ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘದಿಂದ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ

ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘದಿಂದ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ
ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ (ರಿ) ರಾಜಾಪೂರ ಕಲಬುರಗಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವಿಧ ಜಿಲ್ಲೆಗಳ ಸಾಧಕ ಶಿಕ್ಷಕರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.
ಗಂಗಾ ಪರಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಖ್ಯಾತ ಉದ್ದಿಮೆದಾರರಾದ ಶ್ರೀಮತಿ ಅಮರೇಶ್ವರಿ ಬಾಬುರಾವ ಚಿಂಚನಸೂರ'ರವರು ವಿದ್ಯಾದೇವತೆ ಶಾರದೆಯು ಎಲ್ಲರಲ್ಲಿಯೂ ನೆಲೆಸಿಯುತ್ತಾಳೆ ಆದರೆ ಯಾರು ಆಕೆಯನ್ನು ಶ್ರದ್ದೆಯಿಂದ ಪೂಜಿಸಿ ಕಷ್ಟಪಟ್ಟು ಓದುತ್ತಾರೋ ಅವರು ಜೀವನದಲ್ಲಿ ಉನ್ನತಮಟ್ಟದಲ್ಲಿರುತ್ತಾರೆಂದು ತಮ್ಮ ಉದ್ಘಾಟನಾ ನುಡಿಗಳನ್ನಾಡಿದರು .ವಿಶೇಷ ಅಥಿತಿಗಳಾಗಿ ಆಗಮಿಸಿದ್ದ ಗುಲ್ಬರ್ಗ ವಿ. ವಿ.ಕಲಬುರಗಿಯ ಮಾನ್ಯ ಕುಲಸಚಿವರು ಪ್ರೊ: ರಮೇಶ್ ಲಂಡನಕರ್'ರವರು ಇಂದಿನ ಆಧುನಿಕ ಯುಗದಲ್ಲಿ ನೈತಿಕ ಮೌಲ್ಯಗಳು ಬಹಳ ಮುಖ್ಯ ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡುವುದರ ಜೊತೆಗೆ ನೈತಿಕ ಮೌಲ್ಯಗಳನ್ನೂ ಬೆಳೆಸಬೇಕೆಂದು ಹೇಳಿದರು.ಪ್ರಶಸ್ತಿ ಪ್ರದಾನವನ್ನು ನೆರವೇರಿಸಿದ ಖ್ಯಾತ ವೈದ್ಯರಾದ ಡಾ. ಫಾರೂಕ್ ಅಹ್ಮದ್ ಮಣುರ'ರವರು ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಶ್ರದ್ದೆಯಿಂದ ಓದಿದರೆ ಮಾತ್ರ ಅಂದುಕೊಂಡ ಗುರಿ ಸಾಧಿಸಲು ಸಾಧ್ಯ ಈ ನಿಟ್ಟಿನಲ್ಲಿ ಶಿಕ್ಷಕರು ಕೂಡ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಯಲ್ಲಾಲಿಂಗ ದಂಡಿನ್ ಅವರು ಮಾತನಾಡಿ ಶಿಕ್ಷಕರು ದೇಶದ ಆಸ್ತಿ ಶಿಕ್ಷಕರನ್ನು ಯಾವಾಗಲೂ ಗೌರವಿಸಬೇಕು ಗುರುವಿನ ಗುಲಾಮನಾಗುವ ತನಕ ದೊರೆಯುವುದಿಲ್ಲ ಮುಕ್ತಿ. ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ,ಡಾ. ಶರಣಪ್ಪ ಗುಂಡಗುರ್ತಿ, ವೀರುಪಾಕ್ಷಪ್ಪ ಗಡ್ಡದ, ಡಾ. ಸುನೀಲಸುಮಾರ್ ವಂಟಿ, ಗೌತಮ್ ಬೊಮ್ಮನಳ್ಳಿ, ಶರಣಬಸಪ್ಪ ಪರಮಗೊಂಡ ಚಿಮ್ಮಾದಲ್ಲಾಯಿ ,ಡಾ. ವಿಜಯಕುಮಾರ್ ಗೋತಗಿ, ಅಶೋಕ ಕಾಳೆ ಭಾಗವಹಿಸಿದ್ದರು, ಡಾ. ರಾಮ್. ಸಿ. ಎಂ, ಸಿದ್ರಾಮ್ ಹಂಚಿನಾಳ, ಮುಕ್ರಮ ಇನಾಂದಾರ್ ಸುಭಾಸ್ ಬನಪಟ್ಟೆ, ಚಂದ್ರಕಲಾ ಜಮಾದಾರ, ಶಿವಪೂಜಾ ನಿಸರ್ಗ,ಶೃಷ್ಟಿ,ಸಾಕ್ಷಿ ಬ್ರಹ್ಮಾನಂದ ಭಾವನಾ ಚಿಂಚೋಳಿ ವಾಣಿಶ್ರೀ ಅಗ್ನಿಹೋತ್ರಿ ಇವರಿಂದ ಸಂಗೀತಾ ರಸಮಂಜರಿ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷರಾದ ಪ್ರೊ: ರಮೇಶ.ಬಿ.ಯಾಳಗಿ ಇವರು ಪ್ರಾಸ್ತಾವಿಕವಾಗಿ ಅಧ್ಯಕ್ಷರ ನುಡಿಗಳು ಆಡಿದರು. ಸಂಚಾಲಕರಾದ ಅಶೋಕ ಉಪ್ಪಿನ ಶರಣು ತೇಗಲತಿಪ್ಪಿ ಇದ್ದರು.