ಸ್ವಗ್ರಾಮದಲ್ಲಿ ಯೋಧನಿಗೆ ಅದ್ದೂರಿ ಸ್ವಾಗತ ಸಮಾರಂಭ

ಸ್ವಗ್ರಾಮದಲ್ಲಿ ಯೋಧನಿಗೆ ಅದ್ದೂರಿ ಸ್ವಾಗತ ಸಮಾರಂಭ

ಸ್ವಗ್ರಾಮದಲ್ಲಿ ಯೋಧನಿಗೆ ಅದ್ದೂರಿ ಸ್ವಾಗತ ಸಮಾರಂಭ

ವಾಡಿ: ಸಮೀದ ಬಳವಡಿ ಗ್ರಾಮದಲ್ಲಿ ಭಾರತೀಯ ಸೇನಾಪಡೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಷಣ್ಮುಖ ಲೋಕು ಚವ್ಹಾಣ ಅವರಿಗೆ ಗ್ರಾಮದ ಸಮಸ್ತ ಅಭಿಮಾನಿ ಬಳಗದಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

 ಪೂಜ್ಯ ಶ್ರೀ ಸೋಮಶೇಖರ್ ಶಿವಾಚಾರ್ಯರು ಕಂಬಳೇಶ್ವರ ಮಠ ಚಿತಾಪುರ ಶ್ರೀಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹುಟ್ಟಿದರೆ ತಾಯಿ ಸಂತೋಷ ಪಡಬೇಕು ಬೆಳೆದರೆ ತಂದೆ ಗರ್ವ ಪಡಬೇಕು,

ಬದುಕಿದರೆ ಸಮಾಜ ಇಷ್ಟಪಡಬೇಕು ಅದಕ್ಕೆ ನಮ್ಮ ಷಣ್ಮುಖ ಲೋಕು ಚವ್ಹಾಣ ರವರು ಉದಾರಣೆ ಯಾಗಿದ್ದಾರೆ, ಅವರು ತಂದೆ, ತಾಯಿ, ಹೆಂಡತಿ ಮಕ್ಕಳ ಪರಿವೇ ಇಲ್ಲದೆ ದೇಶದ ರಕ್ಷಣೆಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದು ನಿಜಕ್ಕೂ ಹೆಮ್ಮೆಯ ವಿಷಯ, ಇದಕ್ಕೆ ಅವರ ತಂದೆ ತಾಯಿ ದೊಡ್ಡ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.

ಪೂಜ್ಯಶ್ರೀ ಜೇಮಸಿಂಗ ಮಹಾರಾಜರು ಯಲ್ಲಾಲಿಂಗೇಶ್ವರ ಪುಣ್ಯಾಶ್ರಮ ಮುಗುಳನಾಗಾಂವ, ಪೂಜ್ಯಶ್ರೀ ರಾಜಶೇಖರ ಶಿವಾಚಾರ್ಯರು ಸಿದ್ದೇಶ್ವರ ಹಿರೇಮಠ ಹಳಕರ್ಟಿ ಮಾತನಾಡಿದರು. 

ಈ ಸಂದರ್ಭದಲ್ಲಿರಮೇಶ ಕಾರಬಾರಿ, ಸುರೇಶ ರಾಠೋಡ, ದಂಡಯ್ಯ ಸ್ವಾಮಿ ಹಿರೇಮಠ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ವಿಶ್ವನಾಥ್ ರೆಡ್ಡಿ ಮಾಲಿ ಪಾಟೀಲ್ ,ವಿಕ್ರಮ್ ನಾಯಕ್ ಬಾಬುಮಿಯ,ತುಕಾರಾಮ ರಾಠೋಡ,ಗಿರಿಮಲ್ಲಪ್ಪ ಕಟ್ಟಿಮನಿ,

 ಫಕೀರಪ್ಪ ಎಸಿಸಿ,ವೀರಣ್ಣ ಯಾರಿ, ಕಾಶಿನಾಥ ಶೆಟಗಾರ,ಕಿಶನ ಜಾಧವ, ಅಂಬದಾಸ ಜಾಧವ ಇದ್ದರು

ರಾಚಯ್ಯ ಸ್ವಾಮಿ ಸ್ವಾಗತಿಸಿದರು ,ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು, ಅಂಬರೀಶ ಸ್ವಾಮಿ ವಂದಿಸಿದರು.

ಇದಕ್ಕೂ ಮುನ್ನ ವಾಡಿ ರೈಲ್ವೆ ನಿಲ್ದಾಣದಿಂದ ಬಳವಡಗಿ ಗ್ರಾಮದವರೆಗೆ ತೆರದ ಜೀಪ್ ನಲ್ಲಿ ಭವ್ಯ ಮೆರವಣಿಗೆ ನಡೆಯಿತು.ನೂರಾರು ಜನರು,ಬಂಜಾರ ನೃತ್ಯದೊಂದಿಗೆ ಮಹಿಳೆಯರು ಪಾಲ್ಗೊಂಡಿದ್ದರು.