ಜಯನಗರ ಶಿವಮಂದಿರದಲ್ಲಿ ವಿಜ್ರಂಭಣೆಯ ಶಿವಪಾರ್ವತಿ ಕಲ್ಯಾಣೋತ್ಸವ ಆಚರಣೆ

ಜಯನಗರ ಶಿವಮಂದಿರದಲ್ಲಿ ವಿಜ್ರಂಭಣೆಯ ಶಿವಪಾರ್ವತಿ ಕಲ್ಯಾಣೋತ್ಸವ ಆಚರಣೆ

ಜಯನಗರ ಶಿವಮಂದಿರದಲ್ಲಿ ವಿಜ್ರಂಭಣೆಯ ಶಿವಪಾರ್ವತಿ ಕಲ್ಯಾಣೋತ್ಸವ ಆಚರಣೆ 

ಕಲಬುರಗಿ: ಮಹಾ ಶಿವರಾತ್ರಿ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಇಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವ ಪಾರ್ವತಿ ಕಲ್ಯಾಣೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.

 ಟ್ರಸ್ಟ್ ಹಾಗೂ ಬಡಾವಣೆಯ ಮಹಿಳೆಯರಿಂದ ಶಿವಾ ಪಾರ್ವತಿ ಕಲ್ಯಾಣೋತ್ಸವ ನೆರವೇರಿಸಿದರು.ನೆರೆದ ಜನರಿಂದ ಹರ್ ಹರ್ ಮಹಾದೇವ ಎಂಬ ಘೋಷಣೆ ಕೂಗಿದರು.ನಂತರ ಶಿವಪಾರ್ವತಿಯರಿಗೆ ಅಕ್ಷತಾ ಹಾಕಿದರು. ಅರ್ಚಕ ವಿಘ್ನೇಶ ಕೊಡದೂರ ಮಂಗಲೋತ್ಸವ ನಡೆಸಿಕೊಟ್ಟರು.ಜಯನಗರ ಶಿವಮಂದಿರದಲ್ಲಿ ಶಿವಪಾರ್ವತಿ ಕಲ್ಯಾಣೋತ್ಸವ ಮಾಡುತ್ತಿರುವುದು ವಿಶೇಷ ಪದ್ಧತಿಯಾಗಿದೆ.ಇಂಥ ಧರ್ಮ ಕಾರ್ಯಗಳು ಎಲ್ಲೆಡೆ ನಡೆಯಬೇಕು.ಶಿವನ ಆಧಾರಿಸುವುದು ಹಾಗೂ ಶಿವನನ್ನು ನೆನೆಯುವುದೇ ಮಹಾಶಿವರಾತ್ರಿ ಆಗಿದೆ.ಶಿವ ಶಿವ ಎಂದರೆ ಭಯವಿಲ್ಲ.ಮನಸ್ಸಿಗೆ ನೆಮ್ಮದಿ ಇರುತ್ತದೆ ಎಂದರು.

 ಸಾಹಿತಿ ಡಾ.ಚಿ.ಸಿ.ನಿಂಗಣ್ಣ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು.ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಸುಮಾರು 15 ವರ್ಷದಿಂದ ಜಯನಗರ ಶಿವಮಂದಿರದಲ್ಲಿ ಶಿವಪಾರ್ವತಿ ಕಲ್ಯಾಣೋತ್ಸವ ಮಾಡಲಾಗುತ್ತಿದೆ.ಈ ವರ್ಷವೂ ವಿಜ್ರಂಭಣೆಯಿಂದ ಆಚರಿಸಲಾಯಿತು.ಇದಕ್ಕೆಲ್ಲ ಎಲ್ಲರ ಸಹಕಾರ ಸಿಕ್ಕಿದೆ ಎಂದರು.ಸಂಜೆ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ಜರುಗಿತು.

 ಟ್ರಸ್ಟ್ ಪದಾಧಿಕಾರಿಗಳಾದ ವಿರೇಶ ದಂಡೋತಿ, ಸೂರ್ಯಕಾಂತ ಕೆ.ಬಿ, ಸಿದ್ಧಲಿಂಗ ಗುಬ್ಬಿ,ಬಸವರಾಜ ಮಾಗಿ,ಬಂಡಪ್ಪ ಕೇಸೂರ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ನಾಗರಾಜ ಖೂಬಾ,ಬಸವರಾಜ ಅನ್ವರಕರ,ಭೀಮಾಶಂಕರ ಶೆಟ್ಟಿ,ಎಂ.ಡಿ.ಮಠಪತಿ,ಗುರುಪಾದಪ್ಪ ಕಾಂತಾ,ಎಸ್.ಡಿ.ಸೇಡಂಕರ,ವೀರಪ್ಪ ಹುಡಗಿ,ಅಶೋಕ ಪಾಟೀಲ, ಶಿವಕುಮಾರ ಪಾಟೀಲ್, ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ, ವಿಜಯಾ ಚವ್ಹಾಣ,ಮಹಿಳಾ ಘಟಕದ ಪದಾಧಿಕಾರಿಗಳಾದ ಶೈಲಜಾ ವಾಲಿ, ಅನಿತಾ ನವಣಿ, ಸುರೇಖಾ ಬಾಲಕೊಂದೆ, ಲತಾ ತುಪ್ಪದ ವಿಜಯಾ ದಂಡೋತಿ, ಗೀತಾ ಸಿರಗಾಪೂರ , ಪಾರ್ವತಿ ಶೆಟ್ಟಿ, ಮಹಾಂತಮ್ಮ ಮಠಪತಿ,ಭಾರತಿ ನಾಗೇಂದ್ರಪ್ಪ ರೇಷ್ಮೆ,ಶಕುಂತಲಾ ಮರಡಿ, ಮಹಾಲಿಂಗಮ್ಮ ಮಠಪತಿ,ಬಡಾವಣೆಯವರಾದ ಅರುಣ ಬೀದಿಮನಿ,ಅನೀಲ ಆವಂಟಿ ಸೇರಿದಂತೆ ಅನೇಕ ಮಹಿಳೆಯರು ಮತ್ತು ಮಕ್ಕಳು ಹಾಗೂ ಹಿರಿಯರು ಉಪಸ್ಥಿತರಿದ್ದರು