ವಿವಿಧ ಬೇಡಿಕೆಗಳ ಈಡೇರಿಕೆಗೆ ಗುರುಮಠಕಲ್ ತಹಶೀಲ್ದಾರರಿಗೆ ಕರವೆ ಒತ್ತಾಯ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಗುರುಮಠಕಲ್ ತಹಶೀಲ್ದಾರರಿಗೆ ಕರವೆ ಒತ್ತಾಯ.

ಗುರುಮಠಕಲ್ ತಾಲ್ಲೂಕ ವರದಿಗಾರರು: ಭೀಮರಾಯ ಯಲ್ಹೇರಿ

 ವಿವಿಧ ಬೇಡಿಕೆಗಳ ಈಡೇರಿಕೆಗೆ ಗುರುಮಠಕಲ್ ತಹಶೀಲ್ದಾರರಿಗೆ ತಾಲ್ಲೂಕ ಕರವೆ ಸಂಘಟನೆಯ ನೇತೃತ್ವದಲ್ಲಿ ಒತ್ತಾಯ.

ಯಾದಗಿರ/ಗುರುಮಠಕಲ್: ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ೩೭೧ನೇ (ಜೆ) ಕಲಂ ಜಾರಿಯಾಗಿ ೧೦ ವರ್ಷಗಳ ದಶಮಾನೋತ್ಸವ ಸಂರ್ಭದಲ್ಲಿ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ಬರುವ ೧೭ನೇ ಸೆಪ್ಟೆಂಬರ್ ೨೦೨೪ ರಂದು ಸಚಿವ ಸಂಪುಟ ಸಭೆ ನಡೆಸಲು ನಿರ್ಧಾರ ಕೈಗೊಂಡಿರುವುದಕ್ಕೆ ಕರವೇ ಗುರುಮಠಕಲ್ ತಾಲೂಕ ಘಟಕವು ಸ್ವಾಗತಿಸುತ್ತದೆ. ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಎಲ್ಲಾ ಸಂಪುಟ ದರ್ಜೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಚಿವರ ಸಂಯೋಗದೊಂದಿಗೆ ವಿಶೇಷ ಇಚ್ಛಾಶಕ್ತಿ ವ್ಯಕ್ತಪಡಿಸಿರುವುದಕ್ಕೆ ಕರವೇ ಅಭಿನಂದಿಸುತ್ತದೆ.

ಅದರಂತೆ ಈ ಐತಿಹಾಸಿಕ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆಯ ಬಗ್ಗೆ ಮತ್ತು ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ವಿಷಯಗಳಿಗೆ ವಿಶೇಷ ಸ್ಪಂದನೆ ನೀಡಲು ಕರವೇ ಸರಕಾರಕ್ಕೆ ಆಗ್ರಹಿಸುತ್ತದೆ. ಕರವೇಯು ಈ ಕೆಳಗಿನಂತೆ ೧೧ ಹಕ್ಕೊತ್ತಾಯಗಳನ್ನು ಮಾಡಿದೆ.

೧. ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸೃಜಿಸುವದು.೨. ೩೭೧ನೇ(ಜೆ) ಕಲಂ ಖಂಡಿಕೆ ೧೨(ಎ) ಪ್ರಕಾರ ವಿಶೇಷ ಸ್ಥಾನಮಾನದಡಿ ಬರುವ ಸಮಸ್ಯೆಗಳ ಮತ್ತು ದೂರುಗಳ ನಿವಾರಣೆಗೆ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರತ್ಯೇಕ ನ್ಯಾಯಮಂಡಳಿ (ಟ್ರಿಬ್ಯೂನಲ್) ಸ್ಥಾಪಿಸುವುದು. ೩. ೩೭೧ನೇ (ಜೆ) ಕಲಂ ನಿಯಮಗಳಲ್ಲಿ ಉಲ್ಲೇಖಿಸಿರುವಂತೆ ಸುಮಾರು ೩೦ ನೆನೆಗುದಿಗೆ ಬಿದ್ದಿರುವ ಅಂಶಗಳನ್ನು ಅನುಷ್ಠಾನಗೊಳಿಸಬೇಕು. 

೪. ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕೆ.ಕೆ.ಆರ್.ಡಿ.ಬಿ. ವತಿಯಿಂದ ದೂರದೃಷ್ಟಿಕೋನವನ್ನಿಟ್ಟುಕೊಂಡು ೫ ವರ್ಷದ ಕ್ರಿಯಾ ಯೋಜನೆಯನ್ನು ರಚಿಸಿ ಕಾಲಮಿತಿಯಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.೫. ನಂಜುಂಡಪ್ಪ ವರದಿಯನ್ನು ಮಾನದಂಡವಾಗಿ ಇಟ್ಟುಕೊಂಡು ಕಲ್ಯಾಣ ಕರ್ನಾಟಕದ ಒಂದು ಗ್ರಾಮ ಪಂಚಾಯತಿಯನ್ನು ಘಟಕ ಮಾಡಿಕೊಂಡು ಮೂಲ ಸೌಕರ್ಯಗಳು, ಆರೋಗ್ಯ ಸೇವೆಗಳು, ಆದಾಯದ ಮೂಲಗಳು ಸೇರಿದಂತೆ ಪ್ರಮುಖ ಸೂಚ್ಯಂಕಗಳನ್ನು ಗಮನದಲ್ಲಿಟ್ಟು ಕೊಂಡು ವೈಜ್ಞಾನಿಕ ರೀತಿಯಲ್ಲಿ ವರದಿ ತಯರಿಸಿಕೊಂಡು. ಆ ವರದಿಯ ಆಧಾರದಂತೆ ಕೆ.ಕೆ.ಆರ್.ಡಿ.ಬಿ.ಯ ಮೂಲಕ ೫ ವರ್ಷದ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ರಚಿಸುವುದು. ೬. ಯಾದಗಿರಿ ಮಹತ್ವಕಾಂಕ್ಷೆ ಜಿಲ್ಲೆಯಾಗಿರುವ ಕಾರಣ ಭೀಮಾ ಮತ್ತು ಕೃಷ್ಣನದಿಗಳಿಗೆ ಬ್ರಿಡ್ಜ್-ಕಂ- ಬ್ಯಾರೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿ ಈ ಭಾಗದ ರೈತರಿಗೆ ನೀರಿನ ಸದುಪಯೋಗ ಮಾಡಿಕೊಡುವುದು.

೭.ಕಲಬುರಗಿಯ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಸಂಪುಟ ಸಭೆಯಿಂದ ಕೇಂದ್ರಕ್ಕೆ ಒತ್ತಡ ತರುವುದು.

೮. ಯಾದಗಿರಿ ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಉತೀರ್ಣ ಪರಿಣಾಮಗಳು ಎತ್ತರಕ್ಕೇರಲು ವಾಸ್ತವಿಕ ನೆಲೆಗಟ್ಟಿನ ಮೇಲೆ ವೈಜ್ಞಾನಿಕ ಕ್ರಮ ಕೈಗೊಂಡು ಇದರ ಮೇಲೆ ಶಿಸ್ತಿನ ನಿಗಾ ಇಡಲು ಕ್ರಮ ಕೈಗೊಳ್ಳಬೇಕು೯. ಯಾದಗಿರಿ ಜಿಲ್ಲೆಗೆ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಬೇಕು

೧೦. ಮಹತ್ವಾಕಾಂಕ್ಷಿ ಯಾದಗಿರಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ನವನಗರ ನಿರ್ಮಾಣ ಮಾಡಿ ಉದ್ಯೋಗ ಸೃಷ್ಟಿಗೆ ಅವಕಾಸ ಕಲ್ಪಿಸಿಕೊಡುವುದು,

11) ಯಾದಗಿರಿ ಜಿಲ್ಲೆಯಲ್ಲಿ ಬರುವ ವಡಿಗೇರಿ ಮತ್ತು ಸೈದಾಪುರಗಳನ್ನು ಪಟ್ಟಣ ಪಂಚಾಯತಗಳನ್ನಾಗಿ ಘೋಷಣೆ ಮಾಡಬೇಕು.

ಸೆ.೧೭ನೇ ತಾರೀಖಿನಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಮತ್ತು ಆಡಳಿತ ಶಾಸಕರು ಮಾನ್ಯ ಮುಂಖ್ಯಮಂತ್ರಿಗಳಿಗೆ ಈ ಮೇಲ್ಕಂಡ ಹಕ್ಕೊತ್ತಾಯಗಳನ್ನು ಅನುಷ್ಠಾನಕ್ಕೆ ತರುವಂತೆ ಒತ್ತಡಹೇರಬೇಕೆಂದು ಕರವೇ ತಾಲೂಕ ಗುರುಮಠಕಲ್ ಘಟಕವು ಆಗ್ರಹಿಸಿ ತಹಸೀಲ್ದಾರ ರವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಕರವೇ ಅದ್ಯಕ್ಷ ಶರಣಬಸಪ್ಪ ಯಲ್ಹೇರಿ, ಗೋಪಾಲಕೃಷ್ಣ ಮೇಧಾ, ವೆಂಕಟೇಶ ಚಿಟಿಕನಪಲ್ಲಿ, ಭೀಮಶಂಕರ ಪಡಿಗೆ, ಶರಣು ಮೇಧಾ, ಕಾಶನಿನಾಥ ಚಂಡ್ರಿಕಿ, ಭೂಪಾಲ್ ಯದ್ಲಪೂರ, ಭೀಮಪ್ಪ ಮದ್ದೂರ, ರವಿ ಕುಮಾರ ಕಾಂಬ್ಲೆ, ತ್ರಿವೇಶ್ ಚಂಢ್ರಿಕಿ ಇನ್ನು ಹಲವಾರು ಕಾರ್ಯಕರ್ಯತು ಉಪಸ್ಥಿತರಿದ್ದರು.