ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಹೋರಾಟಗಾರ ಲಿಂಗರಾಜ ಸಿರಗಾಪೂರ ಆಯ್ಕೆ

ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಹೋರಾಟಗಾರ ಲಿಂಗರಾಜ ಸಿರಗಾಪೂರ ಆಯ್ಕೆ
ಕಲಬುರಗಿ:ಕಲಬುರಗಿಯ ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರಿಗೆ ಫರಿದಾಬಾದನ ಮ್ಯಾಜಿಕ್ ಆಂಡ್ ಆರ್ಟ್ಸ್ ವಿಶ್ವವಿದ್ಯಾಲಯವು ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಚೇರಮನ್ ಡಾ.ಸಿ.ಪಿ.ಯಾದವ ಅವರು ತಿಳಿಸಿದ್ದಾರೆ.
ಸುಮಾರು ಎರಡು ದಶಕಗಳಿಂದ ಹೋರಾಟ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಿರಗಾಪೂರ ಅವರಿಗೆ ಜೂನ್ ತಿಂಗಳ ಎರಡನೆ ವಾರದಲ್ಲಿ ನವದೆಹಲಿಯಲ್ಲಿ ಮ್ಯಾಜಿಕ್ ಆಫ್ ಆರ್ಟ್ಸ್ ವಿಶ್ವ ವಿದ್ಯಾಲಯದ ವತಿಯಿಂದ ನಡೆಯುವ ಪ್ರಶಸ್ತಿ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.