ಬಂದ್ ಗೆ ಬೆಂಬಲಿಸಿ ಅಖಿಲ ಕರ್ನಾಟಕ ಡಾ.ಎಚ್.ಸಿ ಮಹದೇವಪ್ಪಾ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಭಟನೆ

ಬಂದ್ ಗೆ ಬೆಂಬಲಿಸಿ ಅಖಿಲ ಕರ್ನಾಟಕ ಡಾ.ಎಚ್.ಸಿ ಮಹದೇವಪ್ಪಾ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಭಟನೆ

ಬಂದ್ ಗೆ ಬೆಂಬಲಿಸಿ ಅಖಿಲ ಕರ್ನಾಟಕ ಡಾ.ಎಚ್.ಸಿ ಮಹದೇವಪ್ಪಾ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿಭಟನೆ

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆ‌ರ್.ಅಂಬೇಡ್ಕ‌ರ್ ಅವರ ಕುರಿತು ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹಸಚಿವ ಅಮಿತ್ ಶಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು, ಅಮಿತ್ ಶಾ ಅವರು ಅಂಬೇಡ್ಕ‌ರ್ ಪ್ರತಿಮೆ ಎದುರಿಗೆ ಮಂಡಿಯೂರಿ ಕುಳಿತು ದೇಶದ ಜನರ ಕ್ಷಮೆ ಕೇಳಬೇಕು ಎಂದು ಅಖಿಲ ಕರ್ನಾಟಕ ಡಾ.ಎಚ್.ಸಿ ಮಹಾದೇವಪ್ಪ ಅಭಿಮಾನಿಗಳ ಸಂಘದ ವತಿಯಿಂದ ಮಂಗಳವಾರ ನಗರದ ಆಳಂದ ಚೆಕಪೋಸ್ಟ್ ನಲ್ಲಿ ಪ್ರತಿಭಟನೆ ನಡೆಸಿದರು

         ನಂತರ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಓಂಕಾರ ವಠಾರ ಮಾತನಾಡಿ'ದೇಶದಲ್ಲಿನ 25 ಕೋಟಿಗೂ ಮಿಕ್ಕಿರುವ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಡಾ.ಬಿ.ಆ‌ರ್. ಅಂಬೇಡ್ಕ‌ರ್ ಅವರೇ ದೇವರು. ಅವರಿಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ. ಅಮಿತ್ ಶಾ ದೇಶದ ಜನರೆದುರು ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಪ್ರತಿಭಟನೆಯ ಕಿಚ್ಚು ದೇಶವ್ಯಾಪಿಯಾಗಲಿದೆ' ಎಂದು ಎಚ್ಚರಿಸಿದರು. ಅಂಬೇಡ್ಕ‌ರ್ ಅಂದರೆ ನಮ್ಮ ಉಸಿರು, ಶಕ್ತಿ, ರಕ್ತ, ಧ್ಯಾನ, ಶಿಕ್ಷಣ ದಲಿತರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ.ಅಂಬೇಡ್ಕರ ಯಾರು ಅಂತ ಅಮಿತ ಶಾ ಗೆ ತಿಳಿಸಿಕೊಡುತ್ತೇವೆ ಎಂದು ಹೇಳುತ್ತ ಪ್ರತಿಭಟನಕಾರರು ಜೈ ಭೀಮ್ ಘೋಷಣೆ ಕೂಗಿದರು. ಕೋಮುವಾದಿಗಳು ಒಡೆದು ಆಳುವುದನ್ನು ಇನ್ನಾದರೂ ನಿಲ್ಲಿಸಬೇಕು. ಅಂಬೇಡ್ಕ‌ರ್ ಕುರಿತಾಗಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಅವರು ಬರೆದಿರುವ ಸಂವಿಧಾನದ ಮೂಲಕವೇ ನಿಮ್ಮನ್ನು ಗಡಿಪಾರು ಮಾಡಲು ಒತ್ತಾಯಿಸುತ್ತೇವೆ ಎಂದು ಎಚ್ಚರಿಸಿದರು. ಸಂವಿಧಾನ ಬದಲಿಸುವ ಮಾತನಾಡಿದ ಮಾಜಿ ಸಂಸದ ಅನಂತಕುಮಾ‌ರ್ ಹೆಗಡೆ ಈಗ ಮನೆ ಸೇರಿದ್ದಾರೆ. ಅಮಿತ್ ಶಾ ಅವರಿಗೂ ಅದೇ ಗತಿ ಬರಲಿದೆ ಎಂದು ಕಿಡಿಕಾರಿದರು. 

      ಈ ಸಂದರ್ಭದಲ್ಲಿ ಕಲ್ಯಾಣಿ ತಳವಾರ,ಶರಣಪ್ಪ ಸಿಂಗೆ, ರಮೇಶ ವಠಾರ,ಸಂಜು ಕಮ್ಮಾನ,ಆನಂದ ತಾವರಗೇರಾ ಹುಲಿ,ಈಶ್ವರ ಸಜ್ಜನ ಸೇರಿದಂತೆ ಇತರರು ಇದ್ದರು.