಂತೆ ಮಾಡುತ್ತಿದೆ. ಸಮಾಜದಲ್ಲಿ ಪ್ರಜ್ಞಾವಂತರೆನಿಸಿಕೊಂಡಿರುವ ನಾವು ನೀವುಗಳು ಇದನ್ನು ಗಮನಹರಿಸದೆ ಇರುವುದು ನಿಜವಾಗಿಯೂ ದುರಂತವೆನಿಸಿದೆ.ಇನ್ನೂ ವೈನ್ ಶಾಪ್ ಮತ್ತು ಬಾರ್ ಗಳ ಮಾಲೀಕರು ರಾಜಾರೋಷವಾಗಿ ತರಕಾರಿ ಮಾರುವಂತೆ ಮಧ್ಯ ಕೂಡ ಪ್ರತಿ ಹಳ್ಳಿಗಳ ಅಂಗಡಿ ಮತ್ತು ಹೋಟೆಲ್ ಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಕಾನೂನು ಬಾಹೀರವಾಗಿ ಮಧ್ಯ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಮೌನವಹಿಸಿ ಏನು ಗೊತ್ತಿಲ್ಲದಂತೆ ಇದ್ದು ಈ ಅವ್ಯವಹಾರಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಹಾಗಾಗಿ ಬಹುಜನ ಸಮಾಜ ಪಕ್ಷ ಗ್ರಾಮೀಣ ಮತಕ್ಷೇತ್ರದ ವತಿಯಿಂದ ಇದನ್ನು ಸಂಪೂರ್ಣವಾಗಿ ವಿರೋಧಿಸಿ ಅಕ್ರಮ ಮಧ್ಯ ಮಾರಾಟ ತಡೆಗಟ್ಟಬೇಕು ಎಂದು ಅವರು ಮನವಿ ಮೂಲಕ ಒತ್ತಾಯಿಸಿದ್ದರು.
ಹಳ್ಳಿಗಳಿಗೆ ಮತ್ತು ನಗರದ ವಾರ್ಡ್ ಗಳಿಗೆ ಅಕ್ರಮವಾಗಿ ಮಧ್ಯ ಸರಬರಾಜು ಮಾಡುತ್ತಿರುವ ವೈನ್ ಶಾಪ್ ಮತ್ತು ಬಾರ್ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಅವರ ಪರವಾನಿಗೆಯನ್ನು ರದ್ದು ಮಾಡಬೇಕು.ಲೈನ್ ಶಾಪ್ ಮತ್ತು ಬಾರ್ ಗಳಲ್ಲಿ ಮಧ್ಯ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮ ಮಧ್ಯೆ ಮಾರಾಟಕ್ಕೆ ಸಾಥ್ ನೀಡುತ್ತಿರುವ ಅಬಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.ಈಗಾಗಲೇ ಕೆಲವು ವೈನ್ ಶಾಪ್ ಗಳು ಮತ್ತು ಬಾರ್ ಗಳು ಶಾಲೆ, ದೇವಸ್ಥಾನ, ಮಹಾಪುರುಷರ ಪುತ್ಥಳಿ ಹತ್ತಿರ ನಿರ್ಮಾಣವಾಗಿವೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇಂತಹ ವೈನ್ ಶಾಪ್ ಮತ್ತು ಬಾರ್ ಗಳನ್ನು ಪರಿಶೀಲಿಸಿ ಸ್ಥಳಾಂತರಿಸಬೇಕು.
ಪ್ರತಿ ಹಳ್ಳಿಗೆ ಪೊಲೀಸ್ ಇಲಾಖೆಯಿಂದ ಒಬ್ಬರನ್ನು ಪೊಲೀಸ್ ಬೀಟ್ ಎಂದು ನೇಮಕ ಮಾಡಿ ಬೇರೆ ಬೇರೆ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ನೇಮಕ ಮಾಡಿದ್ದು ಅವರಿಗೂ ಕೂಡ ಈ ಅಕ್ರಮ ಮಧ್ಯ ಮಾರಾಟದ ತಪಾಸಣೆ ನಡೆಸಿ ಮಧ್ಯ ಮಾರಾಟ ನಿಲ್ಲಿಸುವಂತೆ ಸೂಚಿಸಬೇಕು ಎಂದರು.ಈ ಮೇಲಿನ ಎಲ್ಲಾ ಒತ್ತಾಯಗಳ ವಿರುದ್ಧ ಕ್ರಮ ಕೈಗೊಂಡು ಹಳ್ಳಿಗಳಲ್ಲಿ ಮತ್ತು ವಾರ್ಡ್ ಗಳಲ್ಲಿ ಶಾಂತ ರೀತಿಯ ವಾತಾವರಣ ಸೃಷ್ಟಿ ಮಾಡಲು ಈ ಮೂಲಕ ಬಹುಜನ ಸಮಾಜ ಪಕ್ಷ ಗ್ರಾಮೀಣ ಮತಕ್ಷೇತ್ರದ ವತಿಯಿಂದ ಒತ್ತಾಯಿಸುತ್ತೇವೆ ಎಂದರು.
ಒಂದು ವೇಳೆ ತಾವುಗಳು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ತಾಲೂಕು ಆಡಳಿತ ಜವಾಬ್ದಾರಿಯಾಗಿರುತ್ತದೆ.ಮತ್ತು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಈ ಹೋರಾಟವನ್ನು ರೂಪಿಸಲಾಗುತ್ತದೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಬಕಾರಿ ಇಲಾಖೆ ಸಚಿವರ ಗಮನಕ್ಕೂ ತಂದು ಇದನ್ನು ತಡೆಗಟ್ಟುವವರೆಗೂ ಪಕ್ಷವು ನಿರಂತರವಾಗಿ ಹೋರಾಟ ನಡೆಯುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಉಸ್ತುವಾರಿ ಅಂಬಾರಾಯ ದಸ್ತಾಪೂರ, ಜಿಲ್ಲಾ ಕಾರ್ಯದರ್ಶಿ ರವಿ ಕೋರಿ,ಗ್ರಾಮೀಣ ಮುಖಂಡ ಶಂಭುಲಿಂಗ ಸಿಂಗೆ, ಹಾಗೂ ವಿಜಯಕುಮಾರ ವದರಿ ಸೇರಿದಂತೆ ಇತರರು ಇದ್ದರು.