ಮೀಡಿಯಾಗಳು ಮಿಂಡ್ರಿಯಗಳಾಗಬಾರದು ಪ್ರೆಸ್ ಪ್ರೊಸ ಆಗಬಾರದು-ಡಾ ಶಿವರಾಜ ಪಾಟೀಲ ಕುಲಾಲಿ

ಮೀಡಿಯಾಗಳು ಮಿಂಡ್ರಿಯಗಳಾಗಬಾರದು ಪ್ರೆಸ್ ಪ್ರೊಸ ಆಗಬಾರದು-ಡಾ ಶಿವರಾಜ ಪಾಟೀಲ ಕುಲಾಲಿ
ಪ್ರಜಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಶಾಸಕಾಂಗ ಕಾರ್ಯಾಂಗದಷ್ಟೇ ಪ್ರಮುಖವಾದದ್ದು ಪತ್ರಿಕಾ ರಂಗ ಆದರೆ ಇಂದು ಭಾರತದ ಪತ್ರಿಕೋದ್ಯಮ ದಾರಿತಪ್ಪಿ ದಿಕ್ಕು ದೆಶೆ ಇಲ್ಲದೆ ಒದ್ದಾಡುತ್ತಿದೆ ತನ್ನ ಸಿದ್ದಾಂತಕ್ಕೆ ಬದ್ಧತೆ ಇಲ್ಲದೆ ನಲಗುತ್ತಿದೆ ನೋಡುವವರ ಕಣ್ಣಿಗೆ ಮೀಡಿಯಾಗಳು ಮಿಂಡ್ರಿಯಗಳಾಗಿವೆ ಪ್ರೆಸ್ಸುಗಳು ಪ್ರಾಸ್ ಗಳಂತೆ ಕೆಲಸ ಮಾಡುತ್ತಿವೆ ಅವು ಇಂದು ಫುಟಿಪಾತಿಗೆ ಬಂದಿವೆ ಪತ್ರಿಕೋದ್ಯಮದ ಮೂಲಕ ಹಣ ಗಳಿಸಲು ಹೊರಟಿದೆ ಇದರಿಂದ ದೇಶದ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಪತ್ರಿಕೆಗಳು ಪ್ರಜೆಗಳ ಧ್ವನಿಯಾಗದೆ ಜನರ ಧ್ವನಿ ಸರಕಾರಕ್ಕೆ ಮುಟ್ಟಿಸದೆ ವಾಸ್ತವ ಸಂಗತಿಗೆ ಮಣ್ಣೆರೆಚಿ ಸುಳ್ಳನ್ನು ವೈಭವೀಕರಿಸುತ್ರಿವೆ ಹೀಗಾಗಿ ಶ್ರೀಸಾಮಾನ್ಯರಿಗೆ ಅನ್ಯಾಯ ಮಾಡುತ್ತಿವೆ ಕೇವಲ ಸರ್ಕಾರದ ಸುದ್ದಿಯನ್ನು ಪ್ರಕಟಿಸುವ ಮೂಲಕ ಅಧಿಕಾರದಲ್ಲಿರುವವರನ್ನು ಓಲೈಸುವುದು ಉಳ್ಳವರ ಪರವಾಗಿ ಬರೆಯುವದು ತಮ್ಮ ಪತ್ರಿಕೋದ್ಯಮಕ್ಕೆ ನೆರವು ನೀಡುವ ಜಾಹೀರಾತು ಮೂಲಕ ರೆವುನೂ ಕೊಡುವ ಶ್ರೀಮಂತರನ್ನು ಒ ಲಿಸಿಕೊಳ್ಳುವುದು ಅವರ ಪರವಾಗಿ ಬರೆಯುವದು ಮತ್ತು ಮಾತನಾಡುವುದು ಕಲಿತಿವೆ ಹೀಗಾಗಿ ಪತ್ರಿಕಾ ರಂಗ ತನ್ನ ಮುಖ್ಯ ಉದ್ದೇಶದಿಂದ ವಂಚಿತವಾಗಿದೆ ಆರ್ ಎನ್ ಐ ನಿಯಮಗಳನ್ನು ಗಾಳಿಗೆ ತೂರಿವೆ ಹಣ ಗಳಿಕೆ ಅವುಗಳ ಪ್ರಮುಖ ಉದ್ದೇಶ ಮತ್ತು ಉಸಿರಾಗಿದೆ ಭಾರತದ ಪತ್ರಿಕೋದ್ಯಮ ಬ್ರೆಡ್ ಬಿಸ್ಕಿಟ್ಟಿಗಾಗಿ ಬಡದಾಡುತ್ತಿವೆ ಸಾಮಾಜಿಕ ಸುಧಾರಣೆ ಪ್ರಗತಿ ಬದಲಾವಣೆ ಅವುಗಳಿಗೆ ಬೇಕಾಗಿಲ್ಲ ತಮ್ಮ ಉಳಿವಿಗಾಗಿ ಹೋರಾಟ ನಡೆಸಿದೆ. ಮಾಧ್ಯಮಗಳು ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳುವಲ್ಲಿ ಪತ್ರಿಕೆಗಳು ಜಾಹೀರಾತು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿವೆ ಅದಕ್ಕಾಗ ಹಗಲಿರಳು ಶ್ರಮಿಸುತ್ತಿವೆ ಕೊಟ್ಟವರ ಪರವಾಗಿ ಬಾಜಿ ಬಾಜಾಾಯಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿವೆ ಇಲ್ಲದವರ ದನಿ ಕುಗ್ಗಿಸುತ್ತಿವೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಆತ್ಮಬಲ ಕುಗ್ಗಿಸಿ ನಾಶಗೊಳಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿವೆ ಹೀಗಾಗಿ ನೇಪಾಳದಲ್ಲಿ ಇತ್ತೀಚಿಗೆ ನಡೆದ ಮಾಧ್ಯಮ ಮತ್ತು ಪತ್ರಿಕೆಗಳ ಮೇಲಿನ ಪ್ರಹಾರ ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಮರುಕಳಿಸುವ ಸಮಯ ದೂರವಿಲ್ಲ ಈ ಸಂದರ್ಭದಲ್ಲಿ ಪತ್ರಿಕಾ ರಂಗದ ಪ್ರಮುಖರನ್ನು ಮಾಧ್ಯಮದ ಮುಖ್ಯಸ್ಥರನ್ನು ಅಟ್ಟಾಡಿಸಿ ಹೊಡೆಯುವ ಕಾಲ ದೂರವಿಲ್ಲ ಎಲ್ಲರ ಸಹನಶೀಲತೆಗೂ ಒಂದು ಮಿತಿ ಇದೆ ಯಾವುದೇ ವಿಷಯ ಮಿತಿ ಮೀರಿ ಅತಿಯಾದಾಗ ಅದು ತನ್ನಿಂದ ತಾನೇ ನಿಸರ್ಗ ನಿರ್ಣಯ ತೆಗೆದುಕೊಳ್ಳುತ್ತದೆ ನೆರೆ ರಾಷ್ಟ್ರಗಳಾದ ಶ್ರೀಲಂಕಾ ಬಾಂಗ್ಲಾ ಮತ್ತು ನೇಪಾಳದಲ್ಲಿ ಆದ ಘಟನೆ ನಮ್ಮ ಕಣ್ಣ ಮುಂದೆ ನಡೆದ ನೀದರ್ಶನಗಳಾಗಿವೆ. ನೇಪಾಳದ ಮಾಧ್ಯಮಗಳು ಮತ್ತು ಪತ್ರಿಕೆಗಳು ದಾರಿತಪ್ಪಿ ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನೇಪಾಳದ ಯುವಕರು ಸಿಡಿದೆದ್ದ ಹಾಗೆ ಭಾರತದಲ್ಲಿನ ಯುವಕರು ಸಿಡಿ ದೇಳುವ ಕಾಲ ದೂರವಿಲ್ಲ ಹಸಿವೆ ಬಡತನ ಅನಕ್ಷರತೆ ನಿರುದ್ಯೋಗ ಇವು ಯಾವ ಮಟ್ಟಕ್ಕೆ ಇಳಿಯಲು ಮತ್ತು ಕೆಲಸವನ್ನು ಮಾಡಲು ಹೇಸುವುದಿಲ್ಲ ಇವುಗಳ ನಿವಾರಣೆಯನ್ನು ಮಾಡುವುದು ಬಿಟ್ಟು ಸರ್ಕಾರ ತುಟಿಗೆ ತುಪ್ಪ ಹಚ್ಚುವ ಮೂಲಕ ರಾಮ್ ಹಿಂದುತ್ವ ಧಾರ್ಮಿಕತೆ, ಮುಂತಾದವುಗಳನ್ನು ಭಾವನಾತ್ಮಕವಾಗಿ ಬಿಂಬಿಸುವುದರ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ ಜಾತ್ಯತೀತ ಸಂವಿಧಾನವನ್ನು ಇರಿಸಿಕೊಂಡು ಜಾತಿ ಸಮೀಕ್ಷೆ ನಡೆಸಿದ ಸರ್ಕಾರ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಇದರಿಂದ ಬದಲಾವಣೆ ಸಾಧ್ಯವೇ ಇಲ್ಲ ಜಾದೂ ಮಾಡಿದ ಹಾಗೆ ನಾವು ಏನನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ ಇದು ಬಹುದಿನಗಳ ಕಾಲ ನಡೆಯದು ಆದ್ದರಿಂದ ಮೀಡಿಯಾಗಳು ಮತ್ತು ಪತ್ರಿಕೆಗಳು ಸರಿದಾರಿಗೆ ಬರಬೇಕು ಬರದಿದ್ದರೆ ಜನರೇ ಅವುಗಳನ್ನು ಸರಿದಾರಿಗೆ ತರುವದು ಅನಿವಾರ್ಯವಾಗುತ್ತದೆ ಇತ್ತೀಚಿಗೆ ಜರುಗಿದ ನೇಪಾಳದ ಘಟನೆಯನ್ನು ನಿದರ್ಶನವಾಗಿಟ್ಟುಕೊಳ್ಳಬಹುದು ಪ್ರೊ ಶಿವರಾಜ್ ಪಾಟೀಲ್ ಚಿಂತಕರು