ಮಳೆ ಬಿದ್ದು ಹದಗೆಟ್ಟ ರಸ್ತೆಗಳನ್ನು ಸರಿಪಡಿಸದ ಅಧಿಕಾರಿಗಳು.

ಮಳೆ ಬಿದ್ದು ಹದಗೆಟ್ಟ ರಸ್ತೆಗಳನ್ನು ಸರಿಪಡಿಸದ ಅಧಿಕಾರಿಗಳು.

ವಡಗೇರಾ ತಾಲೂಕ ವರದಿಗಾರರು : (ಮಹಾದೇವಪ್ಪ ಗಂಗಣ್ಣೋರ್)

ಮಳೆ ಬಿದ್ದು ಹದಗೆಟ್ಟ ರಸ್ತೆಗಳನ್ನು ಸರಿಪಡಿಸದ ಅಧಿಕಾರಿಗಳು.

ಯಾದಗಿರ/ವಡಗೇರಾ : ವಡಗೇರಾ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಧಾರಾಕಾರ ಮಳೆ ಬಿದ್ದು ರಸ್ತೆಗಳು ಹದಗೆಟ್ಟು ಅಪಘಾತಗಳಾಗುವ ಸಂಭವವಿರುತ್ತದೆ. ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಗುಂಡಿಯಲ್ಲಿ ಮತ್ತು ರಸ್ತೆಯಲ್ಲಿ ಬಿದ್ದು ಒದ್ದಾಡುವಂತಾಗಿದೆ. ಈ ಮುಂಚೆ ಕುರಕುಂದಾ ಗ್ರಾಮ ಪಂಚಾಯತಿ ಅಧ್ಯಕ್ಷರು ,ಮತ್ತು ಗ್ರಾಮ ಪಂಚಾಯತಿ ಪಿಡಿಓಗಳಿಗೆ ಹೇಳಿದರು ಮತ್ತು ಮನವಿ ಕೊಟ್ಟರು ಕೂಡ ಗಮನಹರಿಸುತ್ತಿಲ್ಲ. ಯಾರಿಗಾದರೂ ಅಪಘಾತವಾಗುವ ತನಕ ಬರುವ ಹಾಗೆ ಕಾಣ್ತಾಯಿಲ್ಲ. ಅಪಘಾತವಾದರೆ ಅಧಿಕಾರಿಗಳೆ ನೇರ ಹೊಣೆಗಾರರಾಗುತ್ತಾರೆ. ಈ ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಧ್ಯಕ್ಷರಾದ ಬೀರಪ್ಪ ಮತ್ತು ಉಪಾಧ್ಯಕ್ಷರಾದ ಬಸವರಾಜ್ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.