ಯಡ್ರಾಮಿಯಲ್ಲಿ ರೈತ ಸಮಾವೇಶ ಯಶಸ್ವಿ ಲಕ್ಷ್ಮೀಕಾಂತ್ ಎ ಪಾಟೀಲ್ ಮದ್ದರಕಿ

ಯಡ್ರಾಮಿಯಲ್ಲಿ ರೈತ ಸಮಾವೇಶ ಯಶಸ್ವಿ ಲಕ್ಷ್ಮೀಕಾಂತ್ ಎ ಪಾಟೀಲ್ ಮದ್ದರಕಿ

ಯಡ್ರಾಮಿಯಲ್ಲಿ ರೈತ ಸಮಾವೇಶ ಯಶಸ್ವಿ ಲಕ್ಷ್ಮೀಕಾಂತ್ ಎ ಪಾಟೀಲ್ ಮದ್ದರಕಿ

 ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಎ ಪಾಟೀಲ ಮದ್ದರಕಿ ಅವರ ಅಧ್ಯಕ್ಷತೆಯಲ್ಲಿ ಯಡ್ರಾಮಿಪಟ್ಟಣದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಬೃಹತ್ ರೈತ ಜಾಗೃತಿ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಡಕೋಳ ಮಠದ ಪೀಠಾಧಿಪತಿ ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗು ಸಿದ್ದಲಿಂಗ ಮಹಾಸ್ವಾಮಿಗಳು ವೀರಕ್ತ ಮಠ ಯಡ್ರಾಮಿ ಹಾಗೂ ಶ್ರೀ ಮಲ್ಲಿಕಾರ್ಜುನ್ ಮುತ್ಯ ಮಹಲ್ ರೋಜಾ ಅವರು ವಹಿಸಿಕೊಂಡಿದ್ದರು ಕಾರ್ಯಕ್ರಮದ ಮುಖ್ಯ ಅಧ್ಯಕ್ಷತೆಯನ್ನು ಲಕ್ಷ್ಮಿಕಾಂತ್ ಎ ಪಾಟೀಲ್ ಮದ್ದರಕಿ ಅವರು ವಹಿಸಿಕೊಂಡಿದ್ದರು ಕಾರ್ಯಕ್ರಮದ ಜ್ಯೋತಿಬೆಳಗಿಸುವ ಕಾರ್ಯಕ್ರಮವನ್ನು ದೊಡ್ಡಪ್ಪ ಗೌಡ ಎಸ್ ಪಾಟೀಲ್ ಮಾಜಿ ಶಾಸಕರು ಜೇವರ್ಗಿ ಮತ್ತು ಶಿವರಾಜ್ ಪಾಟೀಲ್ ರದ್ದೇವಾಡಗಿ ಬಿಜೆಪಿ ಜಿಲ್ಲಾಧ್ಯಕ್ಷರು ಕಲ್ಬುರ್ಗಿ ಹಾಗೂ ರಾಜಶೇಖರ್ ಸಿರಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಭಾಗವಹಿಸಿದ್ದರು ಕಾರ್ಯಕ್ರಮದ ನೇತೃತ್ವವನ್ನು ಯಡ್ರಾಮಿ ತಾಲೂಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಮಾಳಿಂಗರಾಯ ಕಾರಗೊಂಡ ಅವರು ವಹಿಸಿಕೊಂಡಿದ್ದರು . ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಎ ಮದ್ದರಕಿ ಕಾರ್ಯಕ್ರಮದ ಕುರಿತು ಯಡ್ರಾಮಿ ತಾಲೂಕಿನ ಮೂಲಭೂತ ಸೌಕರ್ಯಗಳ ಕುರಿತು ಮಾತನಾಡಿದರು ಯಡ್ರಾಮಿ ಪಟ್ಟಣದಲ್ಲಿ ಇದುವರೆಗೆ ತಾಲೂಕ ಘೋಷಣೆಯಾಗಿ ಹಲವು ವರ್ಷಗಳಾದರು ತಾಲೂಕಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ತಾಲೂಕ ಘೋಷಣೆಯಾದರೂ ಇದುವರೆಗೆ ತಾಲೂಕಿನ ಸರ್ಕಾರಿ ಉಪ ಕಚೇರಿಗಳು ಸರಕಾರದಿಂದ ಮಂಜೂರು ಆಗದಿರುವುದು ನಾಚಿಕೆಗೇಡಿತನದ ಸಂಗತಿ ಯಡ್ರಾಮಿ ತಾಲೂಕಿಗೆ ಮಲತಾಯಿ ಧೋರಣೆ ತೋರಲಾಗಿದೆ ಅದೇ ರೀತಿಯಾಗಿ ತಾಲೂಕ ಘೋಷಣೆ ಆದರೆ ಸಾಲದು ಶಾಸಕರೇ ಕೆಕೆಆರಡಿಬಿ ಅನುದಾನದಿಂದ ಯಡ್ರಾಮಿ ಪಟ್ಟಣದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು? ಈ ಕೂಡಲೇ ತಾಲೂಕಿನ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಯಡ್ರಾಮಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಬೇಕು ಒಂದು ವೇಳೆ ಈ ವಿಷಯದ ಕುರಿತು ನಿರ್ಲಕ್ಷ ತೋರಿದರೆ ಮುಂದೆ ಬರುವಂತಹ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ವತಿಯಿಂದ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟವನ್ನು ಅತಿ ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಎ ಪಾಟೀಲ್ ಮದ್ದರಕಿ ಈ ಸಂದರ್ಭದಲ್ಲಿ ಮಾತನಾಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ಪತ್ರಿಕಾ ಮಾಧ್ಯಮದವರು ಹಾಗೂ ಯಡ್ರಾಮಿ ತಾಲೂಕಿನ ರೈತಪರ ಹೋರಾಟಗಾರರು ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಹಳ್ಳಿಯ ರೈತರು ಮತ್ತು ಜೇವರ್ಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕ ಅಧ್ಯಕ್ಷ ಸಿದ್ದಲಿಂಗ ಪೂಜಾರಿ ಹಾಲಗಡ್ಲಾ ಹಾಗು ಅಮರನಾಥ್ ಸಾಹು ಕುಳಗೇರಿ ಶ್ರೀಧರ್ ಕುಳಗೇರಿ ಶಫಿಹುಲ್ಲಾ ದಖನಿ ಲಾಳೆ ಸಾಬ್ ಮನಿಯರ್ ಶಿವನಾಗ ಚಂದ್ರಕಾಂತ್ ಕುಸ್ತಿ ಶರಣಗೌಡ ಸೋಮಪ್ಪಗೋಳ ಇನ್ನಿತರ ಹಳ್ಳಿಯ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 

 ವರದಿ ಜೆಟ್ಟಪ್ಪ ಎಸ್ ಪೂಜಾರಿ