ಕಲಿಯುಗದಲ್ಲಿ ಗೂಗಲ್ ಮತ್ತು ಕೃತಕ ಬುದ್ದಿಮತ್ತೆ ಜ್ಞಾನವನ್ನು ವೃದ್ಧಿಸಬಲ್ಲದು ವಿನಹಃ ಸಂಸ್ಕಾರವನ್ನಲ್ಲ-ಪ್ರಾಚಾರ್ಯ ಡಾ. ಮೋಹನರಾಜ
ಕಲಿಯುಗದಲ್ಲಿ ಗೂಗಲ್ ಮತ್ತು ಕೃತಕ ಬುದ್ದಿಮತ್ತೆ ಜ್ಞಾನವನ್ನು ವೃದ್ಧಿಸಬಲ್ಲದು ವಿನಹಃ ಸಂಸ್ಕಾರವನ್ನಲ್ಲ-ಪ್ರಾಚಾರ್ಯ ಡಾ. ಮೋಹನರಾಜ
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಶಿಕ್ಷಕರಿಗಾಗಿ ಆಯೋಜಿಸಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಸ್ಥೆಯ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಚಾಲಕರಾದ ಶ್ರೀ ನಾಗಣ್ಣ ಘಂಟಿ ಅವರು ಆಗಮಿಸಿ ಭಾರತ ಕಂಡ ಶ್ರೇಷ್ಠ ಶಿಕ್ಷಕ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ಮಾತನಾಡುತ್ತ ಇಂದಿನ ಮಕ್ಕಳೇ ಮುಂದಿನ ಜನಾಂಗ, ನಮ್ಮ ದೇಶದ ಭವಿಷ್ಯವು ಇಂದಿನ ಮಕ್ಕಳ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದದ್ದು ಮತ್ತು ನಮ್ಮೆಲ್ಲರ ಯಶಸ್ಸಿಗೆ ಶಿಕ್ಷಕರ ಪಾತ್ರ ಅಮೂಲ್ಯ ಎಂದು ಮಾತನಾಡಿದರು. ನಂತರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಲಂಕರಿಸಿದ ಪ್ರಾಚಾರ್ಯರ, ಸಿಬ್ಬಂದಿ ಕೋಣೆ ಮತ್ತು ಕಾಲೇಜಿನ ಕಛೇರಿ ವೀಕ್ಷಿಸಿ ವಿದ್ಯಾರ್ಥಿನಿಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತದನಂತರ ವಿದ್ಯಾರ್ಥಿನಿಯರು ಸಭಾಂಗಣದಲ್ಲಿ ಮಹಾವಿದ್ಯಾಲಯದ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಶಿಕ್ಷಕರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಅವರು ಮಾತನಾಡುತ್ತ ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು... ಗುರು ಬದುಕಿಗೆ ದಾರಿ, ಜೀವನಕ್ಕೆ ಶಕ್ತಿ. ಎಲ್ಲರ ಬದುಕಿನಲ್ಲೂ ಗುರುವಿನ ಪಾತ್ರ ಹಿರಿದು. ಪ್ರತಿಯೊಬ್ಬರ ಜೀವನದಲ್ಲಿ ಹೆತ್ತವರಿಗೆ ಇರುವಷ್ಟೆ ಉನ್ನತ, ಪವಿತ್ರ ಸ್ಥಾನ ಗುರುಗಳಿಗೂ ಇದೆ. ಮಾತಾ, ಪಿತಾ, ಗುರು, ದೈವಂ ಎಂಬ ಮಾತಿದೆ. ಅಂದರೆ ತಾಯಿ ತಂದೆ ಗುರು ದೇವರು ಎಲ್ಲರೂ ಸಮಾನರು. `ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಎಂಬ ಮಾತೇ ಗುರುವಿನ ಸ್ಥಾನದ ವಿಸ್ತಾರದ ಸೂಚಕ. `ವರ್ಣ ಮಾತ್ರಂ ಕಲಿಸಿದಾತಂ ಗುರು' ಎಂಬ ಮಾತೂ ನಮ್ಮಲ್ಲಿದೆ. ಒಂದು ಅಕ್ಷರವನ್ನು ಕಲಿಸಿಕೊಟ್ಟವರೂ ಗುರುಗಳೇ. ಜೀವನಕ್ಕೊಂದು ದಾರಿ ತೋರಿದ ಶಿಕ್ಷಕ ಶಿಕ್ಷಕಿಯರಿಗೆ ಸದಾ ಋಣಿಯಾಗಿರುವುದು, ಅವರ ಪ್ರೀತಿ, ಕಾಳಜಿ, ತಾಳ್ಮೆಯನ್ನು ಸ್ಮರಿಸುವುದು, ಧನ್ಯವಾದ ಹೇಳುವುದು ಎಲ್ಲರ ಕರ್ತವ್ಯವೂ ಹೌದು. ಇದೇ ಕಾರಣದಿಂದ ಸೆಪ್ಟೆಂಬರ್ ೫ ಎಲ್ಲರ ಪಾಲಿನ ಮಹತ್ವದ ದಿನವಾಗಿ ರೂಪುಗೊಂಡಿದ್ದು. ಭಾರತದಲ್ಲಿ ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳ ನೆಚ್ಚಿನ ಹಬ್ಬಗಳಲ್ಲಿ ಟೀಚರ್ಸ್ ಡೇ ಕೂಡಾ ಒಂದು. ಹೌದು ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತಿದೆ. ಅಮ್ಮ -ಅಪ್ಪನ ನಂತರ ಮಕ್ಕಳು ಹೆಚ್ಚು ಹಚ್ಚಿಕೊಳ್ಳುವುದು ತಮ್ಮ ಟೀಚರ್ಸ್ ಗಳನ್ನ. ಬೇಕಾದ್ರೆ ನೀವೇ ಚೆಕ್ ಮಾಡಿಕೊಳ್ಳಿ ಮಕ್ಕಳ ಬಳಿ ಹೋಗಿ ಮುಂದೆ ನೀವು ಏನು ಆಗ್ತೀರಾ ಎಂದು ಕೇಳಿ ಥಟ್ಟನೆ ಹೇಳುವುದು ಟೀಚರ್ ಎಂದು ಮತ್ತೆ ತಡವರಿಸಿ ಅಪ್ಪ ಅಮ್ಮ ಹೇಳಿ ಕೊಟ್ಟ ಹಾಗೆ ಇಲ್ಲ ಡಾಕ್ಟರ್, ಇಂಜಿನೀಯರ್ ಅಂತಾರೆ. ಇನ್ನು ಈ ಟೀಚರ್ಸ್ ಮಕ್ಕಳ ಜೀವನದಲ್ಲಿ ವಿಶೇಷವಾಗಿ ಪ್ರಭಾವ ಬೀರಿರುತ್ತಾರೆ. ಶಿಕ್ಷಕ ಶಿಕ್ಷಕಿಯರು ಕಲಿಸುವ ಪಾಠ, ನೀಡುವ ಮಾರ್ಗದರ್ಶನ, ತೋರುವ ಜ್ಞಾನದ ಬೆಳಕು ಎಲ್ಲರ ಬದುಕಿಗೊಂದು ಭದ್ರ ಬುನಾದಿ ಹಾಕಿಕೊಡುತ್ತದೆ, ಸಾಧನೆಯ ಹಾದಿಯನ್ನು ತೆರೆಯುತ್ತದೆ. ಬರೀ ಅಷ್ಟೇ ಅಲ್ಲದೆ ಉತ್ತಮ ಭವಿಷ್ಯವನ್ನೂ ರೂಪಿಸುತ್ತದೆ. ಜೀವನದ ಶಿಸ್ತು, ಜ್ಞಾನದ ಹಸಿವು ಆರಂಭವಾಗುವುದೇ ಶಿಕ್ಷಕರ ಒಡನಾಟದಿಂದ ಎಂದರೂ ತಪ್ಪಲ್ಲ. ಶಿಕ್ಷಕರು ಕೇವಲ ಪಠ್ಯ ಪುಸ್ತಕದಲ್ಲಿರುವ ಪಾಠವನ್ನು ಮಾತ್ರ ಹೇಳದೆ ನಿರಂತರವಾಗಿ ತಮ್ಮ ಅನುಭವಗಳು, ಸಮಾಜದ ಕುರಿತು ಹೇಳುತ್ತಾರೆ. ವಿಶೇಷವಾಗಿ ನಮಗೆ ನೈತಿಕ ಶಿಕ್ಷಣ ನೀಡುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ಈಗ ವಿದ್ಯಾರ್ಥಿಗಳು ಗೂಗಲ್ ಮತ್ತು ಕೃತಕ ಬುದ್ದಿಮತ್ತೆ ಮೂಲಕ ಕಲಿಯಲು ಅವಕಾಶವಿದ್ದರೂ, ನಮ್ಮ ಶಿಕ್ಷಕ-ಶಿಕ್ಷಕಿಯರ ನಿಜವಾದ ಜ್ಞಾನದ ಮುಂದೆ ಯಾವುದೇ ಗೂಗಲ್ ಮತ್ತು ಕೃತಕ ಬುದ್ದಿಮತ್ತೆ ಕೂಡ ಸಮನಲ್ಲ ಯಾಕೆಂದರೆ ಅವುಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯಕವಾದ ಸಂಸ್ಕಾರ ಕಲಿಸಿಕೊಡುವುದಿಲ್ಲ ಎಂದು ಹೇಳಿ ತಮಗೆ ವಿದ್ಯೆ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿ ವಿದ್ಯಾರ್ಥಿನಿಯರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿ ಉತ್ತಮ ಶಿಕ್ಷಕ-ಶಿಕ್ಷಕಿಯರನ್ನು ನೀಡಿದ ಈ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಥಶಾಸ್ತç ವಿಭಾಗದ ಉಪನ್ಯಾಸಕರಾದ ಶ್ರೀಮತಿ ಕನ್ಯಾಕುಮಾರಿ ಮಾತನಾಡಿ ವಿದ್ಯಾರ್ಥಿನಿಯರಿಗೆ ಹಾಡಿನ ಮುಖಾಂತರ ಪ್ರೇರೆಪಿಸಿದರು ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಕುಮಾರಿ. ಶೃದ್ಧಾ ಹಾಗೂ ಕುಮಾರಿ. ಫಯಾಜ್ ಮಾತನಾಡಿ ಶಿಕ್ಷಕರ ಪ್ರೋತ್ಸಾಹ, ಬೆಂಬಲ, ಅವರು ತುಂಬಿದ ಶಕ್ತಿಯಿಂದ ಇಂದು ನಾವು ಸಾಧನೆಯ ಪಥದಲ್ಲಿದ್ದೇವೆೆ. ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ನೀವು ಕಲಿಸಿಕೊಟ್ಟ ಪಾಠ, ನಿಮ್ಮ ಆದರ್ಶ ನಮಗೆ ಸ್ಫೂರ್ತಿ ಎಂದು ಹೇಳುತ್ತಾ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗ¼ನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದÀ ಡಾ. ಕಾಶೀಬಾಯಿ, ಶ್ರೀಮತಿ ಜ್ಯೋತಿ ಪಾಟೀಲ, ಶ್ರೀಮತಿ ಅನಿತಾ ಪಾಟೀಲ, ಶ್ರೀಮತಿ. ಮಂಗಲಾ, ಶ್ರೀಮತಿ ವಿಜಯಲಕ್ಷಿö್ಮ, ಶ್ರೀಮತಿ ಸಂತೋಷಿ ಕೆ, ಶ್ರೀಮತಿ ಪ್ರೀಯಾ ನಿಗ್ಗುಡಗಿ, ಶ್ರೀಮತಿ. ರಶ್ಮಿ ಸ್ವಾಮಿ, ಶ್ರೀಮತಿ ಕನ್ಯಾನುಮಾರಿ, ಶ್ರೀಮತಿ ಜಗದೇವಿ ಚಿಕ್ಕೆಗೌಡ, ಶ್ರೀಮತಿ ಶೈಲಜಾ ನಾಕೇದಾರ, ಕುಮಾರಿ. ಇಂದುಮತಿ, ಶ್ರೀ. ಬಸವರಾಜ ಗೋಣಿ, ಶ್ರೀ ಕಿರಣಕುಮಾರ, ಬೋಧಕೇತರ ಸಿಬ್ಬಂದಿಗಳಾದ ಶ್ರೀಮತಿ ಜ್ಯೋತಿ ಕಲ್ಲೂರ, ಶ್ರೀಮತಿ. ಸುಚಿತಾ ಪಾಟೀಲ, ಶ್ರೀಮತಿ. ಶರಣಮ್ಮ ನೆಲ್ಲೂರ, ಶ್ರೀಮತಿ ಭಾಗ್ಯವತಿ, ಶ್ರೀಮತಿ ಜಯಶ್ರೀ ಎನ್ ಮತ್ತಿತರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ಎಂದು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.