ಹಡಪದ ಅಪ್ಪಣ್ಣ ನವರ 891ನೇ ಜಯಂತಿ – ಜುಲೈ 10ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಭವ್ಯ ಕಾರ್ಯಕ್ರಮ

ಹಡಪದ ಅಪ್ಪಣ್ಣ ನವರ 891ನೇ ಜಯಂತಿ – ಜುಲೈ 10ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಭವ್ಯ ಕಾರ್ಯಕ್ರಮ

ಹಡಪದ ಅಪ್ಪಣ್ಣ ನವರ 891ನೇ ಜಯಂತಿ – ಜುಲೈ 10ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಭವ್ಯ ಕಾರ್ಯಕ್ರಮ

ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಶಕ್ತಿ ಪ್ರದರ್ಶನ ಹಾಗೂ ಜಾಗೃತಿ ಸಮಾವೇಶ

ಕಲಬುರಗಿ:12ನೇ ಶತಮಾನದ ಮಹಾನ್ ಶರಣ, ನಿಜಸುಖಿ ಹಡಪದ ಅಪ್ಪಣ್ಣ ನವರ 891ನೇ ಜಯಂತ್ಯುತ್ಸವ ಕಾರ್ಯಕ್ರಮವು ಇದೇ ಜುಲೈ 10, ಗುರುವಾರ ಸಂಜೆ 5 ರಿಂದ 6 ಗಂಟೆ ವರೆಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಆಚರಣೆಯೊಂದಿಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾಂಸ್ಕೃತಿಕ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವಾರು ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.

ಸಮಾಜದ ಪ್ರಮುಖ ಬೇಡಿಕೆಗಳು:

* ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ

* 100 ಕೋಟಿ ರೂ. ಅನುದಾನ ಮೀಸಲಾತಿ

* ಮಸಬಿನಾಳ, ದೇಗಿನಾಳ, ಗವಿ ಅಭಿವೃದ್ಧಿಗೆ ಬಿಕೆಡಿಬಿ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಸೇರ್ಪಡೆ

* ಶರಣ ಪೀಠ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ

* ಸಮುದಾಯದವರಿಗೆ ಏಕರೂಪದ ಜಾತಿ ಪ್ರಮಾಣ ಪತ್ರ ನೀಡುವುದು

* 2ಎ ಮೀಸಲಾತಿಯಲ್ಲಿ ಸ್ಪಷ್ಟತೆ

ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಅನ್ನಧಾನಿ ಭಾರತಿ ಅಪ್ಪಣ್ಣ ಸ್ವಾಮೀಜಿಗಳ ಸಾನ್ನಿಧ್ಯವಿರುವುದು ವಿಶೇಷ. “*ಬೆಂಗಳೂರು ಚಲೋ*” ಕರೆ ನೀಡಿದ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸಂಘಟನೆಗಳು, ನೂರಾರು ಸದಸ್ಯರೊಂದಿಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲು ತೀರ್ಮಾನಿಸಿವೆ.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಗಳ ಪ್ರಮುಖರಾದ ಬಸವರಾಜ ಹಡಪದ, ಮಲ್ಲಿಕಾರ್ಜುನ ಬಿ. ಹಡಪದ, ಈರಣ್ಣ ಹಡಪದ, ಭಗವಂತ ಹಡಪದ, ರಮೇಶ್ ಹಡಪದ, ರುದ್ರಮಣಿ ಅಪ್ಪಣ್ಣ, ಮಹಾತೇಶ ಇಸ್ಲಾಂಪೂರೆ, ಶಿವಾನಂದ ಬಬಲಾದ, ಚಂದ್ರಶೇಖರ ಹಡಪದ, ವಿನೋದ ಅಂಬಲಗಾ ಮೊದಲಾದವರು ಶಕ್ತಿ ಪ್ರದರ್ಶನದಲ್ಲಿ ಸಹಭಾಗಿಯಾಗಲು ಸಮಾಜದ ಬಂಧುಗಳಿಗೆ ಕರೆ ನೀಡಿದ್ದಾರೆ.

ಸಮಾಜದ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಿ, ಸಮಾಜದ ಪ್ರಗತಿಗೆ ಕೈ ಜೋಡಿಸೋಣ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ.