ರಾಯಚೂರು ಜಿಲ್ಲೆಯ ಶಿಕ್ಷಣ ಫಲಿತಾಂಶ ಸುಧಾರಣೆಗೆ ತುರ್ತು ಕ್ರಮ ಕೈಗೊಳ್ಳಿ – ಸಚಿವ ಶರಣಪ್ರಕಾಶ ಪಾಟೀಲ

ರಾಯಚೂರು: ರಾಯಚೂರು ಜಿಲ್ಲಾ ಕೆಡಿಸಿ ಸಭೆಯಲ್ಲಿ ಮಾತನಾಡಿದ ಸಚಿವ ಶರಣಪ್ರಕಾಶ ಪಾಟೀಲ ಅವರು, ಜಿಲ್ಲೆಯಲ್ಲಿ SSLC ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶ ನಿರಂತರವಾಗಿ ಹಿಂಬಾಲದಲ್ಲಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೇರೆಗೆ ನೀಡಿದ್ದಾರೆ.

“ಪ್ರತಿ ಬಾರಿ ಜಿಲ್ಲೆಯ ಕಳಪೆ ಸಾಧನೆ ಆರೋಗ್ಯಕರ ಬೆಳವಣಿಗೆಯಲ್ಲ. ಇದನ್ನು ಸರಿಪಡಿಸಲು ಜಿಲ್ಲಾಡಳಿತವೇ ಮುಂದಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗಾಗಿ ವಿಶೇಷ ಕಾರ್ಯಯೋಜನೆ ರೂಪಿಸಿ, ನಡವಳಿಕೆ ಕೈಗೊಳ್ಳಬೇಕು” ಎಂದು ಸಚಿವರು ಹೇಳಿದರು.

ಅವರು ಮುಂದಾಗಿ, ಪ್ರತಿಯೊಂದು ಹಳ್ಳಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ಹಾಗೂ ಪ್ರತೀ ಶಾಲೆಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯನ್ನು ನೊಡಲ್ ಅಧಿಕಾರಿಗಳಾಗಿ ನೇಮಿಸುವಂತೆ ಸಲಹೆ ನೀಡಿದರು. ಈ ಮೂಲಕ ನಿರಂತರ ಮೌಲ್ಯಮಾಪನ, ತರಗತಿಯ ಮೇಲ್ವಿಚಾರಣೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಕ್ಕಾಗಿ ಸ್ಪಷ್ಟ ಕಾರ್ಯ ಹಂಚಿಕೆಯಾಗಬೇಕು ಎಂದರು.

ಪರೀಕ್ಷಾ ಭಯ ನಿವಾರಣೆ ಮತ್ತು ಸಿದ್ಧತೆಯ ದೃಷ್ಟಿಯಿಂದ ಶೈಕ್ಷಣಿಕ ವರ್ಷದಲ್ಲೇ ಹೆಚ್ಚು ಕಿರು ಪರೀಕ್ಷೆಗಳು, ವಿಶೇಷ ತರಗತಿಗಳು ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆ ಮತ್ತು ಪಿಯು ಶಿಕ್ಷಣ ಇಲಾಖೆ ಈಗಿನಿಂದಲೇ ಸಜ್ಜಾಗಬೇಕು. ಯೋಜಿತ ಕಾರ್ಯ ಕ್ರಮದ ಮೂಲಕ ಜಿಲ್ಲೆಗೆ ಉತ್ತಮ ಶೈಕ್ಷಣಿಕ ಪ್ರತಿಷ್ಠೆ ತಂದೆ ಮಾಡಬೇಕೆಂಬ ದೃಷ್ಟಿಕೋಣ ಸಚಿವರು ವ್ಯಕ್ತಪಡಿಸಿದರು. ಸಭೆಯಲ್ಲಿ ಶಾಸಕರಾದ ಎನ್.ಎಸ್.ಬೋಸರಾಜು,ಪಂಪಯ್ಯ,ಎ.ವಸಂತಕುಮಾರ,ಬಸಣ್ಣಗೌಡ ಬಾದರ್ಲಿ, ಹಾಗೂ ಪಾಪಯ್ಯ ಮುರಾರಿ ಸೇರಿದಂತೆ ಜಿಲ್ಲಾಧಿಕಾರಿ, ಸಿಇಒ, ಎಸ್ ಪಿ. ಸಭೆಯಲ್ಲಿ ಇದ್ದರು.