ಡೆಂಗ್ಯೂ ಮೆನಿಂಗೋಎನ್ಸೆಫಲೈಟಿಸ್ ರೋಗಿಯ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಡೆಂಗ್ಯೂ ಮೆನಿಂಗೋಎನ್ಸೆಫಲೈಟಿಸ್ ರೋಗಿಯ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಡೆಂಗ್ಯೂ ಮೆನಿಂಗೋಎನ್ಸೆಫಲೈಟಿಸ್ ರೋಗಿಯ ಜೀವ ಉಳಿಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಕಲಬುರ್ಗಿ:ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮಾರಕ ಡೆಂಗ್ಯೂ ಮೆನಿಂಗೋಎನ್ಸಫಲೈಟಿಸ್ ನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಲಬುರ್ಗಿಯ ಇಬ್ರಾಹಿಂಪೂರ ನಿವಾಸಿಯಾಗಿರುವ ಅಭಿಷೇಕ ಎಂಬ 25 ವರ್ಷದ ಯುವಕ ಬ ಅತಿಯಾದ ಮೆದುಳಿನ ಜ್ವರದಿಂದ ಬಳಲುತ್ತಿದ್ದು ಅವನ ಕುಟುಂಬದವರು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯ ವೈದ್ಯ ಸಿಬ್ಬಂದಿ ಅವನನ್ನು ಪರೀಕ್ಷಿಸಿದಾಗ ಅವನಿಗೆ ಅಪಾಯಕಾರಿ ವೈರಲ್ ಮೆನಿಂಗೋಎನ್ಸಪೇಲೈಟಿಸ್,ಹೈಪೋವೋಲೆಮಿಕ್ ಶಾಕ್,ಥ್ರೋಂಬೋಸೈಟೋಪಿನಿಯಾ ಮತ್ತು ಉಸಿರಾಟದ ತೊಂದರೆ ಇರುವುದು ತಿಳಿಯಿತು. ಅವರು ಅತಿಯಾದ ಜ್ವರದೊಂದಿಗೆ ಕೋಮಾ ಸ್ಥಿತಿಯಲ್ಲಿ ಇದ್ದರು.ಕಡಿಮೆ ಬಿಪಿ ಹಾಗೂ ಆಮ್ಲಜನಕ ಮಟ್ಟ ತೀವ್ರ ಕುಸಿದಿತ್ತು ಕೂಡಲೆ ಆಸ್ಪತ್ರೆಯ ನುರಿತ ವೈದ್ಯರಾದ ಡಾ ಸುರೇಶ್ ಹರಸೂರ ಅವರ ಮಾರ್ಗದರ್ಶನದಲ್ಲಿ ವೆಂಟಿಲೇಟರ್ ಇನೋಟ್ರೋಪಗಳ ಸಹಾಯದಿಂದ ICCU ಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲು ಆರಂಭಿಸಲಾಯಿತು.

ನಂತರ ಕಾನ್ಟ್ರಾಂಸ್ಟ ಎಂ ಆರ್ ಐ ಮಾಡಿದಾಗ ಮೆನಿಂಜಿಯಲ್ ಎನ್ಹಾನ್ಸಮೆಂಟ್ ಕಂಡು ಬಂದಿತು. ಮತ್ತು ಜ್ವರದ ಪರೀಕ್ಷೆಯಲ್ಲಿ ಡೆಂಗ್ಯೂ ಧೃಡ ಪಟ್ಟಿತು. ಪ್ಲೇಟ್ಲೆಟ್ ಸಂಖ್ಯೆ ಅಪಾಯಕಾರಿ ಸ್ಥೀತಿಯಲ್ಲಿ ಕಡಿಮೆಯಾಗಿತ್ತು. ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಸೂಕ್ಷ್ಮವಾಗಿ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲಾಯಿತು ಇದರಿಂದಾಗಿ ಅವರ ಅಪಾಯಕಾರಿ ಆಮ್ಲಜನಕ ಮಟ್ಟ ಏರಿಕೆ ಕಂಡು ಸಾಮಾನ್ಯ ಸ್ಥಿತಿಗೆ ತಲುಪಿದಾಗ ವೆಂಟಿಲೇಟರ್ ರಿಂದ ಮುಕ್ತಗೊಳಿಸಿ ಚಿಕಿತ್ಸೆ ಮುಂದುವರಿಸಲಾಯಿತು ಅಪಾಯಕಾರಿ ಸ್ಥಿತಿಯಲ್ಲಿದ್ದ ರೋಗಿ ಚಿಕಿತ್ಸೆಗೆ ಸ್ಪಂದಿಸಿ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.

ಈ ವೈದ್ಯಕೀಯ ಸೇವೆ ನೀಡಿದ ತಂಡದಲ್ಲಿ ಯುನಿಟ್ ಮುಖ್ಯಸ್ಥರಾದ ಡಾ ಸುರೇಶ್ ಹರಸೂರ,ಡಾ ಶರಣಬಸಪ್ಪ ನಂದ್ಯಾಳ,ಡಾ ಸ್ವೇತಾ, ಡಾ ಶರದ್ ಬಿರಾದಾರ ಐಸಿಯು ತಂಡದ ನೇತೃತ್ವ ಡಾ ಸೋಹೈಲ್ ಹಾಗೂ ಪಿಜಿ ವಿದ್ಯಾರ್ಥಿಗಳು ಇದ್ದರು

ಇಂತಹ ಅಪಾಯಕಾರಿ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಿ ಗುಣಮುಖ ಮಾಡಿದ ಆಸ್ಪತ್ರೆಯ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ವೈದ್ಯಕೀಯ ಅಧೀಕ್ಷಕರಾದ ಡಾ ಆನಂದ ಗಾರಂಪಳ್ಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.