ಚಂದು ಪಾಟೀಲ, ಉಮೇಶ ಪಾಟೀಲ, ದೇವೇಂದ್ರ ದೇಸಾಯಿ ಕಲ್ಲೂರ ಅವರಿಗೆ ಸನ್ಮಾನ

ಚಂದು ಪಾಟೀಲ, ಉಮೇಶ ಪಾಟೀಲ, ದೇವೇಂದ್ರ ದೇಸಾಯಿ ಕಲ್ಲೂರ ಅವರಿಗೆ ಸನ್ಮಾನ
ಕಲಬುರಗಿ : ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಘಟಕ ಮಾತೃ ಘಟಕ ಮತ್ತು ಯುವ ಘಟಕ ವತಿಯಿಂದ ಭಾರತೀಯ ಜನತಾ ಪಕ್ಷದ ಉತ್ತರ ವಲಯ ಕಚೇರಿಯಲ್ಲಿಭಾರತೀಯ ಜನತಾ ಪಕ್ಷದ ಕಲಬುರಗಿ ನಗರದ ಜಿಲ್ಲಾಧ್ಯಕ್ಷ ಚಂದು ಪಾಟೀಲವರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಸಮಾಜದ ದೇವೇಂದ್ರ ದೇಸಾಯಿ ಕಲ್ಲೂರ ಅವರನ್ನು ಕಲಬುರಗಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ನಗರದ ಓಬಿಸಿ ಮೋರ್ಚಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಈ ಸನ್ಮಾನ ನಡೆಯಿತು. ಇದೇ ಸಂದರ್ಭದಲ್ಲಿ ದೇವೇಂದ್ರ ದೇಸಾಯಿ ಕಲ್ಲೂರ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ ವಿಶ್ವಕರ್ಮ ಕಲ್ಲೂರ, ಸುಧಾಕರ್ ಪೋದಾರ್ ಹರಸೂರ, ಕಮಲಾಕರ ವಿಶ್ವಕರ್ಮ ಅರಣಕಲ, ವಿಶ್ವನಾಥ ವಿಶ್ವಕರ್ಮ ಹಣಕುಣ , ದೇವಿಂದ್ರ ವಿಶ್ವಕರ್ಮ ಹೆರೂರ, ಶಿವಾನಂದ ವಿಶ್ವಕರ್ಮ ಕಲ್ಲೂರ, ಶ್ರೀಕಾಂತ್ ವಿಶ್ವಕರ್ಮ ಕುಂದುಗೋಳ, ಸಾಗರ್ ಸ್ವಾಮಿ ವಿಶ್ವಕರ್ಮ, ನಾಗರಾಜ್ ವಿಶ್ವಕರ್ಮ, ರುದ್ರೇಶ್ ವಿಶ್ವಕರ್ಮ ಹೇರೂರ, ಗುಂಡಣ್ಣ ವಿಶ್ವಕರ್ಮ ಹೂವಿನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.