ಹಂಪಿ ಉತ್ಸವ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲು ಆಗ್ರಹ

ಹಂಪಿ ಉತ್ಸವ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ  ಆಚರಿಸಲು ಆಗ್ರಹ

ಹಂಪಿ ಉತ್ಸವ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲು ಆಗ್ರಹ

ಕಲಬುರಗಿ: ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ಹಂಪಿ ಉತ್ಸವ ಮಾದರಿಯಲ್ಲಿ ಆಚರಿಸಬೇಕೆಂದು ಅಂತರಾಷ್ಟ್ರೀಯ ಕರಾಟೆಪಟು ಮನೋಹರಕುಮಾರ ಬೀರನೂರ ಆಗ್ರಹಿಸಿದ್ದಾರೆ.

                ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈ ಭಾಗದ ಕಲೆ,ಸಾಹಿತ್ಯ,ಕ್ರೀಡೆ,ಮನೋರಂಜನೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಲ್ಲಿ ರಾಜ್ಯ ಸರಕಾರ

ಕಲ್ಯಾಣ ಕರ್ನಾಟಕ ಉತ್ಸವವನ್ನು ನಡೆಸಲು ವಿಫಲವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು. ಸುಮಾರು 3 ವರ್ಷಗಳಿಂದ ಕಲ್ಯಾಣ ಕರ್ನಾಟಕ ಉತ್ಸವ ನಡೆಸಲು ರಾಜ್ಯ ಸರಕಾರ ಇದುವರೆಗೂ ಯಾವುದೇ ನಿರ್ಧಾರ ಮಾಡಿಲ್ಲ.ಕಲ್ಯಾಣ ಕರ್ನಾಟಕದ ಈ ಭಾಗದ ಜನರ ಬೇಡಿಕೆ ಈಡೇರಿಸುವಲ್ಲಿ ಸರಕಾರ ಕೂಡಲೇ ಕ್ರಮಕೈಗೊಂಡು ಕೂಡಲೇ ಕಲ್ಯಾಣ ಕರ್ನಾಟ ಉತ್ಸವ ದಿನಾಂಕ ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.ನಮ್ಮ ಮನವಿಗೆ ಇಲ್ಲಿಯವರೆಗೆ ಸೂಕ್ತ ಉತ್ತರವನ್ನು ನೀಡದೆ ಹೋದಲ್ಲಿ ಸರಕಾರದ ವಿರುದ್ದ ಹೋರಾಟ ಮಾಡಬೇಕಾಗುತ್ತದೆ. ಈ ಭಾಗಕ್ಕೆ ಮಲತಾಯಿ ಧೋರಣೆ ಹೊಂದಿ ಅನ್ಯಾಯ ಎಸಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಅಲ್ಲದೆ ನಮ್ಮ ಮನವಿಗೆ ಅಧಿಕೃತವಾಗಿ ಉತ್ತರವು ನೀಡದೆ ನಮ್ಮ ಭಾವನೆಗಳಿಗೆ ಸರ್ಕಾರ ಅಪಮಾನ, ಅವಮಾನ ಗೊಳಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.