ಕಾಳಿ ಸೇತುವೆ ಕುಸಿತ ಟ್ರಕ್ ಚಾಲಕ ಅಪಾಯದಿಂದ ಪಾರು
ಕಾರವಾರ: ಸದಾಶಿವಗಡದಿಂದ ಕಾರವಾರಕ್ಕೆ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕ ಕಲ್ಪಿಸುವ ಹಳೆಯ ಕಾಳಿ ಸೇತುವೆ ಕುಸಿದು ಒಬ್ಬ ಟ್ರಕ್ ಚಾಲಕ ಗಾಯಗೊಂಡು. ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.
ಗೋವಾ ದಿಂದ ಕರ್ನಾಟಕವನ್ನು ಸಂಪರ್ಕಿಸುವ ಕಾಳಿ ನದಿಗೆ ಅಡ್ಡಲಾಗಿರುವ ಹಳೆಯ ಸೇತುವೆವು ಬುಧವಾರ ನಸುಕಿನ 1 ಗಂಟೆ ಸುಮಾರಿಗೆ ಕುಸಿದುಬಿದ್ದಿದೆ.
“ಚಿತ್ತಾಕುಲ ಪೊಲೀಸ್ ಠಾಣೆಯ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಸೇತುವೆ ಕುಸಿದಿರುವುದನ್ನು ಗಮನಿಸಿ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ನೀಡಿದರು. ನದಿಯಲ್ಲಿ ಟ್ರಕ್ ಇತ್ತು ಮತ್ತು ಗಾಯಗೊಂಡ ವ್ಯಕ್ತಿ ಅದರ ಮೇಲಿದ್ದರು. ಸ್ಥಳೀಯ ಮೀನುಗಾರರು ತಮಿಳುನಾಡಿನ ಬಾಲ ಮುರುಗನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಅವರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಮತ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ” ಎಂದು ಎಸ್ಪಿ ನಾರಾಯಣ್ ಅವರು ತಿಳಿಸಿದ್ದಾರೆ.