ಶಾಸಕ ಮುನಿರತ್ನ ರವರ ಸದಸ್ಯತ್ವ ರದ್ದತಿಗೆ ಆಗ್ರಹ
ಶಾಸಕ ಮುನಿರತ್ನ ರವರ ಸದಸ್ಯತ್ವ ರದ್ದತಿಗೆ ಆಗ್ರಹ
ಕಲಬುರಗಿ: ‘ದಲಿತ, ಶೋಷಿತ, ಹಿಂದುಳಿದ ಸಮುದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರುವ ಶಾಸಕ ಮುನಿರತ್ನರನ್ನು ಸಾರ್ವಜನಿಕ ಜೀವನದಲ್ಲಿ ಮುಂದುವರಿ ಯಲು ಶೋಷಿತ ಸಮಾಜ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಮಾಧ್ಯಮ ವಕ್ತಾರ ಅಮೃತ ಸಜ್ಜನ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಮುನಿರತ್ನ ವಿರುದ್ಧ ವಿಶೇಷ ಸರ್ಕಾರಿ ವಕೀಲರನ್ನು ನೇಮಿಸಿ, ಕಠಿಣ ಶಿಕ್ಷೆಯಾಗುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಜನಪ್ರತಿನಿಧಿಯೊಬ್ಬ ಹೀಗೆ ಮಾತನಾಡುತ್ತಾನೆ ಎನ್ನುವುದು ಅಸಹ್ಯದ ಪರಮಾವಧಿ.ಹೊರ ರಾಜ್ಯದಿಂದ ಬಂದ ಈತ ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲೇ ಮುಳುಗಿರುವ ವ್ಯಕ್ತಿ’ ಎಂದರು.
‘ಮುನಿರತ್ನ ಅತ್ಯಂತ ತುಚ್ಛವಾಗಿ ಎರಡು ಸಮುದಾಯಗಳ ಬಗ್ಗೆ ಮಾತನಾಡಿದ್ದಾನೆ. ಈತನ ವಿರುದ್ಧ ರಾಜ್ಯದ ಅನೇಕ ಕಡೆ ದಲಿತ ಸಮುದಾಯದವರು ಸಾಂಕೇತಿಕ ದೂರು ನೀಡಿದ್ದಾರೆ’ ಎಂದರು.ಮನುವಾದವನ್ನು ಪ್ರತಿನಿಧಿಸುವ ಬಿಜೆಪಿಯ ಆಂತರಿಕ ಮಾತುಗಳನ್ನೇ ಮುನಿರತ್ನ ಆಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಸಮುದಾಯದ ಬಗ್ಗೆ, ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ನಾವು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಕೂಡಲೇ ಶಾಸಕ ಮುನಿರತ್ನ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು.ಬಿಜೆಪಿ ಸದಸ್ಯತ್ವ ಹಿಂಪಡೆಯಬೇಕು. ಶಾಸಕ ಮುನಿರತ್ನ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ.ಈತನ ಶಾಸಕ ಸ್ಥಾನ ವಜಾಗೊಳಿಸುವಂತೆ ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.