ಪೌರಕಾರ್ಮಿಕರು, ವಾಹನ ಚಾಲಕರು ಲೋಡರ್ಸ್, ಕ್ಲೀನರ್,ಗಳ ಒಕ್ಕೂಟದ ವತಿಯಿಂದ ನಗರಾಭಿವೃದ್ಧಿ ಸಚಿವ ಸುರೇಶ ಭೈರತಿ ಅವರಿಗೆ ಮನವಿ

ಪೌರಕಾರ್ಮಿಕರು, ವಾಹನ ಚಾಲಕರು ಲೋಡರ್ಸ್, ಕ್ಲೀನರ್,ಗಳ ಒಕ್ಕೂಟದ ವತಿಯಿಂದ ನಗರಾಭಿವೃದ್ಧಿ ಸಚಿವ ಸುರೇಶ ಭೈರತಿ ಅವರಿಗೆ ಮನವಿ

ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕರು, ವಾಹನ ಚಾಲಕರು ಲೋಡರ್ಸ್, ಕ್ಲೀನರ್,ಗಳ ಒಕ್ಕೂಟದ ವತಿಯಿಂದ ನಗರಾಭಿವೃದ್ಧಿ ಸಚಿವ ಸುರೇಶ ಭೈರತಿ ಅವರಿಗೆ ಮನವಿ

ಕಲಬುರಗಿ : ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ, ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್ಗಳಿಗೆ ನೇರಪಾವತಿ ಅಡಿಯಲ್ಲಿ ತಂದು ನೇರ ನೇಮಕಾತಿ ಮಾಡಿಕೊಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕರು, ವಾಹನ ಚಾಲಕರು ಲೋಡರ್ಸ್, ಕ್ಲೀರ‍್ಸ್ಗಳ ಒಕ್ಕೂಟದ ವತಿಯಿಂದ ನಗರಾಭಿವೃದ್ಧಿ ಸಚಿವ ಸುರೇಶ ಭೈರತಿ ಅವರಿಗೆ ಮನವಿ ಸಲ್ಲಿಸಿದರು.  

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್, ಕ್ಲೀನರ್ನ್ಸ್ಗಳಿಗೆ ನೇರ ಪಾವತಿ ಅಡಿಯಲ್ಲಿ ತಂದು ನೇರ ನೇಮಕಾತಿ ಮಾಡಿಕೊಳ್ಳಬೇಕೆಂದು, 2017-18ನೇ ಸಾಲಿನಲ್ಲಿ ಪೌರ ಕಾರ್ಮಿಕರಿಗೆ ಗುತ್ತಿಗೆ ಪದ್ಧತಿ ರದ್ದುಮಾಡಿ, ಖಾಲಿ ಇರುವ ಹುದ್ದೆಗಳಿಗೆ ಭರ್ತಿಮಾಡಿಕೊಂಡು, ಉಳಿದ ಬಾಕಿ ಹುದ್ದೆಗಳಿಗೆ ನೇರಪಾವತಿಯಡಿ ತರಬೇಕೆಂದು ತಾವು ಆದೇಶ ನೀಡಿದ್ದಿರಿ, ರಾಜ್ಯದ 30 ಜಿಲ್ಲೆಗಳಲ್ಲಿ ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿದ್ದು, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಪದ್ಧತಿ ಮುಂದುವರೆದಿದ್ದು ಬೇಸರದ ಸಂಗತಿ. ಕಲಬುರಗಿ ಮಹಾನಗರ ಪಾಲಿಕೆಯಲ್ಲಿನ ಗುತ್ತಿಗೆದಾರರು, ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ನಿರಂತರವಾಗಿ ಶೋಷಣೆ, ಮಾಡುತ್ತಿದ್ದಾರೆ.

ಪೌರಕಾರ್ಮಿಕರ ಹಿತದೃಷ್ಠಿಯಿಂದ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ನೇರ ನೇಮಕಾತಿ ಮತ್ತು ನೇರಪಾವತಿ ಅಡಿಯಲ್ಲಿ ತರಬೇಕೆಂದು ಪಾಲಿಕೆಯ ಆಯುಕ್ತರಿಗೆ ತಾವು ಸೂಚಿಸಬೇಕೆಂದು, ಕೇಳಿಕೊಳ್ಳುತ್ತೇವೆ. ಈಗಾಗಲೇ ಖಾಲಿ ಇರುವ ಹುದ್ದೆಗಳು ನೇರನೇಮಕಾತಿ 444 ನೇರ ಪಾವತಿ ಅಡಿಯಲ್ಲಿ 445 ಒಟ್ಟು 889 ಖಾಲಿ ಇರುವ ಹುದ್ದೆಗಳನ್ನು ಈ ಸಧ್ಯ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ನೇಮಕಾತಿ ಮಾಡಿಕೊಳ್ಳಬೇಕೆಂದು, ಕಲಬುರಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾನ್ಯ ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ಬೀದರ ಮಾದರಿ, ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘ (ನಿ.) ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು, ತಿರ್ಮಾನ ತೆಗೆದುಕೊಂಡಿದ್ದು ಇದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ. ಗುತ್ತಿಗೆ ಪದ್ದತಿ ರದ್ದುಪಡಿಸಿ, ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಮತ್ತು ನೇರಪಾವತಿ ಮಾಡಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇವೆ.

ಕಾರ್ಮಿಕರ ಹಕ್ಕೊತ್ತಾಯಗಳು :ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಪೌರಕಾರ್ಮಿಕರನ್ನು ಖಾಯಂಯಾತಿ ಮಾಡಬೇಕು, ಇ.ಎಸ್.ಐ ಮತ್ತು ಇ.ಪಿ.ಎಫ್ ಕ್ರಮಬದ್ಧ ಪ್ರತಿ ತಿಂಗಳು ಕಟಾವು ಮಾಡಬೇಕು, ಎಲ್ಲಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ (ಮಾಸ್ಟರ್ ಹೇಳ್ತ ಚೆಕಾಪ್) ಪ್ರತಿ ಮೂರು ತಿಂಗಳಿಗೊಮ್ಮೆ ಮಾಡಬೇಕು, ಎಲ್ಲಾ ಕಾರ್ಮಿಕರಿಗೆ ವಸತಿ ಭಾಗ್ಯ ನೀಡಬೇಕು, ಪ್ರತಿ ತಿಂಗಳು, 5ನೇ ತಾರಿಖಿನ ಒಳಗೆ ಮಾಸಿಕ ವೇತನ ನೀಡಬೇಕು, ವಾಹನ ಚಾಲಕರು, ಲೋಡರ್ಸ ಕ್ಲೀನರ್ಸಗಳನ್ನು ನೇರಪಾವತಿಯಡಿ ತಂದು ನೇರ ನೇಮಕಾತಿ ಮಾಡಿಕೊಳ್ಳಬೇಕು, ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕಲ್ಯಾಣ ಭವನ, ನಿರ್ಮಿಸಬೇಕು. ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಒಕ್ಕೂಟದ ಗೌರವಾಧ್ಯಕ್ಷ ಶರಣಪ್ಪ ಇಟಗಾ, ಅಧ್ಯಕ್ಷ ಶಿವಕುಮಾರ ಮುಡ್ಡಿ, ಉಪಾಧ್ಯಕ್ಷ ಶರಣು ಅತನೂರ, ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಚಕ್ರ, ಖಜಾಂಚಿ ತಿಮ್ಮಣ್ಣ ಬಳಿಚಕ್ರ, ಸಹ ಕಾರ್ಯದರ್ಶಿಗಳಾದ ಶಿವಕುಮಾರ ನಾಯಕೋಡಿ, ಮುಖಂಡರಾದ ರಾಜು ಎಸ್. ಕಟ್ಟಿಮನಿ, ಸಂತೋಷ ಧಾಡಿ ಸೇರಿದಂತೆ ಇತರರು ಇದ್ದರು.