ಹಂಪಿ ಉತ್ಸವದಲ್ಲಿ ಕವಿತೆ ವಾಚಿಸಿದ ಸುವರ್ಣ ರಾಠೋಡ
ಹಂಪಿ ಉತ್ಸವದಲ್ಲಿ ಕವಿತೆ ವಾಚಿಸಿದ ಸುವರ್ಣ ರಾಠೋಡ
ಶಹಾಪೂರ : ಸಮಾಜದ ಒಳಿತಿಗಾಗಿ ಶ್ರಮಿಸಿದ ಬಸವಾದಿ ಶರಣರ ಸ್ಮರಣೆ,ಪ್ರಕೃತಿ, ಪ್ರೀತಿ,ಪ್ರೇಮ,ಪ್ರಣಯ,ಬಡವ,ಬಲ್ಲಿದ,ಸೊಬಗು,ಸೌಂದರ್ಯ,ಕನ್ನಡ ನಾಡು,ನುಡಿ,ನೆಲ,ಜಲದ ಜ್ವಲಂತ ಸಮಸ್ಯೆಗಳು ಕುರಿತು ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ಮಾರ್ದನಿಸಿದವು.
ಫೆಬ್ರುವರಿ 14 ರಂದು ಕರ್ನಾಟಕ ಸರಕಾರ ಹಾಗೂ ವಿಜಯನಗರ ಜಿಲ್ಲಾಡಳಿತ ವತಿಯಿಂದ ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಮುಖ್ಯ ವೇದಿಕೆಯ ಮೇಲೆ ಅತ್ಯಂತ ವಿಜ್ರಂಬಣೆಯಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಪ್ರತಿಧ್ವನಿಸಿದ ಕವನಗಳು ಮತ್ತು ಗಜಲ್ ಗಳು.ಇದು ಕವಿ ಹೃದಯಗಳ ಸಮಾಗಮ ಎಂತಲೂ ಕರೆಯಬಹುದು.
ಯಾದಗಿರಿಯ ಜಿಲ್ಲೆಯ ಶಹಪುರ ತಾಲೂಕಿನ ಹೊಸಕೇರಿ ಗ್ರಾಮದ ಕವಯತ್ರಿ ಸುವರ್ಣ ರಾಠೋಡ್ ಅವರು ರೈತನೆಂದರೆ ಕರುಣೆ ತೋರುವ ಐಟಂ ಆಗಿದೆ ಸುಮ್ಮನಿರಿ ಎಂಬ ಕವಿತೆ ವಾಚಿಸುವ ಮೂಲಕ,ರೈತನ ಬದುಕಿನ ತೊಳಲಾಟ,ಬಡತನದ ಹಸಿವು,ಮೌಡ್ಯ,ಕಂದಾಚಾರ ಮಾನವೀಯ ಮೌಲ್ಯಗಳು,ಇಂದಿನ ಯುವಕರ ತವಕ ಮತ್ತು ತಲ್ಲಣಗಳು, ಕುರಿತು ಅತ್ಯಂತ ಮಾರ್ಮಿಕವಾಗಿ ಕವನ ವಾಚಿಸಿ ಕೇಳುಗರನ್ನ ನಿಬ್ಬೆರಗು ಗೊಳಿಸಿದರು.
ಸಾಹಿತಿ ವೀರ ಹನುಮಾನ ಗೋಷ್ಠಿ ಉದ್ಘಾಟಿಸಿದರು,ಉರುಕಡ್ಲಿ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು,ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ,ಜಾನಪದ ವಿಶ್ವವಿದ್ಯಾಲಯದ ಸಂಶೋಧಕ ಡಾ: ಹುಲಿಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
