ಕನಕದಾಸರು ಸಮಾನತೆಯ ಹರಿಕಾರರು: ಶಾಸಕ ಪ್ರಭು ಚವ್ಹಾಣ
ಕನಕದಾಸರು ಸಮಾನತೆಯ ಹರಿಕಾರರು: ಶಾಸಕ ಪ್ರಭು ಚವ್ಹಾಣ
ಕನಕದಾಸರು ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಯಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಕ್ರಾಂತಿ ಮಾಡಿದ ಸಮಾನತೆಯ ಹರಿಹಾಕರರು ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಘಮಸುಬಾಯಿ ತಾಂಡಾ ಬೋಂತಿಯ ಗೃಹ ಕಚೇರಿಯಲ್ಲಿ ನ.8ರಂದು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕನಕ ಎಂಬುದು ಅಗಾಧಶಕ್ತಿ, ಅದಮ್ಯ ಚೇತನ. ಅವರು ಭಗವಂತನಿಗೆ ಹತ್ತಿರವಾಗಿದ್ದವರು. ಭಕ್ತಿಯ ಶಕ್ತಿಯನ್ನು ತೋರಿಸಿಕೊಟ್ಟವರು. ಸಮಾಜದ ಹಲವು ದೋಷ ಲೋಪಗಳನ್ನು ನಿವಾರಿಸಿ ಮಾನವೀಯತೆಯ ದಾರಿ ತೋರಿಸಿದ ಮಹಾನ್ ದಾರ್ಶನಿಕರು. ಅವರನ್ನು ಒಂದು ಜಾತಿಗೆ ಸೀಮಿತವಾಗಿಸದೇ ಅವರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆಯಂತಹ ಮೇರು ಕೃತಿಗಳನ್ನು ನೀಡಿದ ಅವರು ಕೀರ್ತನೆ, ನಾಟಕಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಅನ್ವಯಿಸುತ್ತವೆ. ಅವುಗಳನ್ನು ಅನುಸರಿಸಿದಲ್ಲಿ ಸಮಾಜ ಸುವ್ಯವಸ್ಥೆಯಿಂದ ಇರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರವೀಣ ಕಾರಬಾರಿ, ಸಚಿನ ರಾಠೋಡ, ಭರತ ಕದಮ್, ಗುರುನಾಥ ರಾಜಗೀರಾ, ಗುಂಡಪ್ಪ ನಿಡೋದೆ, ಸಂದೀಪ ಜಾಧವ, ಓಂಕಾರ ಮೇತ್ರೆ, ಸುಭಾಷ ಲಕ್ಷ್ಮೀನಗರ, ಬಾಲಾಜಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
