ಯಡ್ರಾಮಿನಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಪದಾಧಿಕಾರಿಗಳ ನೇಮಕ
ಯಡ್ರಾಮಿನಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಪದಾಧಿಕಾರಿಗಳ ನೇಮಕ
ಯಡ್ರಾಮಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಸಭೆಯಲ್ಲಿ ಜೈ ಕರವೇ ತಾಲೂಕ ಅಧ್ಯಕ್ಷರಾದ ಅಮರನಾಥ ಸಾಹು ಕುಳಗೇರಿ ಅವರ ನೇತ್ರತ್ವದಲ್ಲಿ ಯಡ್ರಾಮಿ ನಗರ ಘಟಕದ ಅಧ್ಯಕ್ಷರನ್ನಾಗಿ ಕ್ರಷ್ಣಕುಮಾರ ತಳವಾರ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಡಿವಾಳ ಮೇಲಿನಮನಿ ಹಾಗೂ ನಗರ ಸಂಚಾಲಕರನ್ನಾಗಿ ಮುತ್ತು ಮುಳ್ಳೋಳ್ಳಿ ಅವರನ್ನು ನೇಮಿಸಿ ಆದೇಶ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅದ್ದೂರಿ ಕನ್ನಡಿಗರ ಸಮಾವೇಶವನ್ನು ತಾಲೂಕಿನಲ್ಲಿ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿ ಕುರಿತು ಐತಿಹಾಸಿಕವಾಗಿ ಆಯೋಜಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿಲಾಯಿತು.
ಇ ಸಂದರ್ಭದಲ್ಲಿ ಶಫೀವುಲ್ಲಾ ದಖನಿ,ಜೈ ಕರವೇ ತಾಲೂಕ ಸಂಚಾಲಕರಾದ ರಾಚೋಟಯ್ಯ ಹೀರೆಮಠ, ಲಾಳೇಸಾಬ ಮನಿಯಾರ,ಜೈ ಕರವೇ ತಾಲೂಕಯುವ ಘಟಕದ ಅಧ್ಯಕ್ಷರಾದ ಪ್ರಭುರಾವ ದೊರೆ ಸುಂಬಡˌಕಾಚಾಪೂರ ಗ್ರಾಮ ಘಟಕದ ಅಧ್ಯಕ್ಷರಾದ ಜಗದೀಶ ದ್ಯಾಮ್,ಸಂತೋಷ ಕುಲಕರ್ಣಿ,ಬಸವರಾಜ ಮಾಲಿಪಾಟೀಲ,ಅಕ್ಷಯಕುಮಾರ ಯಡ್ರಾಮಿ ಸೇರಿದಂತೆ ಜೈ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಜೆಟ್ಟೆಪ್ಪ ಎಸ್ ಪೂಜಾರಿ