ಯಲ್ಹೇರಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಅಮಾನತಿಗೆ ಕ ರ ವೇ ತಾಲೂಕ ಘಟಕ ಆಗ್ರಹ.

ಯಲ್ಹೇರಿ ಗ್ರಾಮಪಂಚಾಯತ್  ಅಭಿವೃದ್ಧಿ ಅಧಿಕಾರಿಯ ಅಮಾನತಿಗೆ  ಕ ರ ವೇ ತಾಲೂಕ ಘಟಕ  ಆಗ್ರಹ.

ಯಲ್ಹೇರಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಅಮಾನತಿಗೆ ಕ ರ ವೇ ತಾಲೂಕ ಘಟಕ ಆಗ್ರಹ.

ಗುರುಮಿಠಕಲ್ : ಇಲ್ಲಿನ ಸಮೀಪದ ಯಲ್ಹೇರಿ ಗ್ರಾಮ ಪಂಚಾಯತಿಯಲ್ಲಿ ಕಳಪೆ ಕಾಮಗಾರಿ ಆಗಿದ್ದು ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಿಕೊಳ್ಳಬಾರದೆಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರು ಕೂಡ ಗುತ್ತಿಗೆದಾರರು ಮತ್ತು ಪಿ ಡಿ ಓ ಅವರು ಕಾಮಗಾರಿಯ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಕರವೇ ಗುರುಮಿಠಕಲ್ ತಾಲೂಕಧ್ಯಕ್ಷರಾದ ಶರಣಬಸಪ್ಪ ಯಲ್ಹೇರಿಯವರು ಹೇಳಿದರು.

 ಜೆ ಜೆ ಎಮ್ ಕಾರ್ಯವು ಸುಮಾರು 4ವರ್ಷಗಳಿಂದ ಕಾಮಗಾರಿ ಮಾಡುತ್ತಿದ್ದು ಇನ್ನೂ ಕೂಡ ಕಾಮಗಾರಿಯು ಪೂರ್ಣಗೊಂಡಿರುವುದಿಲ್ಲ, ಅಂದಾಜು 1. 74 ಲಕ್ಷ ಕಾಮಗಾರಿಯನ್ನು, 3 ವರ್ಷಗಳ ಹಿಂದೆಯೇ ಸುಮಾರು 1.20ಕೋಟಿ ರೂಪಾಯಿಯನ್ನು ಗುತ್ತಿಗೆ ದಾರರಿಗೆ ಸಂದಾಯವಾಗಿರುತ್ತದೆ, ಆದುದರಿಂದ ತನಿಖಾ ತಂಡವನ್ನು ರಚಿಸಿ ಕಾಮಗಾರಿಯ ಸಂಪೂರ್ಣ ತನಿಖೆ ನಡಸಬೇಕೆಂದು ಗುರುಮಿಠಕಲ್ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು ಈ ಸಂದರ್ಭದಲ್ಲಿ ಭೀಮು ಬುದುರ್, ಶರಣು ಮಜ್ಜಿಗೆ, ಚನ್ನಪ್ಪ ಕಾಕಲ್ವರ್, ಕಾಶೀನಾಥ್ ಚಂಡ್ರಿಕಿ, ಮುಂತಾದವರು ಇದ್ದರು.