ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಕಲ್ಯಾಣವಾಗುವದೆ.. ?

ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಕಲ್ಯಾಣವಾಗುವದೆ.. ?

 ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಕಲ್ಯಾಣವಾಗುವದೆ.. ?

ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡುವ ಉದ್ದೇಶದಿಂದ ಕಲಬುರಗಿಯಲ್ಲಿ 1982ರಿಂದ ಆಗಾಗ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ.ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಉತ್ಸವ ದಿನವೆ ಸಚಿವ ಸಂಪುಟ ನಡೆಯುತ್ತಿರುವ ಈ ವಿಶೇಷ ದಿನದಂದು ಕಲ್ಯಾಣ ಕರ್ನಾಟಕ ಕ್ಕೆ ಕಲ್ಯಾಣವಾಗುವುದೆ ಸಚಿವ ಸಂಪುಟ ಮುಗಿದ ನಂತರ ತಿಳಿಯಲಿದೆ.

ನಮ್ಮ ಭಾಗಕ್ಕೆ ಸಂವಿಧಾನ ವಿಶೇಷ ಸ್ಥಾನಮಾನ 371 j ಬಂದು 10 ವರ್ಷ ಕಳೆದರೂ ಅದರಿಂದ ನೀರಿಕ್ಷಿಷಿದಷ್ಟು ಲಾಭವಾಗಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಆಗಲಿಲ್ಲ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸರಿಯಾಗಿ ಭರ್ತಿ ಮಾಡಿಕೊಳ್ಳದೆ ಇರುವುದರಿಂದ ಇಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಅನುಪಾತದಲ್ಲಿ ಬಹಳಷ್ಟು ವ್ಯತ್ಯಾಸವಿರುವದರಿಂದ ಈ ಭಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಈಗಲೂ ಹಿಂದೆ ಬೀಳಲೂ ಕಾರಣವಾಗಿದೆ. 371j ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಅನುಮತಿ ಬೇಕಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಯಾಕೆ ಖಾಲಿ ಹುದ್ದೆಗಳನ್ನು ತುಂಬದೆ ಸರ್ಕಾರಗಳು ತಾರತಮ್ಯ ನೀತಿ ಅನುಸರಿಸುತ್ತಿವೆ. ಹೀಗಾದರೆ ಪ್ರಾದೇಶಿಕ ಅಸಮಾನತೆಯ ತೊಲಗದೆ ಹಾಗೆ ಮುಂದುವರಿಯುವುದರಲ್ಲಿ ಸಂದೇಹವಿಲ್ಲ.

 ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಇದ್ದು ಅವು ಸಮರ್ಪಕವಾಗಿ ಬಳಕೆಯಾಗದೆ ಇರುವುದು ಈ ಭಾಗದ ದುರ್ದೈವ ಎಂದೇ ಹೇಳಬಹುದು. ಕಲ್ಯಾಣ ಕರ್ನಾಟಕದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ಮಕ್ಕಳಿಗೂ, ಹಾಗೂ ಶಿಕ್ಷಣ ಸಂಸ್ಥೆಗಳಿಗೂ ಅಭಿವೃದ್ಧಿ ಮಂಡಳಿಯಿಂದ ಅನೇಕ ಯೋಜನೆಗಳನ್ನು ಜಾರಿ ತಂದು ಅವುಗಳಿಗೆ ಕಾಯಕಲ್ಪ ಒದಗಿಸಬೇಕು, ಸರಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅನುದಾನಿತ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳೆಂದು ತಾರತಮ್ಯ ನೀತಿ ಅನುಸರಿಸುತ್ತಿರುವುದು ಎಷ್ಟು ಸರಿ ಒಟ್ಟಾರೆಯಾಗಿ ನಮ್ಮ ಭಾಗದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಅಭಿವೃದ್ಧಿ ಮಂಡಳಿ ಕಂಕಣಬದ್ಧವಾಗಿ ಕಾರ್ಯ ನಿರ್ವಹಿಸಿ ಎಸ್ ಎಲ್ ಸಿ, ಪಿಯುಸಿ ಫಲಿತಾಂಶ ಸುಧಾರಣೆ ಮಾಡುವತ್ತ ಗಮನಹರಿಸಬೇಕಾಗಿದೆ. ನಮ್ಮ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಲೂ ಅತ್ಯುತ್ತಮ ಮಟ್ಟದ ಸ್ಪರ್ಧಾತ್ಮಕ ಕೇಂದ್ರಗಳನ್ನು ತೆಗೆದು ಅವರಿಗೆ ಅವರಿಗೆ ಅನೂಕೂಲ ಮಾಡಿ ಕೊಡಬೇಕಾಗಿದೆ. ಈಗ ಕಾಟಾಚಾರಕ್ಕಾಗಿ ಕೆವವೋಂದು ಯೋಜನೆಗಳನ್ನು ಹಾಕುತ್ತಿರುವದು ಈ ಭಾಗದ ಯುವಕರಿಗೆ ಇದು ನ್ಯಾಯ ಒದಗಿಸುತ್ತಿಲ್ಲ.

ಇನ್ನೂ ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಯುವಕರು ಮೇರಿಟ್ ಆಧಾರದ ಮೇಲೆ ಅನೇಕ ಹುದ್ದೆಗಳನ್ನು ಪಡೆದುಕೊಂಡಾಗ ಅವರನ್ನು 371 j ಮಿಸಲಾತಿ ಅಡಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಇದನ್ನು ತಕ್ಷಣ ಸರ್ಕಾರ ಹೋಗಲಾಡಿಸಿ ನಮ್ಮ ಭಾಗದ ಯುವಕರಿಗೆ ವಿಧ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದ ಮಿಸಲಾತಿಯಲ್ಲಿ ಯಾವ ನಿಯಮ ಅನುಸರಿಸಲಾಗುತ್ತದೆಯೋ ಅದೇ ನಿಯಮವನ್ನು 371 j ಮೀಸಲಾತಿ ಅನುಸರಿಸಬೇಕು ಎಂಬ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ ಹೀಗಾಗಿ ನಮಗೆ ಪದೇ ಪದೇ ನೇಮಕಾತಿ ಪದೋನ್ನತಿ ಸಂದರ್ಭದಲ್ಲಿ ಅನ್ಯಾಯವಾಗುತ್ತಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನದಂದೆ ನಡೆಯುತ್ತಿರುವ ಈ ಸಚಿವ ಸಂಪುಟ ನಮ್ಮ ಭಾಗಕ್ಕೆ ಕಲ್ಯಾಣ ಮಾಡುತ್ತದೆಯೋ ಕಾದು ನೋಡಬೇಕಾಗಿದೆ.

ಈರನಗೌಡ ಕೆ ಪಾಟೀಲ

ಮಾಧ್ಯಮ ಸಂಯೋಜಕರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ