ಕನ್ನಡ ಜಾಗೃತಿ ಸಮಿತಿಗೆ ಡಾ ಶರಣಬಸವಪ್ಪ ವಡ್ಡನಕೇರಿ ಸೇರಿದಂತೆ 5 ಜನರಿಗೆ ನೇಮಕ

ಕನ್ನಡ ಜಾಗೃತಿ ಸಮಿತಿಗೆ ಡಾ ಶರಣಬಸವಪ್ಪ ವಡ್ಡನಕೇರಿ ಸೇರಿದಂತೆ 5 ಜನರಿಗೆ ನೇಮಕ
ಕಲಬುರಗಿ : ಕರ್ನಾಟಕ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ,ಕನ್ನಡ ಜಾಗೃತಿ ಸಮಿತಿ ಕಲಬುರಗಿ ಜಿಲ್ಲೆ ಸದಸ್ಯರನ್ನಾಗಿ ಡಾ ಶರಣಬಸವಪ್ಪ ವಡ್ಡನಕೇರಿ,ನಂದಿನಿ ಸುರೇಂದ್ರ ಸನಬಾಲ್,ಡಾ. ಮಾಜೀದ ಡಾಗೆ,ಮಂಜುನಾಥ,ಕಾಶಿನಾಥ
ಅವರನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ,ಸರಕಾರದ ಅಧೀನ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆ.ಆರ್.ರಮೇಶ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಯಾ ವಿಧಾನಸಭಾ ಮತಕ್ಷೇತ್ರಗಳಿಗೆ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಡಾ ಶರಣಬಸವಪ್ಪ ವಡ್ಡನಕೇರಿ ಸೇರಿದಂತೆ ಐದು ಜನ ಸಾಹಿತಿಗಳನ್ನು ನಾಮನಿರ್ದೇಶನ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಆದೇಶದ ಪ್ರೀತಿಯನ್ನು ಕೆಳಗಡೆ ಫೈಲ್ ಇದೆ ಡೌನ್ಲೋಡ್ ಮಾಡಿಕೊಳ್ಳಿ