ವಿಶ್ವ ಕರ್ಮರು ಈ ನಾಡಿಗೆ ಕೊಟ್ಟ ಕೊಡುಗೆ ಅಪಾರ : ವಿಶ್ವರಾಧ್ಯ ಶ್ರೀ
ವಿಶ್ವ ಕರ್ಮರು ಈ ನಾಡಿಗೆ ಕೊಟ್ಟ ಕೊಡುಗೆ ಅಪಾರ : ವಿಶ್ವರಾಧ್ಯ ಶ್ರೀ
ಅಫಜಲಪುರ: ವಿಶ್ವ ಕರ್ಮ ಸಮಾಜದ ಇತಿಹಾಸವು ಈ ಹಿಂದಿನ ಇತಿಹಾಸದ ಗತವೈಭದಲ್ಲಿ ಮೆರದಿದೆ ಇದಕ್ಕೆ ಕಾರಣ ಸಮಾಜದ ಶಿಲ್ಪಿಗಳು ಈ ನಾಡಿಕೆ ಕೊಟ್ಟ ಕೊಡುಗೆ ಅಪಾರವಾಗಿದೆ ಎಂದು ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ವಿಶ್ವರಾಧ್ಯ ಶಿವಾಚಾರ್ಯರು ಹೇಳಿದರು.ಪಟ್ಟಣದ ಶ್ರೀ ಕಾಳಿಕಾ ದೇವಿ ಮಂದಿರದಲ್ಲಿ ವಿರಾಟ್ ವಿಶ್ವಕರ್ಮ ಜಯಂತೋತ್ಸವ ಹಾಗೂ ಶ್ರೀ ಕಾಳಿಕಾದೇವಿ ದೇವಸ್ಥಾನ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಮತ್ತು ಧಾರ್ಮಿಕ ಸಭೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ವಿಶ್ವಕರ್ಮ ಹಾಗೂ ವೀರಶೈವ ಧರ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದರು , ವಿಶ್ವಕರ್ಮರು ಕಾಯಕ ಕುಶಲಕರ್ಮಿಗಳು ,ಶ್ರಮ ಜೀವಿಗಳು ಎಂದು ನುಡಿದರು.
ಶ್ರೀಮಠದ ಪೂಜ್ಯ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ ವಿಶ್ವ ಕರ್ಮ ದೇವತೆಗಳ ಒಡೆಯನಾಗಿದ್ದಾನೆ, ವಿಶ್ವಕರ್ಮರು ಈಡಿ ಜಗತ್ತನ್ನು ಸೃಷ್ಟಿಕರ್ತರು ಪ್ರತಿಯೊಂದು ಕೆಲಸಕ್ಕೆ ವಿಶ್ವಕರ್ಮರ ಅವಶ್ಯಕತೆಯಿದೆ, ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾಯಕ ತತ್ವನ್ನು ಜಗತ್ತಿಗೆ ಸಾರಿದ್ದಾರೆ ಎಂದರು.
ಸಾಹಿತಿ ಜಾಫರ್ ಪಟೇಲ ಮಾತನಾಡಿ ವಿಶ್ವಕರ್ಮ ಸಮುದಾಯದವರು ಒಂದೇ ಕಾಯಕಕ್ಕೆ ಸೀಮಿತವಾಗದೆ ಬಡಿಗೇತನ, ಅಕ್ಕ ಸಾಲಿಗ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತಾವು ವಿಶಿಷ್ಟವಾಗಿ ತೊಡೆಗಿಸಿಕೊಂಡಿದ್ದಾರೆ ಎಂದು ಹೇಳಿದರು .ಮಹಿಳಾ ಚಿಂತಕಿ ಗಾಯತ್ರಿ ಪತ್ತಾರರವರು ವಿಶ್ವಕರ್ಮರ ಜೀವನ ಅವರ ವೃತ್ತಿ ನಡೆದು ಬಂದ ದಾರಿ ಆಚಾರ ವಿಚಾರ ಅಂದು ಮತ್ತು ಇಂದು ಅವರ ಜೀವನ ಶೈಲಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ದಿವ್ಯ ಸಾನಿಧ್ಯವನ್ನು ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಚಿಕ್ಕೇಂದ್ರ ಮಹಾಸ್ವಾಮಿಗಳು ವಹಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಂಗ್ರಾಮಗೌಡ ಪಾಟೀಲ ಚಂದ್ರಶೇಖರ ಕರಜಗಿ, ಪ್ರಭಾವತಿ ಮೇತ್ರಿ, ಧರ್ಮಸ್ಥಳ ಯೋಜನಾ ತಾಲೂಕಾ ಅಧಿಕಾರಿ ಶಿವರಾಜ ಆಚಾರ್ಯ, ವಕೀಲರಾದ ಎಸ್.ಎಸ್.ಪಾಟೀಲ, ಬಸಯ್ಯ ನಂದಿಕೋಲ,ಸಭಾ ಸಂಚಾಲಕರಾದ ಮೌನೇಶ ಬಡಗೇರ, ಶ್ರೀಮಂತ ಪತ್ತಾರ,ಮಹೇಶ ಬಡಗೇರ, ಸುರೇಶ ನನ್ನೆಗಾಂವ್, ಮೌನೇಶ ಕುಮಸಗಿ, ಕಾಶಿನಾಥ ಬಡಗೇರ, ಸೇರಿದಂತೆ ಸಕಲ ಸದ್ಭಕ್ತರು ವಿಶ್ವಕರ್ಮ ಸಮುದಾಯದ ಹಿರಿಯರು , ಮುಖಂಡರು ಯುವಕರು ತಾಯಂದಿರು , ಶ್ರೀಕಾಳಿಕಾ ದೇವಿ ಟ್ರಸ್ಟ್ ಅಧ್ಯಕ್ಷ ಶಿವಾನಂದ ಪತ್ತಾರ, ಹಾಗೂ ಪದಾಧಿಕಾರಿಗಳು ಇದ್ದರು.
ಕರ್ನಾಟಕ ಸರಕಾರದಿಂದ ವೈದ್ಯಕೀಯ ಪ್ರವೇಶ ಪಡೆದ ಕು.ಭಾಗ್ಯಶ್ರೀ ಮೌನೇಶ ಬಡಗೇರವರಿಗೆ ವಿಶೇಷ ಸನ್ಮಾನಿಸಿ ಶುಭ ಹಾರಿಸಿದರು.
ಕಾರ್ಯಕ್ರಮ ಪೂರ್ವದಲ್ಲಿ ವಿಶ್ವಕರ್ಮ ಭಾವಚಿತ್ರದ ಭವ್ಯ ಮೆರವಣಿಗೆ ನಾರಿಯರ ಕುಂಭ ಕಳಸ ವಿವಿಧ ವಾಧ್ಯಗಳೊಂದಿಗೆ ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಸದ್ಬಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.