ಉಮೇಶ್ ಮುದ್ನಾಳ ಹೋರಾಟದ ಎಚ್ಚರಿಕೆ ಗೆ ವಡಿಗೇರಿ ತಾಲೂಕಾಡಳಿತ ಸ್ಪಂದನೆ
ಉಮೇಶ್ ಮುದ್ನಾಳ ಹೋರಾಟದ ಎಚ್ಚರಿಕೆ ಗೆ ವಡಿಗೇರಿ ತಾಲೂಕಾಡಳಿತ ಸ್ಪಂದನೆ
ಗಣೇಶ್ ಚತುರ್ಥಿ ನಂತರ ಅಕ್ರಮ ಡಬ್ಬಿ ಮೂರ್ತ ಪೀಕ್ಸ್ ಉಮೇಶ್ ಮುದ್ನಾಳ ಹರ್ಷ
ಯಾದಗಿರಿ/ ವಡಗೇರಾ: ಪಟ್ಟಣದ ಅಗಸಿಯಿಂದ ಪಂಚಾಯತಿ ಮತ್ತು ಪೊಲೀಸ್ ಠಾಣೆವರೆಗೆ ರಸ್ತೆಯಲ್ಲಿ ಪಾದಚಾರಿಗಳ ಪರದಾಟ, ಅಕ್ರಮ ಡಬ್ಬಿ ಅಂಗಡಿಗಳ ಅಟ್ಟಹಾಸ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವಹಿಸಿದ್ದು, ಗ್ರಾಮ ಪಂಚಾಯತ್ ಕಚೇರಿಗೆ ಜಾಲಿ ಮುಳ್ಳು ಕಂಟಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಎಚ್ಚರಿಕೆ ನೀಡಿದ ಹಿನ್ನೆಲೆ ಗುರುವಾರ ಸಂಜೆ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕಾಧಿಕಾರಿ ಮಲ್ಲಿಕಾರ್ಜುನ ಸಂಗವಾರ್ ಮತ್ತು pwd AEE ಸೂಗರೆಡ್ಡಿ, ಪಿಎಸ್ಎ ಮೈಬೂಬ್ ಅಲಿ, ಪಿಡಿಓ ಶರಣಗೌಡ, ಮತ್ತು ಬಸವರಾಜ ಇಟ್ಟಿಗಿ ಸೇರಿದಂತೆ ಅನೇಕರು ವಡಗೇರಾ ಅಗಸಿಯಲ್ಲಿ ಬರುವಂತಹ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಪರಿಶೀಲನೆ ಮಾತಾನಾಡಿದ ತಾಲೂಕು ಪಂಚಾಯತ ಇಓ ಅವರು ಚರಂಡಿ ಸ್ವಚ್ಚತೆ, ಬೀದಿ ದೀಪ್ ಸಿಸಿ ಕ್ಯಾಮರಾ, ಶೌಚಾಲಯ, ತರಕಾರಿ ಮಾರುಕಟ್ಟೆ, ಆಟೋ ನಿಲ್ದಾಣ, ಇವೆಲ್ಲವುಗಳನ್ನು ಮೂಲಭೂತ ಸೌಕರ್ಯಗಳನ್ನು ಗಣೇಶ ಚತುರ್ಥಿ ಹಬ್ಬ ನಂತರ ಅಕ್ರಮ ಡಬ್ಬಿ ತೆರವುಗೊಳಿಸುವುದಾಗಿ ಹೇಳಿದರು.
ನಂತರ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಮಾತಾನಾಡಿ ತಾಲೂಕಿನ ಕೇಂದ್ರವಾಗಿ ಇಷ್ಟು ವರ್ಷವಾದರು ತಾಲ್ಲೂಕು ಅಭಿವೃದ್ಧಿ ಹೊಂದದೇ ಇನ್ನೂ ಹಲವು ಸಮಸ್ಯೆಗಳಿಂದ ಇಲ್ಲಿಯ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಇದನ್ನು ಗಮನಗೊಂಡು ನಾನು ವಡಗೇರಾ ತಾಲೂಕಿನಲ್ಲಿ ಅಕ್ರಮವಾಗಿ ಡಬ್ಬಿಗಳು ರಸ್ತೆ ಬದಿಗಳಲ್ಲಿ ಇಟ್ಟಿರುವ ಹಿನ್ನೆಲೆಯಲ್ಲಿ ನನ್ನ ಹೋರಾಟದ ಎಚ್ಚರಿಕೆಗೆ ಸ್ಪಂದಿಸಿದ ಅಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಿಸಿದರು.
ಇಲ್ಲಿಗೆ ನನ್ನ ಹೋರಾಟ ಕೈ ಬೀಡುವುದಿಲ್ಲ ಈ ಎಲ್ಲ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿಯಬೇಕು ಇಲ್ಲದಿಂದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ವರದಿಗಾರ ಶರಣಪ್ಪ ಸಾವೂರ