ಅರ್ಧಾಂಗಿಗೆ ಅರ್ಪಿಸಿದ ವಿಶೇಷ ದಿನ – ಧರ್ಮಪತ್ನಿ ಮೆಚ್ಚುಗೆ ದಿನಾಚರಣೆ

ಅರ್ಧಾಂಗಿಗೆ ಅರ್ಪಿಸಿದ ವಿಶೇಷ ದಿನ – ಧರ್ಮಪತ್ನಿ ಮೆಚ್ಚುಗೆ ದಿನಾಚರಣೆ

ಅರ್ಧಾಂಗಿಗೆ ಅರ್ಪಿಸಿದ ವಿಶೇಷ ದಿನ – ಧರ್ಮಪತ್ನಿ ಮೆಚ್ಚುಗೆ ದಿನಾಚರಣೆ

ಕಲಬುರಗಿ: ಪ್ರತಿವರ್ಷ ಸೆಪ್ಟೆಂಬರ್ ಮೂರನೇ ರವಿವಾರವನ್ನು ಧರ್ಮಪತ್ನಿ ಮೆಚ್ಚುಗೆ ಅಥವಾ ಪ್ರಶಂಸನೀಯ ದಿನಾಚರಣೆ ಎಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಗೃಹಿಣಿಯರು ಮನೆ, ಮಕ್ಕಳು, ಕುಟುಂಬವೇ ತಮ್ಮ ಜಗತ್ತೆಂದು ಅಹರ್ನಿಶಿ ದುಡಿಯುವ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ದಿನವೆಂದು ಇದನ್ನು ಗುರುತಿಸಲಾಗಿದೆ.

ಈ ವಿಶೇಷ ದಿನದಂದು ವಿನೋದಕುಮಾರ ಜೆ. ಅವರು ತಮ್ಮ ಅರ್ಧಾಂಗಿಗೆ ಮೆಚ್ಚಿನ ವಸ್ತುಗಳು, ಬಟ್ಟೆ, ಆಹಾರ, ಪಾನೀಯ ನೀಡಿ ಸಂತೋಷ ಹಂಚಿಕೊಂಡರು. ಮನೆಯಿಂದ ವಾಹನದ ಮೂಲಕ ದೇವಸ್ಥಾನ ಹಾಗೂ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ, ನಗಿಸಿ ಖುಷಿ ನೀಡಿದರು. ನಂತರ ಚಹಾ ಸೇವಿಸಿ ಮತ್ತೆ ಮರಳಿ ಗೂಡಿಗೆ ಸೇರಿದರು.

ಮುಖದಲ್ಲಿ ಅರಳಿದ ಸಂತೋಷದಿಂದ ಧರ್ಮಪತ್ನಿವು “ನೀನು ಬಯಸುವ ಎಲ್ಲಾ ಕಾರ್ಯಗಳಲ್ಲಿ ನಾನು ನಿನ್ನೊಂದಿಗೆ” ಎಂದು ಹೇಳಿದ ಕ್ಷಣ ಗಂಡಂದಿರಿಗೆ ಅವಿಸ್ಮರಣೀಯ ಆನಂದವನ್ನು ನೀಡುತ್ತದೆ.