ಸಂಘ ಸಂಸ್ಥೆಗಳು ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿ ಕೊಳ್ಳಬೇಕು:ನಿಲಕಂಠ ಮುಲಗೆ

ಸಂಘ ಸಂಸ್ಥೆಗಳು ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿ ಕೊಳ್ಳಬೇಕು:ನಿಲಕಂಠ ಮುಲಗೆ

ಸಂಘ ಸಂಸ್ಥೆಗಳು ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿ ಕೊಳ್ಳಬೇಕು:ನಿಲಕಂಠ ಮುಲಗೆ

ಕಲಬುರಗಿ: ಕೌಶಲ್ಯ ಸೇವಾ ಟ್ರಸ್ಟ್ ನ ವಾರ್ಷಿಕೋತ್ಸವ ಹಾಗೂ ಮಕ್ಕಳ ದಿನಾಚರಣೆ ಮತ್ತು ಕೌಶಲ್ಯ ಸೇವಾ ರತ್ನ ಪ್ರಶಸ್ತಿ ಸಮಾಂಭವನ್ನು ಇಂದು ಜಯನಗರದಲ್ಲಿ ಶಿವಮಂದಿರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಘ ಸಂಸ್ಥೆಗಳು ನಿಸ್ವಾರ್ಥದಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.ಕೌಶಲ್ಯ ಸೇವಾ ಎಲೆಮರೆ ಕಾಯಿಯಂತೆ ತನ್ನ ಸೇವೆಯನ್ನು ದಶಕಗಳಿಗಿಂತಲು ಹೆಚ್ಚು ಮಾಡುತ್ತ ಬಂದಿರುವುದು ಶ್ಲಾಘನೀಯ.ಅಲ್ಲದೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ತನ್ನ ಸೇವಾ ಕಾರ್ಯ ನಿರಂತರವಾಗಿ ಮುಂದುವರೆಸುತ್ತಾ ಬಂದಿದೆ.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೋರಾಟಗಾರ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ‌.ಲಿಂಗರಾಜ ಸಿರಗಾಪೂರ ಮಾತನಾಡಿ ಕೌಶಲ್ಯ ಸೇವಾ ಟ್ರಸ್ಟ್ ನಿರಂತರವಾಗಿ ಜನರ ಅನಕೂಲಕ್ಕಾಗಿ ಕಲ್ಯಾಣ ಕಾರ್ಯಗಳನ್ನು ಮಾಡುತ್ತ ಬಂದಿರುವುದು ಮಾದರಿಯಾಗಿದೆ ಎಂದು ಬಣ್ಣಿಸಿದರು.ಶ್ರೀ ಸುಭಾಷಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಅವರು ಮಾತನಾಡಿ ಪರರ ಹಿತದವನ್ನೆ ಬಯಸುವ ಮನುಷ್ಯ ಮಹಾಪುರುಷನಾಗುತ್ತಾನೆ.ಟ್ರಸ್ಟ್ ಅಧ್ಯಕ್ಷ ಅಶೋಕ ಕಮಲಾಪೂರ ಪರೋಪಕಾರಿ ಮನೋಭಾವದವರು.ಅವರ ಮಹತ್ವಕಾಂಕ್ಷೀಯ ಕೌಶಲ್ಯ ಸೇವಾ ಟ್ರಸ್ಟ್ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ಅಶೋಕ ಕಮಲಾಪುರ ಅವರು ವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಗುರುಲಿಂಗಯ್ಯ ಬಸಯ್ಯ ಹಾಲ,ವೆ.ಮಲ್ಲಯ್ಯ ಹಿರೇಮಠ, ಬಸವರಾಜ ಆರ್.ಉಪ್ಪಿನ, ಸಂತೋಷ ಜಿ.ನಾಡಗೇರಿ,ವಿನಾಯಕ ಜೋಶಿ, ಶ್ರೀಮತಿ ಕಾಶಮ್ಮ ಎನ್.ಚೌಕ್ಕೆಗೌಡ,ಕು.ಮಾಲಾ ದಣ್ಣೂರ,ಅಪ್ಪಾರಾವ ಮೋರೆ,ಸೂರ್ಯಕಾಂತ ಕೆ.ಬಿ, ಸುರೇಶ್ ಕುಲಕರ್ಣಿ,ಬಾಬಾ ಫಕ್ರುದ್ದೀನ್, ಪೀರಪ್ಪ ಹಾಗೂ ಮಹೇಂದ್ರಸಿಂಗ್ ಎಂ.ರಾಜಪೂತ ಅವರಿಗೆ ಕೌಶಲ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಶಿವರಾಜ್ ಆರ್.ಚಿದ್ರಿ ಮತ್ತು ವಿನೋದ ಎಸ್.ದೇಸಾಯಿ ಇವರನ್ನು ವಿಶೇಷ ಗೌರವ ಸನ್ಮಾನ ಮಾಡಲಾಯಿತು.

ಕುಮಾರಿ ರತ್ನಕುಮಾರಿ ಕಮಲಾಪೂರ ಸ್ವಾಗತಿಸಿದರು.ಬಸವರಾಜ ಕೆ.ಬಿ ನಿರೂಪಿಸಿದರು.ಶ್ರೀಶೈಲ ಕಮಲಾಪೂರ ವಂದಿಸಿದರು.ಬಸವರಾಜ ಮಾಗಿ,ಸಿದ್ಧಲಿಂಗ ಗುಬ್ಬಿ,ಮನೋಹರ ಬಡಶೇಷಿ,ಮಲ್ಲಯ್ಯಸ್ವಾಮಿ ಗಂಗಾಧರಮಠ,ವೀರಪ್ಪ ಹುಡುಗಿ,ಅನುರಾಧಾ ಕುಮಾರಸ್ವಾಮಿ,ಶೈಲಜಾ ವಾಲಿ,ಸುರೇಖಾ ಬಾಲಕೊಂದೆ,ಸುಷ್ಮಾ ಮಾಗಿ,ಗೀತಾ ಸಿರಗಾಪೂರ,ಕೌಶಲ್ಯ ಕಮಲಾಪೂರ,ಸುಶಿಲಾ ಬೊಮ್ಮಣ್ಣ ಸೇರಿದಂತೆ ಅನೇಕರು ಇದ್ದರು.