ಇಂದು 75 ಶಿಕ್ಷಕರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ

ಇಂದು 75 ಶಿಕ್ಷಕರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ

ಇಂದು 75 ಶಿಕ್ಷಕರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ 

ಕಲ್ಬುರ್ಗಿ :ಕಲ್ಬುರ್ಗಿ ಸಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕಲ್ಬುರ್ಗಿ ಜಿಲ್ಲೆಯ 10 ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ,ಪದವಿ, ಸ್ನಾತಕೋತ್ತರ ಪದವಿ ಶಿಕ್ಷಕರಿಗೆ ಅವರ ಸೇವೆಯನ್ನು ಗುರುತಿಸಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು 28, 9, 2025ರಂದು ಕಲಬುರಗಿ ಆನಂದ ಹೋಟೆಲ್ ಹತ್ತಿರದ ಸೇಂಟ್ ಮೇರಿ ಚರ್ಚಿನ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ ಎಚ್ ನಿರಗುಡಿ ತಿಳಿಸಿದ್ದಾರೆ

ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಸರಡಗಿಯ ಪೂಜ್ಯಶ್ರೀ ರೇವಣಸಿದ್ಧ ಶಿವಾಚಾರ್ಯರು ವಹಿಸಲಿದ್ದಾರೆ ಕಾರ್ಯಕ್ರಮ ಉದ್ಘಾಟನೆಗೆ ಮಾಜಿ ಶಾಸಕರು ದತ್ತಾತ್ರೇಯ ಸಿ ಪಾಟೀಲ್ ಅವರು ಆಗಮಿಸುವರು 75 ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಪೊಲೀಸ್ ಆಯುಕ್ತಾರಾದ ಡಾ. ಶರಣಪ್ಪ ಎಸ್ ಡಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ಸಿನ ಧುರೀಣ ನೀಲಕಂಠರಾವ್ ಮುಲಗೆ, ಕಾಡಾ ಮಾಜಿ ಅಧ್ಯಕ್ಷರಾದ ಶರಣಪ್ಪ ತಳವಾರ ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ರುಸೋಮಶೇಖರ ಗೋನಾಯಕ್. ಮಲ್ಲಯ್ಯ ಗುತ್ತೇದಾರ್. ಫಾದರ್ ಪ್ರವೀಣ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ . ಕನ್ನಡ ಗೀತ ಗಾಯನ ಕಿರಣ್ ಪಾಟೀಲ್ ,ಬಾಬು ಜಾದವ್, ಸೂರ್ಯಕಾಂತ್ ಪೂಜಾರಿ ಡಾ. ರಾಜಶೇಖರ್ ಮಾಂಗ ,ಚಾಮರಾಜ ದೊಡ್ಡಮನಿ, ಅಂಬರೀಶ್ ವಾಲಿ ಅವರಿಂದ ಕನ್ನಡ ಗೀತಗಾಯನ ನಡೆಯುತ್ತದೆ ದಯವಿಟ್ಟು ಎಲ್ಲಾ ತಾಲೂಕಿನ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಂದು ಕಾರ್ಯಕ್ರಮ ಯಶಸ್ವಿ ಮಾಡಬೇಕಾಗಿ ತಮ್ಮಲ್ಲಿ ಬಿ ಎಚ್ ನಿರಗುಡಿ ವಿನಂತಿಸಿದರು