ಕೋಳಕೂರದಲ್ಲಿ ಶ್ರೀ ಸಿದ್ದ ಬಸವೇಶ್ವರರ ಮಹಾಪರ್ವ
ಸುಕ್ಷೇತ್ರ ಕೋಳಕೂರದ ಪವಾಡ ಪುರುಷ ಶ್ರೀ ಸಿದ್ದ ಬಸವೇಶ್ವರರ ಮಹಾಪರ್ವ
ಜೇವರ್ಗಿ,ಸೆ.12: ಸಗರ ನಾಡಿನ ಸುಕ್ಷೇತ್ರ ಕೋಳಕೂರ ಗ್ರಾಮದ ಆರಾಧ್ಯ ದೈವ ಘಾಣದಕಲ್ಲು ಶ್ರೀ ಸಿದ್ದ ಬಸವೇಶ್ವರರ ಮಹಾಪರ್ವವು ಸೆ.16 ರಂದು ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ತಿಳಿಸಿದೆ.
ಮಹಾಪರ್ವ ನಿಮಿತ್ತ ಅಂದು ಸೋಮವಾರ ಬೇಳಿಗ್ಗೆ 6 ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಸಿದ್ದಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ, ನೈವೇದ್ಯ ಅರ್ಪಿಸಲಾಗುವುದು. ನಂತರ ಗ್ರಾಮದ ಶ್ರೀ ಸಿದ್ದಬಸವೇಶ್ವರ ದೇವಸ್ಥಾನದಿಂದ 3 ಕಿ.ಮೀ ದೂರದ ಘಾಣದಕಲ್ ದೇವಸ್ಥಾನದ ವರೆಗೆ ಅದ್ದೂರಿ ಪಲ್ಲಕ್ಕಿ ಉತ್ಸವ ಜರುಗುತ್ತದೆ ಎಂದು ತಿಳಿಸಿದರು.
ಮಧ್ಯಾಹ್ನ 12 ರಿಂದ ಸಾಯಂಕಾಲದವರೆಗೆ ಪರ್ವ ನಿಮಿತ್ತ ದೇವಸ್ಥಾನ ಸದ್ಭಕ್ತ ಮಂಡಳಿ ತಯಾರಿಸುವ ಭಜ್ಜಿ ಪಲ್ಲೆ, ಜೋಳದ ಕಡಬು, ಜೋಳದ ರೊಟ್ಟಿ ಪ್ರಸಾದ ಸೇವೆ ಜರುಗುವುದು. ಸಂಜೆ ಘಾಣದಕಲ್ ದೇವಸ್ಥಾನದಿಂದ ಗ್ರಾಮದ ಸಿದ್ದಬಸವೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿ ಆಗಮಿಸುವುದು. ಪರ್ವಕ್ಕೆ ಕಲಬುರಗಿ ಜಿಲ್ಲೆ ಸೇರಿದಂತೆ ನೆರೆಯ ವಿವಿಧ ಜಿಲ್ಲೆಗಳಿಂದ ಹಾಗೂ ಜೇವರ್ಗಿ ತಾಲೂಕಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ ಎಂದು ಕೋಳಕೂರ ಗ್ರಾಮಸ್ಥರು, ಟ್ರಸ್ಟ್ ಕಮಿಟಿ ತಿಳಿಸಿದರು.